ರೈತರಿಗೆ ಸಾಲ ಪಡೆಯಲು ಸಲಹೆ ನೀಡಿ: ಸಂಗೂರಮಠ

0
31
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ರೈತರು ಟ್ರ್ಯಾಕ್ಟರ ಖರೀದಿ ಮಾಡಲು ಬಂದ ಬಡ ರೈತರಿಗೆ ಸಹಕಾರಿ ಸಂಘಗಳಲ್ಲಿ ಸಾಲ ಪಡೆದು ಖರೀದಿಸಲು ಅನಕೂಲವಾಗುವಂತೆ ನಿರ್ದೆಶನ ನೀಡಿ ಎಂದು ಇಲ್ಲಿನ ಮಾರ್ಕೆಟಿಂಗ ಸೊಸೈಟಿ ಅಧ್ಯಕ್ಷ ಪಿ.ಎಸ್‌.ಸಂಗೂರಮಠ ಹೇಳಿದರು.
ಅವರು ಗುರುವಾರ ಸಂಜೆ ಪಟ್ಟಣದ ಶಿರಸಿ ರಸ್ತೆಯಲ್ಲಿ ನೂತನವಾಗಿ ಆರ್‌.ಎನ್‌.ಮೋಟರ್ಸ್‌ ಮಹೀಂದ್ರಾ ಟ್ರ್ಯಾಕ್ಟರ್ಸ ಶೊರೂಂನ ಉದ್ಘಾಟನಾ ಸಮಾರಂಭದ ಅಧ್ಯಕ್ಷೆತೆ ವಹಿಸಿ ಮಾತನಾಡುತ್ತಿದ್ದರು, ಟ್ರ್ಯಾಕ್ಟರ ಖರೀದಿ ಮಾಡುವ ರೈತರಿಗೆ ಸಹಕಾರಿ ಸಂಘಗಳಲ್ಲಿ ಶೇ3 ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದರೇ ಹೆಚ್ಚಿನ ಬಡ್ಡಿ ತುಂಬಬೇಕಾಗುತ್ತದೆ ಆದ ಕಾರಣ ಬಡ ರೈತರು ಇದರ ಬಗ್ಗೆ ಗಮನಹರಿಸಬೇಕು ಮತ್ತು ಶೋರೂಂನವರು ಕೂಡಾ ರೈತರಿಗೆ ಸೂಕ್ತ ಸಲಹೆ ನೀಡಬೇಕು. ತಾಲೂಕಿನಲ್ಲಿ ಸಾಕಷ್ಟು ಟ್ರ್ಯಾಕ್ಟರ ಕಂಪನಿಗಳಿವೆ.
ಆರ್‌.ಎನ್‌.ಮೋಟರ್ಸ್‌ ಮಹೀಂದ್ರಾ ಟ್ರ್ಯಾಕ್ಟರ್ಸ ಏರಿಯಾ ಮ್ಯಾನೇಜರ ಮಹಮ್ಮದ ರಫೀಕ ಮಸಳಿ ಮುಖಂಡರಾದ ಎಚ್‌.ಎಮ್‌.ನಾಯ್ಕ ಮತ್ತು ನ್ಯಾಯವಾದಿ, ಜೆ.ಡಿ.ಎಸ್‌ ಮುಖಂಡ ರವೀಂದ್ರ ನಾಯ್ಕ, ಮಾತನಾಡಿದರು. ತಾ.ಪಂ.ಅಧ್ಯಕ್ಷೆ ದ್ರಾಕ್ಷಾಯಣಿ ಸುರಗೀಮಠ, ಜಿ.ಪಂ ಸದಸ್ಯೆ ಜಯಮ್ಮಾ ಹಿರೇಹಳ್ಳಿ, ಪ.ಪಂ.ಅಧ್ಯಕ್ಷ ಮಮ್ಮದರಫೀಕ ಇನಾಂದಾರ, ಮುಖಂಡರಾದ ಕೃಷ್ಣ ಹಿರೇಹಳ್ಳಿ, ಆರ್‌.ಎನ್‌.ಮೋಟರ್ಸ್‌ ಮಹೀಂದ್ರಾ ಟ್ರ್ಯಾಕ್ಟರ್ಸ ಶೊರೂಂನ ಮಾಲಿಕ ನಸ್ರುಲ್ಲಾ ಖಾನ ತಾ.ಪಂ ಸದಸ್ಯ ಜ್ಞಾನದೇವ ಗುಡಿಯಾಳ, ಪ.ಪಂ ಸದಸ್ಯ ಸಂಜು ಪಿಶೆ, ಮುಂತಾದವರಿದ್ದರು. ನೂತನವಾಗಿ ಆರ್‌.ಎನ್‌.ಮೋಟರ್ಸ್‌ ಮಹೀಂದ್ರಾ ಟ್ರ್ಯಾಕ್ಟರ್ಸ ಶೊರೂಂನ ಮಾಲಿಕ ನಸ್ರುಲ್ಲಾ ಖಾನ ಸ್ವಾಗಿತಿಸಿದರು. ಯಲ್ಲಪ್ಪ ಹೊನ್ನೋಜಿ ನಿರೂಪಿಸಿ ವಂದಿಸಿದರು. ಇದೇ ವೇಳೆ ನೂತನ ಶೋರೂಂನಲ್ಲಿ ಖರಿಧಿಸಿದ 10ಕ್ಕೂ ಅಧಿಕ ಟ್ರ್ಯಾಕ್ಟರ್‌ ಮಾಲೀಕರಿಗೆ ಸನ್ಮಾನಿಸಿ ಚಾವಿ ನೀಡಲಾಯಿತು.

loading...