ರಾಜ್ಯದ ಜನತೆಗೆ ಉತ್ತಮ ಆಡಳಿತ ವ್ಯವಸ್ಥೆ : ನ್ಯಾ. ವಿಶ್ವನಾಥ ಶೆಟ್ಟಿ

0
13
loading...

ಗದಗ : ಲೋಕಾಯುಕ್ತ ಅಧಿಕಾರ ಬಳಸಿಕೊಂಡು ಜನರಿಗೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ವ್ಯವಸ್ಥೆಯ ಸುಧಾರಣೆ ತಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಗದಗ ಜಿ.ಪಂ. ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆ ಜರುಗಿಸಿ ಅವರು ಮಾತನಾಡಿದರು. ಅಧಿಕಾರಿಗಳಿಗೆ ಸರ್ಕಾರವು ಜನತೆಯ ಶ್ರೇಯೋಭಿವೃದ್ಧಿಗಾಗಿ ಅಧಿಕಾರ ಕೊಟ್ಟಿದ್ದು ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಸರ್ಕಾರದ ಯೋಜನೆಗಳ ಉದ್ದೇಶ ಜನಸಾಮಾನ್ಯರಿಗೆ ತಲುಪುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಆ ರೀತಿ ಆಗದಿದ್ದಲ್ಲಿ ಲೋಕಾಯುಕ್ತರಾಗಿ ತಮಗೆ ನೀಡಿರುವ ಕೆಲಸವನ್ನು ತಾವು ಮಾಡಬೇಕಾಗುತ್ತದೆ. ಆದರೆ ಅದಕ್ಕೆ ಅವಕಾಶ ನೀಡದೇ ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ಉತ್ತಮ ಆಡಳಿತವನ್ನು ನೀಡಲು ಪ್ರತಿಯೊಬ್ಬ ಅಧಿಕಾರಿಯು ಬದ್ಧತೆಯಿಂದ ಕೆಲಸ ಮಾಡಿ ಗದಗ ಜಿಲ್ಲೆಯು ಒಂದು ಒಳ್ಳೆಯ ಆಡಳಿತ ವ್ಯವಸ್ಥೆಯ ಜಿಲ್ಲೆಯಾಗುವಂತೆ ಪ್ರಯತ್ನಿಸಬೇಕು. ಸಾರ್ವಜನಿಕರ ಕುಂದುಕೊರತೆ ಅಹವಾಲುಗಳನ್ನು ನಿಯಮಿತವಾಗಿ ಸ್ವೀಕರಿಸಿ ಪರಿಹಾರಗಳನ್ನು ಒದಗಿಸಬೇಕು ಎಂದು ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಅವರು ತಿಳಿಸಿದರು. ಸಭೆಯಲ್ಲಿ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಕೃಷಿ, ಕಂದಾಯ, ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ವಿವಿಧ ಸೌಲಭ್ಯಗಳ ಯೋಜನೆಗಳ ಜಾರಿ ಕುರಿತು ವಿಸ್ತೃತ ಚರ್ಚೆ ನಡೆಯಿತು. ಇಲಾಖೆಗಳು ಕೈಕೊಂಡ ಕ್ರಮಗಳ ಕುರಿತ ಮೆಚ್ಚುಗೆ ವ್ಯಕ್ತಪಡಿಸಿದ ಲೋಕಾಯುಕ್ತರು ಇನ್ನು ಹೆಚ್ಚಿನ ಬದ್ದತೆ ಮತ್ತು ಆಸಕ್ತಿಯಿಂದ ಕೆಲಸ ಮಾಡಲು ಸಲಹೆ ಸೂಚನೆ ನೀಡಿದರು. ಲೋಕಾಯುಕ್ತರ ಹೆಚ್ಚುವರಿ ಮಹಾ ಪೊಲೀಸ ನಿರ್ದೇಶಕ ಸಂಜಯ ಸಹಾಯ್‌ ಅವರು ಯಾವುದೇ ಇಲಾಖೆಗಳಾಗಲಿ ಆಡಿಟ್‌ ವರದಿಗಳ ಕುರಿತು ಸರಿಯಾದ ಸ್ಪಂದನೆ £ೕಡಿ ಸರಿಯಾಗಿ ಉತ್ತರಿಸಬೇಕು. ವಿಳಂಬ ಮಾಡಿದಲ್ಲಿ ಅಥವಾ ಉದಾಸೀನ ಮಾಡಿದಲ್ಲಿ ಮಹಾಲೇಖಪಾಲಕರಿಗೆ ತಪ್ಪು ಮಾಹಿತಿ ಹೋಗಿ ಅನೇಕ ಆಡಳಿತಾತ್ಮಕ ತೊಂದರೆಗಳು ಉದ್ಭವವಾಗುತ್ತವೆ. ಆದುದರಿಂದ ಮಹಾಲೇಖಪಾಲಕರ ತಪಾಸಣಾ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರು ಜಿಲ್ಲೆಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳ ಕ£ಷ್ಟ 10 ವರ್ಷದ ಸಾಧನೆಯನ್ನು ದಾಖಲಿಸುವ ತಂತ್ರಾಂಶವೊಂದನ್ನು ರೂಪಿಸಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕ್ರೀಡಾಪಟುಗಳ ಸೌಲಭ್ಯ ಹೆಚ್ಚಿಸಲಾಗುತ್ತಿದ್ದು ಎಲ್ಲ ತಾಲೂಕಾ ಕೇಂದ್ರಗಳಲಿ ಕ್ರೀಡಾ ತರಬೇತುದಾರರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಶೈಕ್ಷಣಿಕ ಪರೀಕ್ಷಾ ಉತ್ತೀರ್ಣತೆ ಹೆಚ್ಚಿಸಲು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳು ಫಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ತಲುಪಿಸಲು ಅಗತ್ಯದ ಕ್ರಮ ಕೈಗೊಳ್ಳಲಾಗಿದೆ ಎಂದರು. ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಕೆ.ಸಂತೋಷ ಬಾಬು, ಗದಗ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿ.ಪಂ. ಉಪಕಾರ್ಯದರ್ಶಿ ಎಸ್‌.ಸಿ. ಮಹೇಶ, ಜಿ.ಪಂ. ಯೋಜನಾ ನಿರ್ದೇಶಕ ಟಿ. ದಿನೇಶ, ನಗರಾಭಿವೃದ್ಧಿ ಕೋಶದ ಯೋಜನಾ £ರ್ದೇಶಕ ರುದ್ರೇಶ ಎಸ್‌.ಎನ್‌. ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ, ಹಾಗೂ ವಿವಿಧ ಇಲಾಖೆಗಳ ಸಂಸ್ಥೆಗಳ ಜಿಲ್ಲಾ ಮುಖ್ಯಸ್ಥರು, ಲೋಕಾಯುಕ್ತ ಕಚೇರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಲೋಕಾಯುಕ್ತರ ಭೇಟಿ: ಕರ್ನಾಟಕ ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಅವರು ಗದುಗಿನ ಶಹಾಪುರ ಪೇಟೆ ಅಂಗನವಾಡಿ ಕೆಂದ್ರ, ಗದಗ ಬೆಟಗೇರಿ ಮುಕ್ತಿಧಾಮ, ರಾಜೀವ ಗಾಂಧಿ ನಗರದಲ್ಲಿ ಇರುವ ಗೌರವ ಘಟಕ ಹಾಗೂ ಓಪನ್‌ ಜಿಮ್‌, ಶಿವಶರಣ ಹರಳಯ್ಯ ಉದ್ಯಾನವನ್‌ ಹಾಗೂ ಸಮುದಾಯ ಭವನ ಹಾಗೂ ಮುಳಗುಂದ ರಸ್ತೆಯಲಿರುವ ಹಿಂ. ವರ್ಗಗಳ ಮಾದರಿ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಲಹೆ ಸೂಚನೆ ನೀಡಿದರು.

loading...