ರಕ್ತದಾನದ ಮೂಲಕ ಗಣರಾಜ್ಯೋತ್ಸವ ಆಚರಣೆ

0
26
loading...

ಕನ್ನಡಮ್ಮ ಸುದ್ದಿ-ನರೇಗಲ್ಲ : ಸ್ವಾಮಿ ವಿವೇಕಾನಂದ ಯುವ ಸೇವಾ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದ, ಸುಭಾಷಚಂದ್ರ ಬೋಸರ ಜಯಂತಿ ಹಾಗೂ ಗಣರಾಜ್ಯೋತ್ಸವದ ಪ್ರಯುಕ್ತ ಜಕ್ಕಲಿ ಗ್ರಾಮದಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು.
ಸಂಘಟನೆಯ ಸದಸ್ಯರಲ್ಲದೇ ಊರಿನ ಎಲ್ಲಾ ಧರ್ಮದ ಜನತೆ ಜಾತಿ ಧರ್ಮವನ್ನು ಮರೆತು ಒಂದಾಗಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಗಣರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಡಾ. ಗೋಪಾಲ್‌ ದೇಸಾಯಿ ಮಾತನಾಡಿ, ಮಾನವರು ಮಾಡುವ ರಕ್ತದಾನಕ್ಕೆ ಮತ್ತೊಬ್ಬರ ಜೀವವನ್ನು ಉಳಿಸುವ ಶಕ್ತಿಯಿದೆ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ರಕ್ತದ ಗುಂಪನ್ನು ಅರಿಯುವುದು ಅವಶ್ಯಕ. ಇದರಿಂದ ತುರ್ತು ಸಂದರ್ಭದಲ್ಲಿ ಶೀಘ್ರವಾಗಿ ರಕ್ತ ಸ್ವೀಕರಿಸಲು ಹಾಗೂ ರಕ್ತದಾನ ಮಾಡಲು ಸಹಾಯಕವಾಗುತ್ತದೆ. ಮಾನವನ ದೇಹದಲ್ಲಿ ರಕ್ತವು ಖಾಲಿಯಾದಂತೆ ಉತ್ಪತ್ತಿಯಾಗುವ ಗುಣ ಹೊಂದಿದ್ದು, ಆರೋಗ್ಯವಂತ ಯುವ ಜನತೆ ರಕ್ತದಾನ ಮಾಡುವುದರ ಮೂಲಕ, ತುರ್ತು ಚಿಕಿತ್ಸಾ ವೇಳೆ ರಕ್ತಕ್ಕಾಗಿ ಪರಡಾಡುವ ಜೀವಗಳನ್ನು ಉಳಿಸಲು ಸಹಾಯಮಾಡಬೇಕು ಎಂದು ಕರೆ ನೀಡಿದರು.
ಇಂದು ಸಮಾಜದಲ್ಲಿ ಬಹುತೇಕ ವಸ್ತುಗಳನ್ನು ಕೃತಕವಾಗಿ ಸೃಷ್ಟಿಸಲು ಹಾಗೂ ಹಣಕೊಟ್ಟು ಖರೀದಿಸಲು ಸಾಧ್ಯವುಂಟು. ಆದರೆ ರಕ್ತವನ್ನು ಕೃತಕವಾಗಿ ಸೃಷ್ಟಿಸುವುದಾಗಲೀ ಅಥವಾ, ಖರೀದಿ ಮಾಡುವುದಾಗಲೀ ಸಾಧ್ಯವಿಲ್ಲ. ಮತ್ತೊಂದು ಜೀವವನ್ನು ಉಳಿಸಲು ಕೇವಲ ರಕ್ತದಾನದಿಂದ ಮಾತ್ರ ಸಾಧ್ಯವಿದ್ದು, ರಕ್ತ ತಪಾಸಣೆ ಮಾಡಿಸಿದ ಆರೋಗ್ಯವಂತ ಯುವಕರು, ತುರ್ತಾಗಿ ರಕ್ತದ ಅವಶ್ಯಕತೆಯಿರುವ ಸಂದರ್ಭದಲ್ಲಿ ರಕ್ತದಾನಕ್ಕೆ ಮುಂದಾಗಬೇಕು. ರಕ್ತದ ಅವಶ್ಯಕತೆಯುಂಟಾದಾಗ ಮಾತ್ರ ರಕ್ತದ ಮಹತ್ವ ಅರಿವಾಗುತ್ತದೆ. ನಾವು ನೀಡುವ ಒಂದು ಯೂನಿಟ್‌ ರಕ್ತವು ಮತ್ತೊಂದು ಜೀವವನದನೇ ಉಳಿಸಬಲ್ಲದು ಎಂಬುದನ್ನು ಅರಿಯಬೇಕು ಎಂದರು.
ಬೆಳಿಗ್ಗೆ 9ಗಂಟೆಯಿಂದ ಸಂಜೆ 4ಗಂಟೆಯವರೆಗೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಯುವತಿಯರನ್ನು ಒಳಗೊಂಡು 70ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಹುಬ್ಬಳ್ಳಿಯ ರಾಷ್ಟ್ರೋಸ್ಥಾನ ರಕ್ತ ನಿಧಿಯ ಸಿಬ್ಬಂದಿಗಳು ತಪಾಸಣೆ ನಡೆಸಿ ರಕ್ತ ಸಂಗ್ರಹ ಮಾಡಿದರು.
ಕಾರ್ಯಕ್ರಮದಲ್ಲಿ ರವಿ ಯಾವಗಲ್ಲ, ಶಿವರಾಜ ಮುಗಳಿ, ಮುತ್ತು ಕಡಗದ, ಮುತ್ತು ದೊಡ್ಡಮೇಟಿ, ಮಂಜು ಜಂಗಣ್ಣವರ, ಅನಿಲ್‌ ಕಿಟಗೇರಿ, ಸಂಗಮೇಶ ವಾಲಿ, ಶಿರಗುಂಪಿ, ರವಿ ಯಾವಗಲ್ಲ, ಉಮೇಶ ಮೇಟಿ, ಮುತ್ತು ದೊಡ್ಡಮೇಟಿ, ರವಿ ಮುಗಳಿ, ಅನೀಲ ಕಿಟಗೇರಿ, ಬಾಬು ಮೆಣಸಗಿ, ಅಮರೇಶ ಮಾರನಬಸರಿ, ಮಂಜು ವಾಲಿ, ವಿನೋದ ಉಮತಾರ, ನಾಗರಾಜ ಕಡಗದ, ವಿದ್ಯಾಧರ ಶಿರಗುಂದ ಸೇರಿದಂತೆ ಅನೇಕರು ರಕ್ತದಾನ ಶಿಬಿರಲ್ಲಿ ಪಾಲ್ಗೋಂಡಿದ್ದರು.

loading...