ರಾಜಕೀಯ ಲಾಭಕ್ಕಾಗಿ ಕೋಮು ಸಾಮರಸ್ಯ ಸೌಹಾರ್ದತೆ ಬಲಿ ಕೂಡಲಾಗುತ್ತಿದೆ

0
21
loading...

ಶಿರಸಿ: ಕೋಮು ಸಾಮರಸ್ಯ ಕದಡುವ ಮೂಲಕ ದೇಶದ ಒಳಗಡೆ ರಕ್ತಸ್ರಾವ ಹೆಚ್ಚುತ್ತಿದೆ. ಅಧಿಕಾರದ ಆಸೆಯಿಂದ ಮನುಷ್ಯ ಸಂಬಂಧಗಳಿಗೇ ಬೆಂಕಿಯಿಡುವ ಕೆಲಸ ಆಗುತ್ತಿದೆ ಎಂದು ಹಿರಿಯ ಬರಹಗಾರ ರಹಮತ್‌ ತರಿಕೆರೆ ಹೇಳಿದರು.
ಸೌಹಾರ್ದತೆಯೆಡೆಗೆ ನಮ್ಮ ನಡಿಗೆ ಆಯೋಜನಾ ಸಮಿತಿ ವತಿಯಿಂದ ಶನಿವಾರ ರಾಘವೇಂದ್ರ ಮಠದಲ್ಲಿ ಸಂಘಟಿಸಿದ್ದ ನಮ್ಮ ಸಂವಿಧಾನ ನಮ್ಮ ಹೆಮ್ಮೆ ರಾಜ್ಯ ಸಮಾವೇಶದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ವರ್ತಮಾನದ ರಾಜಕೀಯದಲ್ಲಿ ಹೆಣಗಳ ಮೇಲೆ ರಾಜಕಾರಣ ನಡೆಸಲು ಕೆಲವರು ಮುಂದಾಗಿದ್ದಾರೆ. ಮಾನವ ಸಂಬಂಧ ಹಳಸು ಮಾಡಲು ಕಾಯುತ್ತಿದ್ದಾರೆ. ಪವಿತ್ರ ಸಂವಿಧಾನವನ್ನೇ ಬದಲಿಸುವ ಮಾತುಗಳೂ ಬರತೊಡಗಿದ್ದು, ಸಾಮರಸ್ಯ ಜೀವನ ದೂರವಾಗುತ್ತಿದೆ. ಇದು ಅಂತಿಮವಾಗಬೇಕಿದೆ. ಇದಕ್ಕೆ ಪ್ರೀತಿ, ಸೌಹಾರ್ದತೆಯೇ ಉತ್ತರ ವಿನಃ ಬೆಂಕಿಗೆ ಬೆಂಕಿ ಉತ್ತರವಾಗಲು ಎಂದಿಗೂ ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರು ಹಾಗೂ ಮಹಾತ್ಮ ಗಾಂಧಿಜಿ ಚಿಂತನೆಯ ದೇಶ ನಮ್ಮದಾಗಬೇಕು. ಹೃದಯದ ಭಾಷೆಗೆ ಕಿವಿಯಾಗಬೇಕು ಎಂದರು.
ರ್ಮಾ, ನ್ಯಾಯವಾದಿ ಶಿವಮಣಿಥನ್‌, ಸಾಹಿತಿ ವಿಷ್ಣು ನಾಯ್ಕ, ನಿರ್ದೇಶಕ ಬಿ.ಸುರೇಶ, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್‌.ವಿಮಲಾ, ಸಿ.ಐ.ಟಿ.ಯು. ರಾಜ್ಯಾಧ್ಯಕ್ಷೆ ವರಲಕ್ಷ್ಮೀ, ಬರಹಗಾರ ವಿಲ್ಪ್ರೆಡ್‌ ಡಿಸೋಜಾ, ಮುನೀರ ಕಾಟಿಪಳ್ಳ, ಮಂಗಳೂರಿನ ನರೇಂದ್ರ ಪವಾರ್‌, ದಲಿತ ಸಂಘರ್ಷ ಸಮಿತಿಯ ಬಿ.ಶಿವಾಜಿ ಹಾಗೂ ಇತರರು ಇದ್ದರು.

loading...