ರಸ್ತೆ ಅಪಘಾತ: ಓರ್ವ ಸಾವು, ೧೪ ಜನ ಗಂಭೀರ ಗಾಯ

0
27
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಎಂ.ಕೆ ಹುಬ್ಬಳ್ಳಿ ಸಮೀಪ ಕಿತ್ತೂರ ಕಡೆಯಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಕ್ರೂಶರ್ ಅಪಘಾತಗೊಂಡು ೧೪ ಜನರಿಗೆ ಗಂಭೀರ ಗಾಯ ಮತ್ತು ಓರ್ವ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.

ಖಾನಾಪುರ ತಾಲೂಕಿನ ಲೋಕಳ್ಳಿ ಗ್ರಾಮದ ಜೈರಾಮ ಪಾಟೀಲ (೬೦) ಮೃತ ವ್ಯಕ್ತಿ. ಗಂಭೀರ ಗಾಯಗೊಂಡ ೧೪ ಜನರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರೂಶರ್ ಟೈಯರ್ ಸ್ಪೋಟಗೊಂಡ ಅಪಘಾತವಾಗಿದೆ. ಈ ಕುರಿತು ಎಂ.ಕೆ ಹುಬ್ಬಳ್ಳಿ ಪೊಲೀಸರು ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

loading...