ಯುವಜನತೆ ಕೃಷಿ ಕ್ಷೇತ್ರ ತೊರೆಯುತ್ತಿದ್ದಾರೆ: ಎಸ್‌.ಪಿ.ಕಾಮತ್‌

0
28
loading...

ಕನ್ನಡಮ್ಮ ಸುದ್ದಿ-ಕಾರವಾರ: ತಾಲೂಕಾ ಮಟ್ಟದ ಕೃಷಿ ರಸಪ್ರಶ್ನೆ ಕಾರ್ಯಕ್ರಮ ಶುಕ್ರವಾರ ನಗರದ ಹಿಂದೂ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆನರಾ ವೆಲ್‌ಫೇರ್‌ ಟ್ರಸ್ಟ್‌ನ ಅಧ್ಯಕ್ಷ ಎಸ್‌.ಪಿ.ಕಾಮತ್‌ ಕೃಷಿ ಉತ್ತರ ಕನ್ನಡದ ಯುವಜನತೆ ಕೃಷಿ ಕ್ಷೇತ್ರ ತೊರೆಯುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೃಷಿ ಬಿಡಲು ಸಾಧ್ಯವಿಲ್ಲ. ಹೊಟ್ಟೆಗೆ ಅನ್ನ ನೀಡುವುದೇ ಕೃಷಿಯಾಗಿದೆ. ಯುವ ಜನತೆಯಲ್ಲಿ ಕೃಷಿ ಬಗ್ಗೆ ಒಲವು ಮೂಡಿಸಲು ಪ್ರಯತ್ನ ನಡೆಸುತ್ತಿರುವ ಸ್ವರ್ಣವಲ್ಲೀ ಮಠದ ಕಾರ್ಯ ಶ್ಲಾಘನೀಯ ಎಂದರು.
ಮಕ್ಕಳಲ್ಲಿ ಕೃಷಿ ಬಗ್ಗೆ ಒಲವು ಮೂಡಿಸಲು ಕೃಷಿ ರಸಪ್ರಶ್ನೆ ಕಾರ್ಯಕ್ರಮವನ್ನು 2008ರಿಂದ ಸಂಘಟಿಸಲಾಗುತ್ತಿದೆ. ಮಠದ ಲಕ್ಷ್ಮೀನರಸಿಂಹ ದೇವರ ರಥೋತ್ಸವವನ್ನು ಕೃಷಿ ಜಯಂತಿ ಎಂದೇ ಶ್ರೀಮಠದಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿಯ ಅನಂತ ಅಶೀಸರ, ಫೆ.27, 28ರಂದು ಶ್ರೀಮಠದಲ್ಲಿ ಕೃಷಿ ಜಯಂತಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ತಾಲೂಕಾ ಮಟ್ಟದಲ್ಲಿ ಕೃಷಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದ್ದು, ಇಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಶ್ರೀಗಳ ಸೂಚನೆಯ ಮೇರೆಗೆ ಭಗವದ್ಗೀತೆ ಅಭಿಯಾನ, ವ್ಯಸನ ಮುಕ್ತ ಸಮಾಜ, ವೃಕ್ಷಲಕ್ಷ ಆಂದೋಲನ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ತಾಲೂಕಾ ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ಪವಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯಕ, ಹಿಂದೂ ಪ್ರೌಢಶಾಲೆಯ ಆಡಳಿತಾಧಿಕಾರಿ ಜಿ.ಪಿ.ಕಾಮತ್‌, ಮುಖ್ಯಾಧ್ಯಾಪಕ ಅರುಣ ರಾಣೆ, ಹಿಂದೂ ಸಂಘಟನೆಯ ಪ್ರಮುಖ ಬಿ,ಜಿ,ಮೋಹನ್‌, ಸಂಘಟಕ ಆರ್‌.ಜಿ.ಹೆಗಡೆ, ಸಂಚಾಲಕ ಚಯರಾಮ್‌ ಭಟ್‌ ಉಪಸ್ಥಿತರಿದ್ದರು.

loading...