ವಿವಿಧ ಕಾಮಗಾರಿಗೆ 1.58 ಕೋಟಿ ಬಿಡುಗಡೆ: ಶಾಸಕ ಬಾಲಚಂದ್ರ

0
11
loading...

ಕನ್ನಡಮ್ಮ ಸುದ್ದಿ-ಘಟಪ್ರಭಾ: ಸಮೀಪದ ಬಡಿಗವಾಡ ಗ್ರಾಮದ ಅಭಿವೃದ್ಧಿಗೆ 1.58 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಅವರು ಬಡಿಗವಾಡ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಗ್ರಾಪಂ.ಯಿಂದ ಜರುಗಿದ 1.58 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಕಾಮಗಾರಿಗೆ 1 ಕೋಟಿ ರೂ. ಅನುದಾನ ದೊರೆತಿದ್ದು, 3 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಂಕ್ರೀಟ ಹಾಗೂ ಡಾಂಬರೀಕರಣ ರಸ್ತೆ, ಫೆವರ್‌ ಬ್ರಿಗ್ಸ್‌, ಸಮುದಾಯ ಭವನ, ಗರಡಿ ಮನೆ, ‘ವ್ಹಿ’ ಮತ್ತು ‘ಯು’ ಸೇಫ್‌ ಗಟಾರ, ದೇವಸ್ಥಾನದ ಜೀರ್ಣೋದ್ಧಾರ ಸೇರಿದಂತೆ ಇತರೇ ಕಾಮಗಾರಿಗಳು ಈ ಯೋಜನೆಯಲ್ಲಿ ಸೇರಿವೆ ಎಂದು ಹೇಳಿದರು. 2004 ರಿಂದ ಇಲ್ಲಿಯವರೆಗೆ ಅರಭಾವಿ ಮತಕ್ಷೇತ್ರ ಎಲ್ಲ ಕ್ಷೇತ್ರಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿದೆ. ಮೊದಲಿನ ಪರಿಸ್ಥಿತಿ ಈಗಿಲ್ಲ. ಜನರಲ್ಲಿ ಜಾಗೃತಿ ಮೂಡುತ್ತಿದೆ ಎಂದರು.

ರಸಮಂಜರಿ ಕಾರ್ಯಕ್ರಮ: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂಗೊಳ್ಳಿ ರಾಯಣ್ಣಾ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಯಲ್ಲಪ್ಪ ಕುಡ್ಡಗೋಳ, ಮಾಳಪ್ಪ ಜಾಗನೂರ, ಶಂಕರ ಕಮತಿ, ಕಲ್ಲಪ್ಪ ಚೌಕಾಶಿ, ಬಸಪ್ಪ ಸನದಿ, ರಾಜೇಂದ್ರ ದೇಶಪಾಂಡೆ, ಡಿ.ಎಂ. ದಳವಾಯಿ, ಯಲ್ಲಪ್ಪ ಮಾಕನ್ನವರ, ಸಿದ್ದಪ್ಪ ಚೂಡಪ್ಪಗೋಳ, ಶಿವು ಕುಡ್ಡೆಮ್ಮಿ, ಶಿವಾನಂದ ಚೌಕಾಶಿ, ಪ್ರಭಾಶುಗರ ನಿರ್ದೇಶಕರಾದ ಶಿವಲಿಂಗ ಪೂಜೇರಿ, ಲಕ್ಷ್ಮಣ ಗಣಪ್ಪಗೋಳ, ರಾಮಣ್ಣಾ ಬಂಡಿ, ಎಪಿಎಂಸಿ ನಿರ್ದೇಶಕ ಶ್ರೀಪತಿ ಗಣೇಶವಾಡಿ, ಹಿಡಕಲ್‌ ಡ್ಯಾಂ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಮುತ್ತೆಪ್ಪ ಕುಳ್ಳೂರ, ಹಿರಿಯ ಪತ್ರಕರ್ತ ಮಡಿವಾಳಪ್ಪ ಮುಚಳಂಬಿ, ವಸಂತ ರಾಣಪ್ಪಗೋಳ, ಗ್ರಾಮ ಪಂಚಾಯತಿ ಸದಸ್ಯರು, ಅಧಿಕಾರಿಗಳಾದ ಎಫ್‌.ಜಿ.ಚಿನ್ನನ್ನವರ, ವಾಯ್‌.ಎಂ. ಗುಜನಟ್ಟಿ, ಎಸ್‌.ವ್ಹಿ. ಕಲ್ಲಪ್ಪನವರ, ಗುತ್ತಿಗೆದಾರ ರಾಜು ಕಸ್ತೂರಿ, ಮುಖಂಡರು ಉಪಸ್ಥಿತರಿದ್ದರು. ರಾಮಣ್ಣಾ ಭಟ್ಟಿ ಸ್ವಾಗತಿಸಿದರು.

loading...