ವಚನದಲ್ಲಿ ತಿಳಿಸಿದಂತೆ ನಡೆದುಕೊಳ್ಳಬೇಕು: ಅರವಿಂದ

0
24
loading...

ಕನ್ನಡಮ್ಮ ಸುದ್ದಿ-ಜಮಖಂಡಿ: ಬಸವಣ್ಣನ ಅನುಯಾಯಿಗಳು ವಚನದಲ್ಲಿ ತಿಳಿಸಿದಂತೆ ನಡೆದುಕೊಳ್ಳಬೇಕು ಅಂದಾಗ ವಚನ ಸಾಹಿತ್ಯಕ್ಕೆ ಅರ್ಥ ಬರುತ್ತದೆ ಅಂದು ವಚನಕಾರರು ತಾವು ನುಡಿದಂತೆ ನಡೆದುಕೊಂಡಿದ್ದಾರೆ ಅವರು ತೊರಿದ ದಾರಿಯಲ್ಲಿ ಸಾಗುವುದೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಅವರು ಇಂದಿಲ್ಲಿ ಹೇಳಿದರು.
ಸಮೀಪದ ಹುನ್ನೂರ ಮಧರಖಂಡಿಯ ಬಸವಜ್ಞಾನ ಗುರುಕುಲದಲ್ಲಿ ಶರಣ ಸಂಸ್ಕೃತಿ ಉತ್ಸವ ಹಾಗೂ ಜಾನಪದ ಕಲಾ ಮಹೋತ್ಸವ ನಿಮಿತ್ಯ ಏರ್ಪಡಿಸಿದ್ದ 2017ರ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಹಾಗೂ 48ನೇಯ ಶಿವಾನುಭವ ಸಂಪದ 63 ಹಾಗೂ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮೇಲಿನಂತೆ ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತಾ ಎಲ್ಲಿಯ ವರೆಗೆ ನಮ್ಮಲ್ಲಿ ಪ್ರಜ್ಞೆ ಜಾಗೃತ ವಾಗುದಿಲ್ಲವೊ ಅಲ್ಲಿಯ ವರೆಗೆ ನಮಗೆ ತೊಂದರೆಯಾಗುತ್ತಿರುತ್ತದೆ ಆದರೆ ಇಂದು ವಿಶ್ವವ್ಯಾಪಿ ಬಸವ ಪ್ರಜ್ಞೆ ಬೆಳೆಯುತ್ತಿದೆ ಅಲ್ಲದೆ ವಿದೇಶದಲ್ಲಿ ಜನರ ಆಡು ಭಾಷೆಯಲ್ಲಿ ಬಸವಣ್ಣನವರ ವಚನಗಳ ಭಾಷಾಂತರ ಕಾರ್ಯ ನಡೆದಿದೆ ಎಂದು ಅರವಿಂದ ಜತ್ತಿ ಹೇಳಿದರು.
ಮಾಜಿ ಸಚಿವ ಎಸ್‌ ಆರ್‌ ಪಾಟೀಲ ಮಾತನಾಡಿ ಪ್ರತಿಯೊಬ್ಬರ ನಡೆ ನುಡಿ ಶುದ್ಧವಾಗಿರಬೇಕು ಅಲ್ಲದೆ ಪ್ರತಿಯೊಬ್ಬರು ಲಿಂಗವನ್ನು ಧರಿಸಿಕೊಳ್ಳಬೇಕು ಲಿಂಗವನ್ನು ಧರಿಸಿದವರೆ ಲಿಂಗಾಯತರು ಎಂದು ಹೇಳಿದ ಅವರು ಇಂದು ಸಂಸ್ಕೃತಿ ಜೀವಂತವಾಗಿದ್ದರೆ ಅದು ಮಾತೆಯವರಿಂದ ಎಂದರು. ಮಹಿಳೆಯರಿಗೆ ಸಮಾನತೆಯನ್ನು ತಂದು ಕೊಟ್ಟವರು ಬಸವಣ್ಣನವರು ಎಂದು ಅವರು ಹೇಳಿದರು. ಮಾಜಿ ಸಚಿವ ಅಮರೆಗೌಡ ಪಾಟೀಲ ಭಯ್ಯಾಪೂರ ಮಾತನಾಡಿ ಶರಣು ಈಶ್ವರ ಮಂಟೂರ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ನಿವೃತ ನ್ಯಾಯಮೂರ್ತಿ ಅರಳಿ ನಾಗರಾಜ ಮಾತನಾಡಿ ಎಲ್ಲರು ಬಸವಣ್ಣನವರ ವಚನಗಳನ್ನು ತಮ್ಮ ನಿತ್ಯ ಬದುಕಿನಲ್ಲಿ ಅನುಷ್ಠಾನಗೊಳಿಸಬೇಕು ಎಂದರು ಸಮಾರಂಭದ ದಿವ್ಯ ಸಾನಿಧ್ಯವನ್ನು ಡಾ ಬಸವಲಿಂಗ ಸ್ವಾಮಿಜಿ ವಹಿಸಿ ಆಶಿರ್ವಚನ ನೀಡಿದರು. ಪ್ರಾರಂಭದಲ್ಲಿ ಬಸವಜ್ಞಾನ ಗುರುಕುಲದ ಶರಣು ಡಾ ಈಶ್ವರ ಮಂಟೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

loading...