ಯುವ ಪೀಳಿಗೆಗೆ ಸ್ವಚ್ಛ ಭಾರತದ ಅರಿವು ಅಗತ್ಯ: ಶಾಸಕ ಶಿವಾನಂದ

0
17
loading...

ಕನ್ನಡಮ್ಮ ಸುದ್ದಿ-ಆಲಮಟ್ಟಿ: ಯುವ ಪೀಳಿಗೆಗೆ ಸ್ವಚ್ಛ ಭಾರತದ ಅರಿವು ಮೂಡಿಸಿ, ಅದಕ್ಕಾಗಿ ಜಾಗೃತಿ ಕಾರ್ಯಕ್ರಮ ಏರ್ಪಡಿಸುವ ಹಂತಕ್ಕೆ ಬಂದು ತಲುಪಿದೆ ಎಂದು ಶಾಸಕ ಶಿವಾನಂದ ಪಾಟೀಲ ವಿಷಾದಿಸಿದರು.
ಆಲಮಟ್ಟಿಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಹಾಗೂ ಕ.ರಾ.ಸ.ನೌ. ಸಂಘದ ಯೋಜನಾ ಶಾಖೆ ಆಲಮಟ್ಟಿಯ ಆಶ್ರಯದಲ್ಲಿ ಹಮ್ಮಿಕೊಂಡ ಎರಡು ದಿನದ ಬೃಹತ್‌ ಸ್ವಚ್ಛತಾ ಆಂದೋಲನಕ್ಕೆ ಗಾಂಧಿ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಚಾಲನೆ ನೀಡಿ, ಇಲ್ಲಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಚ್ಛತೆ ಎನ್ನುವುದು ನಿರಂತರ ಪ್ರಕ್ರಿಯೆ, ಯಾವುದೇ ಒಂದು ಕಾಮಗಾರಿಯನ್ನು ಒಂದು ಸಮಯದಲ್ಲಿ ಪೂರ್ಣಗೊಳಿಸಬಹುದು, ಆದರೆ ಸ್ವಚ್ಛತೆ ಎನ್ನುವುದು ನಿರಂತರ ಪ್ರಕ್ರಿಯೆ, ಇದು ನಮ್ಮ ದಿನನಿತ್ಯದ ಜೀವನದ ಭಾಗವಾಗಬೇಕು, ಕೇವಲ ನಮ್ಮ ಮನೆ, ಸ್ವಚ್ಛವಾಗದೇ ಇಡೀ ರಸ್ತೆಯ ಶುಚಿತ್ವಕ್ಕೂ ಕೈ ಜೋಡಿಸಬೇಕಿದೆ, ಸ್ವಚ್ಛತೆಯ ನಿಜವಾದ ರೂವಾರಿಗಳು ಪೌರ ಕಾರ್ಮಿಕರು ಎಂದು ಅವರು ಅಭಿಪ್ರಾಯಪಟ್ಟರು.
ಕೇವಲ ಕಾಗದದಲ್ಲಿ ಮಾತ್ರ ಬಹಿರ್ದೆಸೆ ಮುಕ್ತ ಗ್ರಾಮಗಳಾಗುತ್ತಿವೆ, ಪ್ರತಿ ಗ್ರಾಮದಲ್ಲಿಯೂ ಶೌಚಾಲಯಗಳು ನಿರ್ಮಾಣಗೊಂಡರೂ ಹೆಚ್ಚಿನ ಜನರು ಬಹಿರ್ದೆಸೆಗೆ ಹೋಗುತ್ತಿದ್ದಾರೆ, ಹೀಗಾದರೆ ಗ್ರಾಮೀಣ ಭಾರತ ಪ್ರಗತಿ ಸಾಧಿಸುವುದು ಹೇಗೆ? ಎಂದು ವಿಷಾದ ವ್ಯಕ್ತಪಡಿಸಿದರು.
ಆಲಮಟ್ಟಿ ಭಾಗದಲ್ಲಿ ಸರ್ಪಗಳು ಮೇಲಿಂದ ಮೇಲೆ ಕಾಣಸಿಗುತ್ತಿವೆ, ಹೀಗಾಗಿ ಸರ್ಪಗಳನ್ನು ಹಿಡಿಯುವ ಉರಗ ಪ್ರೇಮಿ ಶ್ರೀಶೈಲ ಸೊನ್ನದ ಹಾಗೂ ಲಕ್ಷ್ಮಣ ಕುಂಚನೂರ ಅವರಿಗೆ ಸರ್ಪಗಳಿಗೆ ಹಾನಿಯಾಗದಂತೆ ಸರ್ಪ ಹಿಡಿಯುವ ಸ್ಟಿಕ್‌ ನೀಡಲಾಯಿತು.
ವೇದಿಕೆಯ ಮೇಲೆ ಅಧೀಕ್ಷಕ ಎಂಜಿನಿಯರ್‌ ಎಸ್‌.ಎಚ್‌. ಮಂಜಪ್ಪ, ವಿ.ಕೆ. ಪೋತದಾರ, ಪ್ರಧಾನ ಮುಖ್ಯ ಲೆಕ್ಕಾಧಿಕಾರಿ ಕೆ.ಎನ್‌. ಗಂಗಾಧರ, ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಎಂ.ಎಸ್‌. ಇನಾಮದಾರ, ಶಶಿಕಾಂತ ಹೊನವಾಡಕರ, ಬಿ.ಎಸ್‌. ಪಾಟೀಲ, ಡಿಎಫ್‌ಓ ಪಿ.ಕೆ. ನಾಯಕ, ಬಿ.ಟಿ.ಗೌಡರ, ಜುಬೇರ್‌ ಕೆರೂರ, ಡಾ ವಿ.ವೈ. ರತ್ನಾಕರ, ಸಹಾಯಕ ಆಡಳಿತಾಧಿಕಾರಿ ಎಂ.ಎಂ. ಲಕ್ಕುಂಡಿ, ಎಚ್‌.ಎಚ್‌. ದೊಡಮನಿ, ಜಿ.ಎಂ. ಕೊಟ್ಯಾಳ, ಎಂ.ಆರ್‌. ಮಕಾನದಾರ, ಯಶವಂತ ಮರಡಿ, ಹೊನಕೇರಪ್ಪ ಸುರಪುರ, ಬಸವರಾಜ ಪಾರಗೊಂಡ, ಬಿ.ಜಿ. ಬನ್ನೂರ, ಬಾಳೇಶ ತಳವಾರ, ಪಿಎಸ್‌ಐ ಶಶಿಕಲಾ ಕೊಲ್ಹಾರ ಮೊದಲಾದವರು ವೇದಿಕೆಯ ಮೇಲಿದ್ದರು.
ಅಧೀಕ್ಷಕ ಎಂಜಿನಿಯರ್‌ ಎಸ್‌.ಎಚ್‌. ಮಂಜಪ್ಪ ಸ್ವಚ್ಛತಾ ಅಭಿಯಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಸಂಘದ ಪ್ರಧಾನಕಾರ್ಯದರ್ಶಿ ವೈ.ಎಂ. ಪಾತ್ರೋಟ ಸ್ವಾಗತಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು. ರಫೀಕ್‌ ಚಪ್ಪರಬಂದ ವಂದಿಸಿದರು.

loading...