ರೈತರ ಸದೃಢತೆಗೆ ಯೋಜನೆ ಅವಶ್ಯಕತೆ: ಸಚಿವ ರಾಜನಾಥಸಿಂಗ್

0
29
loading...

ಕನ್ನಡಮ್ಮ ಸುದ್ದಿ-ಬೆಳಗಾವಿ : ದೇಶದಲ್ಲಿ ಮತ್ತೊಂದು ಹಸಿರುಕ್ರಾಂತಿಯಾದರೂ ದೇಶದ ರೈತರು ಸದೃಡರಾಗಲು ಸಾಧ್ಯವಿಲ್ಲ. ರೈತರು ಸದೃಡಲಢರಾಗುವಂತೆ ಮಾಡಲು ಒಂದು ಯೋಜನೆಯ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದರು.
ಅವರು ಶನಿವಾರ ನಗರದ ಕೆಎಲ್ಇ ಸಂಸ್ಥೆಯ ಡಾ. ಬಿ.ಎಸ್.ಜೀರಗೆ ಸಭಾ ಭವನದಲ್ಲಿ ಭಾರತೀಯ ಕೃಷಿಕ ಸಮಾಜದ ರಾಷ್ಟ್ರೀಯ ಪರಿಷತ್ ಉದ್ಘಾಟಿಸಿ ಮಾತನಾಡಿದರು.
ತಾವೊಬ್ಬರು ಕೃಷಿಕ ತಾವು 2003 ರಲ್ಲಿ ವಾಜಪೇಯಿ ಸಚಿವ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದಾಗ ರೈತರಿಗೆ ಶೇ. ನಾಲ್ಕು ರೂ. ಬಡ್ಡಿಯೊಳಗೆ ಬೆಳೆ ಸಾಲ ಸಿಗುವಂತೆ ಮಾಡುವುದರ ಮೂಲಕ ಕೃಷಿ ಆಯೋಗ ರಚನೆ ಮಾಡಲಾಗಿತ್ತು ಎಂದರು.
21 ಶತಮಾನದಲ್ಲಿ ಭಾರತ ಕೃಷಿ ಸನ್ ರೈಸ್ ಸೆಕ್ಟರ್ ಆಗಲ್ಲಿದೆ ಎಂದರು.
ಭಾರತೀಯ ಕೃಷಿಕ ಸಮಾಜದ ರಾಷ್ಟ್ರಾಧ್ಯಕ್ಷ ಡಾ.ಕೀಶನಬೀರ ಚೌಧರಿ, ಸಂಸದರಾದ ಡಾ. ಪ್ರಭಾಕರ ಕೋರೆ, ಸುರೇಶ ಅಂಗಡಿ, ಪ್ರಲ್ಹಾದ ಜೋಶಿ, ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ ಸ್ವಾಗತಿಸಿದರು.

loading...