ಶಿಕ್ಷಣದೊಂದಿಗೆ ಸಂಸ್ಕಾರಯುತ ಜೀವನ ಶ್ರೇಷ್ಠ: ಶಶಿಕಲಾ ಜೊಲ್ಲೆ

0
22
loading...

ಕನ್ನಡಮ್ಮ ಸುದ್ದಿಚಿಕ್ಕೋಡಿ 12: ಪಾಲಕರು ತಮ್ಮ ಮಕ್ಕಳಿಗೆ ಆಸ್ತಿಯನ್ನಷ್ಟೇ ಅಲ್ಲದೇ ಅವರ ಉಜ್ವಲ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರಯುತ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಬೇಕಾಗಿರುವುದು ಅವಶ್ಯಕವಾಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.ನಿಪ್ಪಾಣಿಯ ಸಂಭಾಜಿ ನಗರ ಹಾಗೂ ಜತ್ರಾಟವೇಸ್‌ ನಗರದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೊಲ್ಲೆ ಉದ್ಯೋಗ ಸಮುಹ ಹಾಗೂ ಧಾರವಾಡದ ಎಲ್‌.ಐ.ಸಿ ಸಂಸ್ಥೆಯ ಸಹಯೋಗದಲ್ಲಿ 93 ಜನ ವಿದ್ಯಾರ್ಥಿಗಳಿಗೆ 81 ಸಾವಿರ ರೂ. ಗಳ ಶಿಷ್ಯವೇತನವನ್ನು ವಿತರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳೇ ಈ ದೇಶದ ಮುಂದಿನ ಭವಿಷ್ಯವಾಗಿದ್ದು, ದೇಶ ಸಧೃಢವಾಗಲು ವಿದ್ಯಾರ್ಥಿಗಳ ಜ್ಞಾನಸಂಪತ್ತು ವೃದ್ಧಿಯಾಗುವುದು ಅತ್ಯವಶ್ಯಕವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿರುವ ಆರ್ಥಿಕ ಅಡಚಣೆಗಳ ಸಮಸ್ಯೆಯನ್ನು ನಿವಾರಿಸಲು ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹವು ಧಾರವಾಡದ ಎಲ್‌.ಐ.ಸಿ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ವಿತರಿಸುವ ಕಾರ್ಯವು ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ.ಜೊಲ್ಲೆ ಉದ್ಯೋಗ ಸಮುಹವು ಶೈಕ್ಷಣಿಕ ಕ್ರಾಂತಿಗಾಗಿ ಬದ್ಧವಾಗಿದ್ದು, ಇದರ ಫಲವಾಗಿ ಕಳೆದ 8 ವರ್ಷಗಳಲ್ಲಿ ಸುಮಾರು 6741 ವಿದ್ಯಾರ್ಥಿಗಳಿಗೆ 40.44 ಲಕ್ಷ. ರೂ. ಗಳ ಶಿಷ್ಯವೇತನವನ್ನು ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಭಾವರಿ ಖಾಂಡಕೆ, ನಗರ ಸೇವಕರಾದ ದೀಪಕ ಮಾನೆ, ನೀತಾ ಬಾಗಡಿ, ಅಶೋಕ ರಾವುತ, ಅವಿನಾಶ ಮಾನೆ, ರಮೇಶ ವೈದ್ಯ, ಮಹೇಶ ಸೂರ್ಯವಂಶಿ, ಆಕಾಶ ಮಾನೆ, ನಗರದ ನಾಗರಿಕರು, ಮಹಿಳೆಯರು ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

loading...