ಶಾಸ್ತ್ರೀಜಿಯವರ ಪುಣ್ಯಸ್ಮರಣೆ ದಿನ ಸರ್ಕಾರ ಮರೆಯುತ್ತಿದೆ

0
22
loading...

ಕನ್ನಡಮ್ಮ ಸುದ್ದಿ-ಆಲಮಟ್ಟಿ: ಮಾಝಿ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರೀಜಿಯವರ ಪುಣ್ಯಸ್ಮರಣೆ ದಿನವನ್ನು ಸರ್ಕಾರ ಮರೆಯುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಸ್ಥಳೀಯ ಕೃಷ್ಣಾಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ಹೇಳಿದರು.
ಗುರುವಾರ ರಾಕ್‌ ಉದ್ಯಾನದ ಆವರಣದ ಸಮೀಪದಲ್ಲಿರುವ ಮಾಜಿ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ನಂತರ ಮಾತನಾಡಿದ ಅವರು, ಶಾಸ್ತ್ರೀಜಿಯವರ ಹೆಸರಿನಲ್ಲಿರುವ ಆಲಮಟ್ಟಿ ಅಣೆಕಟ್ಟೆಯಿಂದ ಲಕ್ಷಾಂತರ ಎಕರೆ ಜಮೀನುಗಳು ನೀರಾವರಿಗೊಳಪಟ್ಟು ರೈತರ ಬದುಕಿಗೆ ಆಸರೆಯಾಗಿರುವ ಜಲಾಶಯಕ್ಕೆ ಅವರ ಹೆಸರನ್ನಿಟ್ಟ ಸರ್ಕಾರ ಅವರ ಪುಣ್ಯ ಸ್ಮರಣೆಯನ್ನು ಮರೆತಿರುವುದು ಈ ಭಾಗದ ಜನಪ್ರತಿನಿಧಿಗಳ ಕರ್ತವ್ಯ ನಿಷ್ಠೆಯನ್ನು ತೋರಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಶಂಕ್ರಪ್ಪ ದಂಡೀನ್‌, ಎ.ಎಸ್‌.ಕಾಳೆ, ಸಿದ್ದು ಚಿತ್ತವಾಡಗಿ, ಪರಶುರಾಮ ಹಮಾಪುರ ಇದ್ದರು.

loading...