ರಕ್ತ ದಾನಿಗಳಿಂದ ಒಂದು ದಿನದಲ್ಲಿಯೇ 70 ಲೀಟರ್‌ ರಕ್ತ ಸಂಗ್ರಹಣೆ

0
31
loading...

ಮುಗಳಖೋಡ 13: ಪಟ್ಟಣದ ಶ್ರೀ ಯಲ್ಲಾಲಿಂಲಿಗೇಶ್ವರ ಬೃಹನ್ಮಠದಲ್ಲಿ ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆ ಹಾಗೂ ಶ್ರೀ ಯಲ್ಲಾಲಿಂಗ ಪ್ರಭುಗಳ 32ನೇ ಪುಣ್ಯಾರಾಧನೆ ನಿಮಿತ್ತ ಶ್ರೀಮಠದ ಸಕಲ ಭಕ್ತರು ಹಮ್ಮಿಕೊಂಡಿರುವ ರಕ್ತದಿಂದ ಶ್ರೀಗಳ ತುಲಾಭಾರ ಕಾರ್ಯಕ್ರಮ ದಿ. 12ರಂದು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಯಿತು. ರಕ್ತದಾನ ಶಿಬಿರದಲ್ಲಿ 210 ಭಕ್ತರ ರಕ್ತ ಸಂಗ್ರಹಣೆಯಾಗಿದ್ದು, ಒಟ್ಟು 70 ಲೀಟರ್‌ ರಕ್ತ ಶೇಖರಣೆಯಾಗಿದೆ. ಈ ರಕ್ತವನ್ನು ಚಿಕ್ಕೋಡಿ ಮಾತೋಶ್ರೀ ರಕ್ತ ಸಂಗ್ರಹಣಾ ಕೇಂದ್ರಕ್ಕೆ ಸರಬರಾಜು ಮಾಡಲಾಗುವುದು. ನಾಳೆಯ ದಿನ ಇನ್ನೂ 350 ಜನ ಭಕ್ತರು ರಕ್ತದಾನ ಮಾಡಲಿದ್ದು, ಅದು 116 ಲೀಟರ್‌ ಆಗುವ ಸಾಧ್ಯತೆ ಇರುವುದಾಗಿ ಡಾ.ಸಿ ಸಿ ಹಿರೇಮಠ ಮಾಹಿತಿ ನೀಡಿದ್ದಾರೆ.ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ. ಎಮ್‌ ಎಸ್‌ ಕೊಪ್ಪದ, ಡಾ.ಗಜಾನನ ಜೆ. ಕುಲಕರ್ಣಿ ಡಾ. ಸುಕುಮಾರ ಬಾಗಾಯಿ, ಡಾ. ಎಸ್‌ ವಿ ಮುನ್ನ್ಯಾಳ ಇದ್ದರು.

loading...