`ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ಗೆ ಸೇರಿದ ರಾಮೋಜಿ ಫಿಲಂ ಸಿಟಿ!

0
38
loading...

ಹೈದರಾಬಾದ್‌: ಚಲನಚಿತ್ರಗಳ ನಿರ್ಮಾಣಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ವಿಶ್ವದ ಅತ್ಯಂತ ದೊಡ್ಡ ಫಿಲಂ ಸಿಟಿ ಎಂಬ ಖ್ಯಾತಿ ಗಳಿಸಿರುವ ರಾಮೋಜಿ ಫಿಲಂ ಸಿಟಿ ಮತ್ತೊಂದು ಘನತೆಯನ್ನು ತನ್ನದಾಗಿಸಿಕೊಂಡಿದೆ.

ಸಿನಿಮಾ ನಿರ್ಮಾಣ ಸೌಲಭ್ಯಗಳನ್ನು ಪರಿಸರ ಸ್ನೇಹಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒದಗಿಸುತ್ತಿದೆ ಎಂದು ರಾಮೋಜಿ ಫಿಲಂ ಸಿಟಿಯನ್ನು `ಲಾರ್ಜೆಸ್ಟ್ ಇಂಟಿಗ್ರೇಟೆಡ್ ಫಿಲಂ ಸಿಟಿ ಆಫ್ ದಿ ವರ್ಲ್ಡ್’ ಅಂತಾ `ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ ಗುರುತಿಸಿದೆ.ರಾಮೋಜಿ ಗುಂಪಿನ ಸಂಸ್ಥೆಗಳ ಚೇರ್ಮನ್ ರಾಮೋಜಿ ರಾವ್ ಅವರನ್ನು ಶನಿವಾರ ಫಿಲಂ ಸಿಟಿಯಲ್ಲಿ ಭೇಟಿಯಾದ ವಿಶ್ವ ಬುಕ್ ಆಫ್ ರೆಕಾರ್ಡ್ಸ್ ಇಂಡಿಯಾ ಅಧ್ಯಕ್ಷ ಸಂತೋಷ್ ಶುಕ್ಲಾ ಪ್ರಮಾಣಪತ್ರವನ್ನು ನೀಡಿ ಅಭಿನಂದಿಸಿದರು.

ಹಾಲಿವುಡ್, ಬಾಲಿವುಡ್‌ಗಳಲ್ಲಿನ ಚಿತ್ರ ನಿರ್ಮಾಣ ಸ್ಥಳಗಳು ಎಲ್ಲವನ್ನೂ ಪರಿಶೀಲಿಸಿದ್ದೇವೆ. ಆರ್ಕೆ ಸ್ಟುಡಿಯೋ ಕಂಪೆನಿಗಳನ್ನು ಗುರುತಿಸಿದ್ದೇವೆ. ಆದರೆ, ರಾಮೋಜಿ ಫಿಲಂಸಿಟಿಯಲ್ಲಿರುವ ಸುಂದರ ಪ್ರದೇಶಗಳು, ಅದರಲ್ಲಿ ಹೆಚ್ಚು ಮುಖ್ಯವಾಗಿ ಪರಿಸರ ಸಂರಕ್ಷಣೆಗೆ ನೀಡುವ ಪ್ರಧಾನ್ಯತೆ ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ ಪ್ರತಿನಿಧಿಗಳಿಗೆ ಸಂತೃಪ್ತಿ ತಂದಿದೆ. ಇಲ್ಲಿ ಯಾವುದೇ ಕೆಲಸವಾಗಲಿ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಿರುವುದು ವಿಶೇಷ ಎಂದು ಶುಕ್ಲಾ ಹೇಳಿದ್ದಾರೆ.

ಇನ್ನು ಪ್ರಮಾಣ ಪತ್ರ ವಿತರಣೆ ವೇಳೆ ರಾಮೋಜಿ ಫಿಲಂಸಿಟಿ ಎಂ.ಡಿ. ರಾಮ್‌ ಮೋಹನ್‌ ರಾವ್, ಈಟಿವಿ ಸಿಇಒ ಬಾಪಿನಿಡು, ಫಿಲಂ ಸಿಟಿ ಸಿಇಒ ರಾಜೀವ್ ಜಲ್ನಾ ಪುರ್ಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...