ವಿಕ್ರಮಾರ್ಜುನ್‌ರಿಂದ ಜೀವ ಬೇದರಿಕೆ: ಆರೋಪ ಪ್ರಸಾದ್‌

0
25
loading...

ಕನ್ನಡಮ್ಮ ಸುದ್ದಿ-ಕಾರವಾರ: ಉತ್ತರಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪ್ರಭಾರಿ ಉಸ್ತುವಾರಿಯಾಗಿರುವ ವಿಕ್ರಮಾರ್ಜುನ್‌ ತಿಂಗಳೆ ಅವರು ಸ್ವ ಹಿತಕ್ಕಾಗಿ ಬಿಜೆಪಿಯ ಸ್ಥಳೀಯ ನಾಯಕರೊಬ್ಬರಿಗೆ ಜೀವ ಬೇದರಿಕೆ ಹಾಕಿ ರಾಜಕೀಯ ಮಾಡುತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಪ್ರಸಾದ್‌ ಕಾರವಾರಕರ್‌ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ವಿಕ್ರಮಾರ್ಜುನ ತಿಂಗಳೆ ಅವರು ತಾನು ಭೂಗತ ಲೋಕದ ಸಂಪರ್ಕ ಇರುವ ಶರದ್‌ ಪವಾರ್‌ ಅಳಿಯ. ನನ್ನ ಬಗ್ಗೆ ನಿನಗೆ ಇನ್ನು ತಿಳಿದಿಲ್ಲ. ನಾನು ನಾಲ್ಕೈದು ಗನ್‌ಗಳನ್ನು ಇಟ್ಟುಕೊಂಡು ತಿರುಗುತ್ತೇನೆ. ನನ್ನ ಬಗ್ಗೆ ತಿಳಿದುಕೊಂಡು ಮಾತನಾಡಿ ಎಂದು ಕಳೆದ ಶನಿವಾರ ನಡೆದ ಪಕ್ಷದ ಸಭೆಯಲ್ಲಿ ಬಿಜೆಪಿ ಜಿಲ್ಲಾ ಮಾಜಿ ವಕ್ತಾರ ನಾಗರಾಜ ಜೋಶಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ವಿಕ್ರಮಾರ್ಜುನ ತಿಂಗಳೆ ಅವರ ಮಾತುಗಳನ್ನು ಕೇಳಿದರೇ ಅವರು ಭೂಗತ ಲೋಕದ ಸಂಪರ್ಕ ಹೊಂದಿರುವುದು ಸ್ಪಷ್ಟವಾಗುತ್ತದೆ. ಅವರು ಬಿಜೆಪಿ ಸ್ಥಳೀಯ ನಾಯಕರಿಗೆ ಗನ್‌ ಪಾಯಿಂಟ್‌ ತೋರಿಸಿ ರಾಜಕೀಯ ಮಾಡಲು ಹೋರಟಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟು ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಉದ್ಯಮಿಯೊಬ್ಬರಿಗೆ ಟಿಕೇಟ್‌ ಕೋಡಿಸುವುದಕ್ಕೊಸ್ಕರ ಸ್ಥಳೀಯ ನಾಯಕರಿಗೆ ಈ ರಿತಿ ಬೇದರಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ ತಿಂಗಳೆ ಅವರು ಎಲ್ಲಿಯೂ ವಾಸ್ತವ್ಯ ಹೂಡದೇ ರೇಸಾರ್ಟ್‌ ಸಂಸ್ಕೃತಿಗೆ ಮಾರು ಹೋಗಿದ್ದರು. ಇಂತವರು ಇದೀಗ ಸ್ವ ಹಿತಕ್ಕಾಗಿ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರೆ. ಕೂಡಲೇ ಅವರನ್ನು ಪಕ್ಷದಿಂದ ವಜಾ ಮಾಡಬೇಕು. ಜತೆಗೆ ಭೂಗತ ಲೋಕದ ಸಂಪರ್ಕ ಹೊಂದಿರುವ ಬಗ್ಗೆ ಶಂಸಯವಿರುವುದರಿಂದ ಅವರನ್ನು ರಾಷ್ಟ್ರೀಯ ಭದ್ರತಾ ದಳದವರು ಬಂಧಿಸಿ ತನಿಖೆ ನಡೆಸಬೇಕು. ಜತೆಗೆ ನಾಗರಾಜ ಜೋಶಿ ಸೇರಿದಂತೆ ಬೇದರಿಕೆ ಹಾಕಿದವರಿಗೆ ಭದ್ರತೆ ಕ್ಲಪಿಸಬೇಖು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಉಮಾಕಾಂತ ಹರಿಕಂತ್ರ, ನಾರಾಯಣ ಅಂಕೋಲೆಕರ್‌, ಸತೀಶ್‌, ಪೂರ್ಣಿಮಾ ಮಾಹೇಕರ್‌ ಇನ್ನಿತರರು ಇದ್ದರು.

loading...