ರಸ್ತೆ ಸುಧಾರಣೆಯಿಂದ ಗ್ರಾಮಗಳ ಅಭಿವೃದ್ಧಿ: ಸಚಿವ ತಿಮ್ಮಾಪೂರ

0
22
loading...

ಕನ್ನಡಮ್ಮ ಸುದ್ದಿ-ಲೋಕಾಪುರ: ಹಳ್ಳಿ ಗ್ರಾಮ ಪ್ರದೇಶಗಳ ರಸ್ತೆ ಸುಧಾರಣೆಯಿಂದ ಜನರು ಹೆಚ್ಚಿನ ವ್ಯವಹಾರ ಮಾಡಲು ಸಾಧ್ಯ, ವ್ಯಾಪಾರ ವ್ಯವಹಾರಗಳನ್ನು ಸುಧಾರಣೆಯಾದಾಗ ಮಾತ್ರ ಹಳ್ಳಿ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು.
ಸಮೀಪದ ಚಿಕ್ಕೂರ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲನಿಗಮದ ಆಶ್ರಯದಲ್ಲಿ ನಡೆದ ಸುಮಾರು 38 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಭಾಗದಲ್ಲಿ ಇನ್ನೂ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ. ಆಗ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸವಲತ್ತುಗಳಾದ ರಸ್ತೆ, ಚರಂಡಿ, ಕುಡಿಯುವ ನೀರು, ನೈರ್ಮಲೀಕರಣದಂತಹ ಕಾಮಗಾರಿಗಳು ಮಾಡಲು ಸಾಧ್ಯವಾಗುತ್ತದೆ ಎಂದರು. ಗ್ರಾಮಗಳಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳಲು ಎಚ್ಚರಿಕೆವಹಿಸಿ ಕಾಲ ಕಾಲಕ್ಕೆ ಕಾಮಗಾರಿಯ ಮೇಲೆ ನಿಗಾವಹಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಮುಖಂಡರಾದ ತಾಪಂ ಸದಸ್ಯ ಯಶವಂತ ಹರಿಜನ, ಜಿಲ್ಲಾ ಸಹಕಾರಿ ಯುನಿಯನ್‌ ಉಪಾಧ್ಯಕ್ಷ ಕಾಶಿನಾಥ ಹುಡೇದ, ಲಕ್ಷ್ಮಣ ಮಾಲಗಿÀ, ಚಿದಾನಂದ ಪಾಟೀಲ, ಹಣಮಂತಗೌಡ ತಿ.ಪಾಟೀಲ, ಬಸಪ್ಪಗೌಡ ಉತ್ತೂರ, ಶೇಖಪ್ಪ ಪಾಟೀಲ, ಸಿದ್ದಪ್ಪ ಜನೋಜಿ, ಕರಿಯಪ್ಪ ಜನೋಜಿ, ಗುತ್ತಿದಾರರಾದ ಶಿವಾನಂದ ದಡ್ಡನ್ನವರ ಹಾಗೂ ಗ್ರಾಮಸ್ಥರು ಇದ್ದರು.

loading...