ಶಿರಸಿ ಎಪಿಎಂಸಿಗೆ ಇ-ಟೆಂಡರ್‌ ಜಾರಿಗೆ

0
21
loading...

ಕನ್ನಡಮ್ಮ ಸುದ್ದಿ-ಶಿರಸಿ: ದೇಶದಲ್ಲಿ ಮೊದಲ ಬಾರಿಗೆ ಇ-ಟೆಂಡರ್‌ ವ್ಯವಸ್ಥೆ ಜಾರಿಗೆ ತರುವ ಮೂಲಕ ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆಗೆ ನಾಂದಿ ಹಾಡಿದ ಶಿರಸಿ ಎಪಿಎಂಸಿ ಚುನಾವಣೆ ಗುರುವಾರದಿಂದ ರಂಗು ಪಡೆದುಕೊಳ್ಳುತ್ತಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ತಮ್ಮ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಬೆಂಬಲದೊಂದಿಗೆ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು….
ತಾಲೂಕಿನ ಹುಲೇಕಲ್‌ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ನಾರಾಯಣ ಸಿದ್ಧಿ, ಶಿರಸಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಅಮರ ನೇರಲಕಟ್ಟೆ, ಯಡಳ್ಳಿ ಮಹಿಳಾ ಮೀಸಲು ಕ್ಷೇತ್ರದಿಂದ ನೇತ್ರಾವತಿ ಗೌಡ, ಸಂಪಖಂಡ ಸಾಮಾನ್ಯ ಕ್ಷೇತ್ರದಿಂದ ವಿ.ಎಂ.ಹೆಗಡೆ ಮತ್ತು ಕೆ.ಆರ್‌.ಹೆಗಡೆ ನಾಮಪತ್ರ ಸಲ್ಲಿಸಿದ್ದು, ಓರ್ವರು ನಾಮಪತ್ರ ವಾಪಸ್‌ ಪಡೆಯಲಿದ್ದಾರೆ. ಮಂಜಗುಣಿ ಹಿಂದುಳಿದ ವರ್ಗ ‘ಅ’ ಮೀಸಲು ಕ್ಷೇತ್ರದಿಂದ ಮಾರುತಿ ನಾಯ್ಕ ಹಾಗೂ ಶಿವಳ್ಳಿ ಸಾಮಾನ್ಯ ಕ್ಷೇತ್ರದಿಂದ ಆನಂದ ಹೆಗಡೆ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು….
ತಾಲೂಕಿನ ಶಿವಳ್ಳಿ ಸಾಮಾನ್ಯ ಕ್ಷೇತ್ರಕ್ಕೆ ವಿಶ್ವನಾಥ ಶಿಗೇಹಳ್ಳಿ, ಬಿಸಲಕೊಪ್ಪ ಸಾಮಾನ್ಯ ಕ್ಷೇತ್ರದಿಂದ ನರೇಶ ಭಟ್ಟ ಹಾಗೂ ಹುಲೇಕಲ್‌ ಪರಿಶಿಷ್ಟ ಪಂಗಡ ಕ್ಷೇತ್ರಕ್ಕೆ ಮಧು ಸಾಕೆಣ್ಣನವರ್‌ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ ಬಸಪ್ಪ ಪೂಜಾರಿ ನಾಮಪತ್ರ ಸ್ವೀಕರಿಸಿದರು.
ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ ದುಭಾಶಿ, ಪ್ರಮುಖರಾದ ಶಾಂತಾರಾಮ ಹೆಗಡೆ, ಎನ್‌.ಪಿ.ಗಾಂವಕರ್‌, ಅಬ್ಬಾಸ್‌ ತೋನ್ಸೆ, ಎಸ್‌.ಕೆ.ಭಾಗ್ವತ್‌, ಸತೀಶ ನಾಯ್ಕ, ಶೈಲೇಶ ಜೋಗಳೇಕರ್‌, ಮಾಧವ ರೇವಣಕರ್‌, ಬಿಜೆಪಿಯ ಅಭ್ಯರ್ಥಿಗಳ ಪರವಾಗಿ ಉಷಾ ಹೆಗಡೆ, ಚಂದ್ರು ಎಸಳೆ, ಕೆರಿಯಾ ಬೋರಕರ್‌ ಸೇರಿದಂತೆ ಇತರರು ಹಾಜರಿದ್ದರು.

loading...