ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ: ವಿಠ್ಠಲ

0
20
loading...

ಕನ್ನಡಮ್ಮ ಸುದ್ದಿ-ಸಿಂದಗಿ: ರಾಜ್ಯ ಸರ್ಕಾರ ನುಡಿದಂತೆ ನಡೆದು ತನ್ನ ಮಾತನ್ನು ಉಳಿಸಿಕೊಂಡಿದಿದ್ದು ರಾಜ್ಯದ ಅಭಿವೃದ್ಧಿಗಾಗಿ ಅನೇಕ ಜನಪರವಾದ ಯೋಜನೆಗಳನ್ನು ಹಮ್ಮಿಕೊಂಡು ಸಾಮಾನ್ಯರ ಬದುಕನ್ನು ಶ್ರೀಮಂತಗೊಳಿಸಿದೆ ಎಂದು ಸಿಂದಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಠ್ಠಲ್‌ ಕೋಳ್ಳುರ ಹೇಳಿದರು.
ಅವರು ಪಟ್ಟಣದ ಕಾಂಗ್ರೆಸ್‌ ಕಾರ್ಯಲಯದಲ್ಲಿ ರವಿವಾರ ಹಮ್ಮಿಕೊಂಡ ಮುಂಬರುವ ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತಾ ಸಭೆಯ ಕಾರ್ಯವೈಖರಿಗಳ ಕುರಿತಾಗಿರುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯನವರು ಸುಮಾರು 80 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸಾಧನಾ ಯಾತ್ರೆಯನ್ನು ಮಾಡಿ ಯಶಸ್ವಿಗೊಳಿಸಿದ್ದಾರೆ. ಸಿಂದಗಿ ಮತಕ್ಷೇತ್ರದಲ್ಲಿ ಎಲ್ಲಾ ಹಿರಿಯ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಒಗ್ಗಟ್ಟಾಗಿ ಪ್ರತಿಯೊಂದು ಬೂತನಲ್ಲಿ ಮನೆ ಮನೆಗೆ ಹೋಗಿ ಮುಂಬರುವ ಚುಣಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಲು ಕಾಂಗ್ರೆಸ್‌ ಪಕ್ಷದ ಸಾಧನೆಗಳನ್ನು ಜನಸಾಮಾನ್ಯರಿಗೆ ತಿಳಿಸಿ ಮತದಾರರ ಮನ ಸೆಳೆಯಲು ಶ್ರಮಿಸಿಬೇಕು ಎಂದ ಅವರು ಸಿಂದಗಿ ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಸಂಪೂರ್ಣವಾಗಿ ಹೋರಾಡಿದಲ್ಲಿ ಗೆಲುವು ನಮ್ಮದಾಗುತ್ತದೆ. ಸಚಿವ ಎಂಬಿ.ಪಾಟೀಲರು ಜಿಲ್ಲೆಯನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿ ಲಕ್ಷಾಂತರ ರೈತರ ಬದುಕನ್ನು ಹಸನಗೊಳಿಸಿದ್ದಾರೆ ಸರ್ಕಾರದ ಮತ್ತು ಸಚಿವರ ಜಿಲ್ಲಾ ಸಾಧನೆಯನ್ನು ಜನ ಸಾಮಾನ್ಯರಿಗೆ ತಲುಪಿಸುವ ಕಾರ್ಯ ನಡೆಸಲು ಮುಂಬರುವ ದಿನಗಳಲ್ಲಿ ಪತ್ರಿಕಾಗೊಷ್ಠಿ ನಡೆಸಿ ಸಿಂದಗಿ ಮತಕ್ಷೇತ್ರದ ಯಾತ್ರೆಯ ವೇಳಾಪಟ್ಟಿಯನ್ನು ತಿಳಿಸಲಾಗುವದು ಎಂದರು.

ಆಲಮೇಲ ಬ್ಲಾಕ್‌ ಅಧ್ಯಕ್ಷ ಅಶೋಕ ಕೊಳಾರಿ, ಮಲ್ಲು ಅಚಲೇರಿ, ಬಸವರಾಜ ತೆಲ್ಲೂರ, ಬಸವರಾಜ ಶಿರಸಗಿ, ಸಿದ್ದಣ್ಣ ಹಿರೆಕುರಬರ, ಪೈಗಂಬರ ಹಚ್ಯಾಳ, ವಿಠ್ಠಲ ಖೇಡಗಿ, ಶ್ಯಾಮರಾವ ಚವ್ಹಾಣ, ಕೆಂಚಪ್ಪ ಕತ್ನಳ್ಳಿ, ಇರ್ಪಾನ ಆಳಂದ, ವಿಠ್ಠಲ ರೇವೂರ, ಮಲ್ಲಣ್ಣ ಸಾಲಿ, ಎ.ಡಿ. ಕೊರವಾರ, ಗೊಲ್ಲಾಳಪ್ಪ ಕರ್ನಾಳ, ಮಾಂತಗೌಡ ಬಿರಾದಾರ, ಅರ್ಜುನ ಮುಜಾವರ, ಪಾರೂಕ ಮುಲ್ಲಾ, ಸಲಿಂ ಕಣ್ಣಿ, ಆಸಿಪ ಆಳಂದ, ರಮೇಶ ಗುಬ್ಬೆವಾಡ, ಬಿರಪ್ಪ ಪೂಜಾರಿ, ಅರುಣಕುಮಾರ ಸಿಂಗೆ, ಶಿವಾನಂದ ಹಡಪದ, ಕೆಂಪೆಗೌಡ ಕೆಶಪ್ಪಗೊಳ, ನಿಂಗಣ್ಣ ಚಟ್ಟಿ, ಮಲಕಣ್ಣ ಗಡಿಗೆನವರ, ರುಕ್ಮುದ್ದಿನ ಪಟೇಲ, ಭೀಮರಾಯ ಅಮರಗೋಳ, ಮುನ್ನಾ ಬೈರಾಮಡಗಿ, ಬಿ.ಎಸ್‌.ಸೌದಾಗಾರ, ಮಹಾದೇವ ಕೊಂಡಗುಳಿ, ಶ್ರೀಶೈಲ ಸಾಸಾಬಾಳ, ಜಯಶ್ರೀ ಹದನೂರ, ನಾಗಮ್ಮ ಪತ್ತಾರ, ಹಾಗೂ ಬೂತ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

loading...