ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ

0
29
loading...

ಯಲಬುರ್ಗಾ : ಗುಣಮಟ್ಟ ಶಿಕ್ಷಣ ಪಡೆದವರು ಸಮಾಜದ ಸುಧಾರಣಯಲ್ಲಿ ತೊಡಗಬೇಕು ಅಂದಾಗ ಮಾತ್ರ ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮದ ಬನಶ್ರೀ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಸಂಸ್ಥೆಗಳಯು ಬಡ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುತ್ತಿದ್ದು, ಆರೋಗ್ಯ ಬೆಳವಣಿಗೆ ಮನಶ್ರೀ ಸಮಸ್ತೆ ಶಿಕ್ಷಣ ಉತ್ತಮ ಸಾಧನೆಯತ್ತಾ ನಡೆಯುತ್ತಿರುವುಯದು ಶ್ಲಾಘನೇಯ ಕುಷ್ಟಗಿ ಎಸ್‌ವಿಸಿ ಸಂಸ್ಥೆಯ ಆಡಳಿತ ಅಧಿಕಾರಿ ಎ.ವೈ.ಲೋಕರೆ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಮೌಲ್ಯಾಧಿರತ ಶಿಕ್ಷಣ ನೀಡುವಲ್ಲಿ ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು.ದೇಶದ ಸಮಗ್ರ ಅಭಿವೃದ್ಧಿ ಗೊಳ್ಳಬೇಕಾದರೆ ಶಿಕ್ಷಣ ದಿಂದ ಮಾತ್ರ ಸಾಧ್ಯ.
ಈ ವೇಳೆಯಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರಿಗೆ ಸನ್ಮಾನಿಸಿದರು. ಸಂಸ್ಥೆಯ ಕಾರ್ಯದರ್ಶಿ ಶೇಖರಗೌಡ ರಾಮತ್ನಾಳ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯೆ ಕೆಂಚಮ್ಮ ಬಾವಿಕಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅನಂತ ಚವ್ಹಾಣ್‌, ಸಿದ್ದಮ್ಮ ಪಾಟೀಲ್‌, ಕೆ.ನಾಗರಾಜ್‌, ಹನುಮಂತಪ್ಪ ಬಾವಿಕಟ್ಟಿ ಇದ್ದರು.

loading...