ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆಗೆ ಬೆಂಬಲ ವ್ಯಕ್ತ ಪಡಿಸಿ ಮನವಿ

0
22
loading...

ಕನ್ನಡಮ್ಮ ಸುದ್ದಿ-ಕಾರವಾರ: ಜಿಲ್ಲಾ ಘಟಕದವರು ಕೇಂದ್ರ ಸರಕಾರದ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆಗೆ ಬೆಂಬಲ ವ್ಯಕ್ತ ಪಡಿಸಿ ಮಸೂದೆಯನ್ನು ಆದಷ್ಟು ಶೀಘ್ರದಲ್ಲಿ ಜಾರಿಗೊಳಿಸುವಂತೆ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ಜಾರಿಯಿಂದ ಎಲ್ಲ ವೈದ್ಯ ಪದ್ಧತಿಗಳಿಗೆ ಸಾರ್ವತ್ರಿಕ ಮನ್ನಣೆ ದೊರಕಿ ಅವುಗಳ ಅಭಿವೃದ್ಧಿಯಲ್ಲದೇ ಜನರಿಗೆ ಉಪಯೋಗ ತಲುಪುವ ನಿಟ್ಟಿನಲ್ಲಿ ಪ್ರಸ್ತಾವಿತ ಮಸೂದೆ ಉತ್ತಮವಾಗಿದೆ. ಇದರಲ್ಲಿನ ಎಲ್ಲ ಅಂಶಗಳು ಪ್ರಾಥಮಿಕ ಆರೋಗ್ಯ ಹಂತದಿಂದ ಹಿಡಿದು ಎಲ್ಲ ಕ್ಲಿಷ್ಟಕರ ಅನಾರೋಗ್ಯ ಸ್ಥಿತಿಗಳನ್ನು ನಿಭಾಯಿಸಲು ಮತ್ತು ದೇಶದಾದ್ಯಂತ ಎಲ್ಲ ವೈದ್ಯ ಪದ್ಧತಿಗಳ ಸಮಗ್ರ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಹಾಯಕವಾಗಿವೆ. ಬ್ರಿಜ್‌ ಕೋರ್ಸ್‌ನ್ನು ದೇಶದಲ್ಲಿರುವ 7 ಲಕ್ಷ ಆಯುಷ್‌ ವೈದ್ಯರಿಗೆ ನೀಡಿದರೆ ವೈದ್ಯರ ಕೊರತೆ ನೀಗಿಸಲು ಸಹಕಾರಿಯಾಗಿದೆ. ಆಯುಷ್‌ ವೈದ್ಯ ಪದ್ಧತಿಗಳ ಪಠ್ಯಕ್ರಮ, ತರಬೇತಿ, ಶಿಕ್ಷಣ, ದೇಶಾದ್ಯಂತ ಒಂದೇ ತೆರನಾಗಿದ್ದು ಅದರಲ್ಲಿ ಆಧುನಿಕ ವೈದ್ಯ ಪದ್ಧತಿಯ ಎಲ್ಲ ಪಠ್ಯಗಳನ್ನು ಕಲಿಸುವುದಲ್ಲದೆ, ಅಲೋಪಥಿ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್‌ ನೀಡುವುದು ಹೆಚ್ಚಿನ ತರಬೇತಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಸಂದರ್ಭದಲ್ಲಿ ಫೆಡರೇಶನ್‌ನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸತೀಶ ಭಟ್‌ ಕಣ್ಣಿ, ಉಪಾಧ್ಯಕ್ಷ ಡಾ.ಮುಕುಂದ ಪಟವರ್ಧನ್‌, ಡಾ.ಯೊಗೇಶ ಮಡಗಾಂವಕರ್‌, ಡಾ.ಪ್ರಕಾಶ ಶೆಟ್ಟಿ, ಕಾರ್ಯದರ್ಶಿ ಡಾ.ವಾದಿರಾಜ ಭಟ್‌, ಜಂಟಿ ಕಾರ್ಯದರ್ಶಿ ಡಾ.ಹರಿಪ್ರಸಾದ ಕಿಣಿ, ಡಾ.ಸಂಜಯ ಹೆಗಡೆ, ಡಾ.ಲಕ್ಷ್ಮೀ ಭಟ್‌, gಖಜಾಂಚಿ ಡಾ.ರವಿಕಿರಣ ಪಟವರ್ಧ ಮುಂತಾದವರು ಇದ್ದರು.

loading...