ರಡ್ಡಿ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ರಾಮಲಿಗಾರೆಡ್ಡಿ

0
16
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಸುಮಾರು ವರ್ಷಗಳಿಂದ ರಡ್ಡಿ ಸಮುದಾಯಕ್ಕೆ ಸೂಕ್ತವಾದ ಸ್ಥಾನಮಾನ ನೀಡಬೇಕೆಂದು. ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ ಪಕ್ಷಾತೀತವಾಗಿ ಸರ್ಕಾರಕ್ಕೆ ಹಲವು ಸಮಸ್ಯೆಗಳ ಬೇಡಿಕೆಯನ್ನು ನೀಡಿದ ಫಲವಾಗಿ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾ ಯೋಗಿ ವೇಮನರ ಆಚರಿಸುತ್ತಿರುಸುವಂತಾಗಿದೆ. ಮುಖ್ಯಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಗೃಹ ಸಚಿವ ರಾಮಲಿಂಗಾರಡ್ಡಿ ಹೇಳಿದರು.
ತಾಲೂಕಿನ ಸಾಲಹಳ್ಳಿ ಗ್ರಾಮದ ಮಹಾಂತೇಶ್ವರ ಪ್ರೌಢ ಶಾಲಾ ಆವರಣದಲ್ಲಿ ನಡೆದ ಮಹಾನಯೋಗಿ ವೇಮನರ 606 ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಅವರು, ಸರ್ಕಾರ ನಮ್ಮ ಸಮಾಜದ ಅನೇಕ ಸಮಸ್ಯೆಗೆ ಸ್ಪಂಧಿಸಿ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರ ಅಧ್ಯಯನ ಪೀಠಕ್ಕೆ ಅರ್ಥಿಕ ಸಹಾಯ ಮಾಡಿ ಇಂದು ಅಧ್ಯಯನ ಪೀಠಗಳು ಕಾರ್ಯವನ್ನು ನಿರ್ವಹಿಸುತ್ತಿವೆ. ನಾವು ಇಗಾಗಲೆ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ ನಮ್ಮ ಸಮಾಜದ ಹಿಂದುಳಿದ ವಿದ್ಯಾರ್ಥಿಗಳಿಗೆ ಅರ್ಥಿಕ ಸಹಾಯ ಮತ್ತು ರಡ್ಡಿ ಸಮುದಾಯಕ್ಕೆ ನಿಗಮ ಮಂಡಳಿ ಕಲ್ಪಿಸಿಕೊಡಬೇಕೆಂದು ಕೇಳಿಕೊಳ್ಳಲಾಗಿದ್ದು ಅದಕ್ಕ ಸಿದ್ದರಾಮಯ್ಯನವರು ಒಪ್ಪಿಗೆ ಸೂಚಿಸಿದ್ದಾರೆ.

ರಡ್ಡಿ ಗುರುಪೀಠ ಏರೇಹೊಸಳ್ಳಿ ಹರಿಹರದ ಶ್ರೀ ವೇಮಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದರು ಮಾಜಿ ಸಚಿವ ಅಜಯಕುಮಾರ ಸರನಾಯಕ, ಅಧ್ಯಕ್ಷತೆ ಈಶ್ವರಗೌಡ ಪಾಟೀಲ, ರಡ್ಡಿ ಸಮಾಜದ ರಾಜ್ಯ ಅಧ್ಯಕ್ಷ ಶ್ರೀನಿವಾಸ ರಡ್ಡಿ, ತಾಲೂಕಾ ಅಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೋಳ, ಬಸವರಾಜ ಹಿರೇರಡ್ಡಿ, ರನ್ನ ಸುಗರ್ಸ ಅಧ್ಯಕ್ಷ ರಾಮಣ್ಣ ತಳೆವಾಡ ಮತ್ತಿತರರು ಉಪಸ್ಥಿತರಿದ್ದರು.

loading...