ರೈತಪರವಾದ ನಿಲುವನ್ನು ಪ್ರಕಟಿಸದೇ ಇರುವುದು ಖಂಡನಾರ್ಹ: ರವೀಂದ್ರ

0
24
loading...

ಕನ್ನಡಮ್ಮ ಸುದ್ದಿ-ಶಿರಸಿ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರೈತರು ಸಾಲಬಾಧೆಯಿಂದ ಹಾಗೂ ಬೆಳೆ ನಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷವೊಂದರಲ್ಲೇ 807 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗ್ಯೂ ರಾಜ್ಯ ಸರ್ಕಾರವು ಪರಿಪೂರ್ಣ ರೈತಪರವಾದ ನಿಲುವನ್ನು ಪ್ರಕಟಿಸದೇ ಇರುವುದು ಖಂಡನಾರ್ಹ ಎಂದು ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್‌. ಪಕ್ಷದ ಸಂಘಟನೆ ಉಸ್ತುವಾರಿ ಎ.ರವೀಂದ್ರ ನಾಯ್ಕ ಹೇಳಿದ್ದಾರೆ.
ತಾಲೂಕಿನ ಬಂಕನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನತಾದಳ ಜಾತ್ಯಾತೀತ ಪಕ್ಷದ ಸಭೆಯನ್ನು ಕಾಯಗುಡ್ಡೆಯಲ್ಲಿ ಪಕ್ಷ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಾಲ ಮನ್ನಾ ಬಳಿಕವೇ ಇಲ್ಲಿಯವರೆಗೆ 256 ರೈತರು ಜೀವ ಕಳೆದುಕೊಂಡಿದ್ದು, ಪ್ರಸಕ್ತ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಒಟ್ಟೂ 3623 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚಿನ 3 ದಶಕದ ಅವಧಿಯಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ದಾಖಲಾರ್ಹವಾಗಿದೆ. ರೈತರ ಆರ್ಥಿಕ ಸ್ವಾವಲಂಬನೆ ದಿಶೆಯಲ್ಲಿ ರಾಜ್ಯ ಸರ್ಕಾರವು ವ್ಯಾಪಕವಾದ ಕ್ರಮವನ್ನು ಜರುಗಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರದ ವಿರುದ್ಧ ವ್ಯಾಪಕವಾದ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸಭೆಯ ಅಧ್ಯಕ್ದತೆಯನ್ನು ಊರಿನ ಪ್ರಮುಖ ನಾರಾಯಣಪ್ಪ ವಹಿಸಿದ್ದರು. ಸಭೆಯನ್ನುದ್ದೇಶಿಸಿ ಬದನಗೋಡ ಗ್ರಾಮದ ಎ.ಪಿ.ಎಂ.ಸಿ. ಅಭ್ಯರ್ಥಿ ಎಲ್‌.ಟಿ.ನಾಯ್ಕ, ಹಿರಿಯ ಧುರೀಣರಾದ ಎಂ.ಆರ್‌.ನಾಯ್ಕ ಕಂಡ್ರಾಜಿ, ಬದನಗೋಡ ಘಟಕಾಧ್ಯಕ್ಷ ಬಾಲಚಂದ್ರ ಗೌಡ, ನೆಹರೂ ನಾಯ್ಕ ಬಿಳೂರು, ವಿ.ಎಂ.ಬೈಂದೂರು ಬಿಸ್ಲಕೊಪ್ಪ, ಸೋಮು ಗೌಡ ಹುಡೇಲಕೊಪ್ಪ, ಮನೋಜ ನಾಯ್ಕ ಮಳಲಗಾಂವ, ಶ್ರೀಕಾಂತ ನಾಯ್ಕ ಮಳಗಿ ಮಾತನಾಡಿದರು. ಸುಗಾವಿ ಕ್ಷೇತ್ರದ ಎ.ಪಿ.ಎಂ.ಸಿ. ಚುನಾವಣಾಭ್ಯರ್ಥಿ ರಾಜೇಂದ್ರ ನಾಯ್ಕ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

loading...