ಶಿರಗುಪ್ಪಿ ಆಡಳಿತ ವ್ಯವಸ್ಥೆ ರಾಜ್ಯಕ್ಕೆ ಮಾದರಿ

0
30
loading...

ಕಾಗವಾಡ 18: ನನ್ನ 35 ವರ್ಷದ ಸೇವೆಯಲ್ಲಿ ಅಥಣಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಪೂರೈಕೆ, ಚರಂಡಿ, ರಸ್ತೆ ಇನ್ನುಳಿದ ಸೌಲಭ್ಯಗಳು ದೇಶದಲ್ಲಿ ಎಲ್ಲಿಯೂ ಕಂಡಿಲ್ಲ. ಇದೊಂದು ಮಾದರಿ ಗ್ರಾಮ ಎಂದು ಕೇಂದ್ರದ ಎಂಐಡಿಎಎಸ್‌ ವಿಭಾಗದ ಸಂಚಾಲಕ ಡಾ. ಎಸ.ಜನಕರಾಜನ್‌ ಹೇಳಿದರು. ಲಬುಧುವಾರ ಸಂಜೆ ಭಾರತ ಸರ್ಕಾರದ ಆಯ.ಎಸ ಅಧಿಕಾರಿ ತಂಡ ಶಿರಗುಪ್ಪಿ ಗ್ರಾಮಕ್ಕೆ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗ್ರಾಮದ ಅಭಿವೃದ್ಧಿಗಾಗಿ ನೀಡಿರುವ ಬೇರೆ-ಬೇರೆ ಯೋಜನೆಗಳಲ್ಲಿ ನೀಡಿರುವ ಅನುದಾನಗಳ ಸದ್ದಬಳಿಕೆ ಆಗಿದೆ ಈ ಬಗ್ಗೆ ಪರಿಶಿಲಿಸಲು ಭೇಟಿ ನೀಡಿದರು.ಲಶಿರಗುಪ್ಪಿದಲ್ಲಿಯ ಶುದ್ಧ ಕುಡಿಯುವ ನೀರಿನ ಘಟಕ ಸ್ಥಳಕ್ಕೆ ತಂಡದ ಅಧಿಕಾರಿಗಳಾದ ಡಾ. ಎಸ.ಜನಕರಾಜನ ಪ್ರೋಫೆಸರ ಕೆ.ಕೆ.ಝಾ, ಬೆಂಗಳೂರಿನ ಪಿ.ಆರ.ಡಿ ವಿಭಾಗದ ಮುಖ್ಯ ಅಭಿಯಂತರಾದ ಗುರು ಪ್ರಸಾದ, ರಾಜ್ಯದ ಮನರೇಗಾ ಯೋಜನೆಯ ರಾಜ್ಯದ ಆಯುಕ್ತರಾದ ಉಪೆಂದ್ರ ಸಿಂಘ, ಬೆಳಗಾವಿಯ ಜಿಲ್ಲಾ ಪಂಚಾಯತಿಯ ಸಿ.ಇ.ಒ.ರಾಮಚಂದ್ರ.ಆರ ಮುಖ್ಯ ಅಭಿಯಂತರಾದ ಅಶೋಕ ವಾಸ್ನದ ಎ.ವಿ.ಹೋಸಮನಿ, ರಾಜೇಂದ್ರ ಅಮಿನಬಾಂವಿ, ರವಿ ಬಂಗಾರಪ್ಪಾನ್ನವರ ಇ ಅಧಿಕಾರಿಗಳು ಭೇಟಿ ನೀಡಿ ಪರಿಶಿಲಿಸಿದರು. ಸ್ಥಳಿಯ ಗ್ರಾಮದ ಗ್ರಾಮಸ್ತರು, ಗ್ರಾ.ಪಂ ಸದಸ್ಯರನ್ನು ವಿಚಾರಿಸಿ ಸಂತಸ ವ್ಯಕ್ತ ಪಡಿಸಿದರು.ಲಗ್ರಾಮ ಪಂಚಾಯತಿ ಸಭಾಂಗನದಲ್ಲಿ ಸಭೆಸೇರಿ ರಾಜ್ಯ ಸರ್ಕಾರದ ಯೋಜನೆಗಳು ಜನರಿಗೆ ಸಂಧಾನವಾಗುತ್ತಿವೆ ಅಥವಾ ಇಲ್ಲೊ ಈ ಬಗ್ಗೆ ಪರಿಶಿಲನೆ ಮಾಡಿದರು. ಗ್ರಾ.ಪಂ ಆಧ್ಯಕ್ಷ ಮಹಮ್ಮದ ಗೌಂಡಿ, ಗ್ರಾ.ಪಂ ಉಪಾಧ್ಯಕ್ಷ ಸುನಂದಾ ನಾಂದನಿ, ರಾಮಗೌಡಾ ಪಾಟೀಲ ನ್ಯಾಯವಾದಿಗಳಾದ ಅಭಯ ಅಕ್ಕಿವಾಟೆ, ಪಿ.ಡಿ.ಓ. ಗೋಪಾಲ ಮಾಳಿ ಇವರು ಅಧಿಕಾರಿಗಳ ಪ್ರಶ್ನಗಳಿಗೆ ಉತ್ತರಿಸಿ ಅಧಿಕಾರಿಗಳನ್ನು ಸನ್ಮಾನಿಸಿದರು.

loading...