ವೈದ್ಯಕೀಯ ಸೇವೆ ನೀಡುತ್ತಿರುವದು ಶ್ಲಾಘನೀಯ: ರಾಜನಾಥ ಸಿಂಗ್

0
20
loading...

ಕನ್ನಡಮ್ಮ ಸುದ್ದಿ
ಬೆಳಗಾವಿ : ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿ ಈ ಭಾಗದ ಜನರ ಭಾಗ್ಯ. ಕೆಎಲ್‍ಇ ಸಂಸ್ಥೆಯು ಸಮಾಜದ ಪರಿವರ್ತನೆಯಲ್ಲಿ ನಿಜವಾಗಿಯೂ ತೊಡಗಿಕೊಂಡಿರುವದಕ್ಕೆ ಇದು ಸಾಕ್ಷಿ. ಜನಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಸಂಸ್ಥೆಯು ನಿಜವಾದ ಕಳಕಳಿ ಹೊಂದಿದೆ. ಉಚಿತ ವೈದ್ಯಕೀಯ ಸೇವೆ ನೀಡುತ್ತಿರುವದು ಅತ್ಯಂತ ಶ್ಲಾಘನೀಯ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದರು.
ಕೆಎಲ್‍ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ಸುಮಾರು 15 ಕೋಟಿ ರೂ.ಗಳ ವೆಚ್ಚದಲ್ಲಿ ಅಳವಡಿಸಲಾದ ಜೀವಕೋಶಗಳ ಕಾರ್ಯವಿಧಾನವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಮೊಲೆಕ್ಯೂಲರ ಇಮೆಜಿಂಗ ಇನ್ ದಿ ನೂಕ್ಲಿಯರ ಮೆಡಿಸಿನ್ ಸ್ಪೆಶಾಲಿಟಿ ವಿಥ್ ಫೊಟೊನ ಎಮಿಸನ್ ಕಂಪ್ಯೂಟರೈಸ್ಡ್ ಟೊಮೊಗ್ರಾಫಿ (ಪಿಇಟಿ-ಸಿಟಿ) ಪಾಸಿಟ್ರಾನ ಎಮಿಸನ್ ಟೊಮೊಗ್ರಾಫಿ ( ಎಸ್‍ಪಿಇಸಿಟಿ) ಮತ್ತು ರೆಡಿಯೋ ನೂಕ್ಲಿಯರ ಥೆರಪಿ ಯುನಿಟ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಭವ್ಯವಾದ ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಮಾಡುವ ವೈದ್ಯರು ಅಷ್ಟೇ ಒಳ್ಳೆಯವರು. ಸಮಾಜದ ಅನಾರೋಗ್ಯವನ್ನು ಹೋಗಲಾಡಿಸಲು ತಮ್ಮ ವೈದ್ಯರು ನಿರಂತರವಾಗಿ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ಸೇವೆ ಅನನ್ಯ ಎಂದು ಬಣ್ಣಿಸಿದರು.
ಒಂದೆ ಸೂರಿನಡಿ ಸಕಲ ವೈದ್ಯಕೀಯ ಸೇವೆಗಳನ್ನು ಕಲ್ಪಿಸುತ್ತಿರುವ ಆಸ್ಪತ್ರೆಯು ನಿರಂತರವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಬದಲಾಗುತ್ತಿರುವ ಆವಿಷ್ಕಾರಗಳನ್ನು ಜನರಿಗೆ ತಲುಪಿಸುತ್ತಿದೆ. ಈಗ ಮತ್ತೊಂದು ಅತ್ಯಾಧುನಿಕವಾದ ಮೊಲೆಕ್ಯೂಲರ ಇಮೆಜಿಂಗ ಇನ್ ದಿ ನೂಕ್ಲಿಯರ ಮೆಡಿಸಿನ್ ಸ್ಪೆಶಾಲಿಟಿ ವಿಥ್ ಫೊಟೊನ ಎಮಿಸನ್ ಕಂಪ್ಯೂಟರೈಸ್ಡ್ ಟೊಮೊಗ್ರಾಫಿ (ಪಿಇಟಿ-ಸಿಟಿ) ಪಾಸಿಟ್ರಾನ ಎಮಿಸನ್ ಟೊಮೊಗ್ರಾಫಿ ( ಎಸ್‍ಪಿಇಸಿಟಿ) ಮತ್ತು ರೆಡಿಯೋ ನೂಕ್ಲಿಯರ ಥೆರಪಿ ಕೇಂದ್ರವನ್ನು ತೆರೆದು ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.
ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಸಂಸದರಾದ ಪ್ರಹ್ಲಾದ ಜೋಷಿ, ಸುರೇಶ ಅಂಗಡಿ, ಶಾಸಕರಾದ ಮಹಾಂತೇಶ ಕವಟಗಿಮಠ, ಸಂಜಯ ಪಾಟೀಲ, ಡಾ. ವಿ ಐ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಅಮಿತ ಕೋರೆ, ಅನಿಲ ಪಟ್ಟೇದ, ಎಸ್ ಸಿ ಮೆಟಗುಡ, ಅಶೋಕ ಬಾಗೇವಾಡಿ, ಡಾ. ವಿ ಎಸ್ ಸಾಧುನವರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಡಾ.ವಿವೇಕ ಸಾವೋಜಿ ಹಾಗೂ ಡಾ. ರಶ್ಮಿ ಅಂಗಡಿ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...