ಶ್ರೇಷ್ಟ ವಚನಕಾರ ಅಂಬಿಗರ ಚೌಡಯ್ಯ: ಸಚಿವ ರಾಯರೆಡ್ಡಿ

0
32
loading...

ಯಲಬುರ್ಗಾ: ಹನ್ನೆರಡನೇಯ ಶತಮಾನದಲ್ಲಿ ಅಂಬಿಗರ ಚೌಡಯ್ಯನವರು ಶ್ರೇಷ್ಟ ವಚನಕಾರರಾಗಿ ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಾಜವನ್ನು ಬದಲಾವಣೆ ತಂದವರಲ್ಲಿ ಪ್ರಮುಖರಾಗಿದ್ದವರು. ಅಂಥವರ ಆದರ್ಶ ತತ್ವಗಳನ್ನು ನಾವೇಲ್ಲರೂ ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವ ಮೂಲಕ ಉತ್ತಮ ನಾಡನ್ನು ಕಟ್ಟುವಂತಾ ಕೆಲಸ ಮಾಡೋಣ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸಲಹೆ ನೀಡಿದರು.
ತಾಲೂಕಾ ಆಡಳಿತ ವತಿಯಿಂದ ಸೋಮುವಾರ ಪಟ್ಟಣದ ಹಳೆ ಪಪಂ ಅವರಣದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು,12ನೇ ಶತಮಾನದಲ್ಲಿ ಬಸವಣ್ಣನವರ ಕಲ್ಯಾಣದಲ್ಲಿ ಅಂಬಿಗರ ಚೌಡಯ್ಯನವರು ಕಾಲಘಟದಲ್ಲಿನ ಲಿಂಗ ಭೇದ, ಜಾತಿ ಮತ್ತು ವರ್ಗ ತಾರತಮ್ಯ,ಶೋಷಣೆ ಮತ್ತು ಅಜ್ಞಾನದ ವಿರುದ್ದ ಸಿಡಿಲಿನಂಥ ವಚನಗಳ ಮೂಲಕ ಜನರಲ್ಲಿ ಜಾಗೃತಿಯುಂಟು ಮಾಡಿದ ಶರಣರಾಗಿದ್ದರು. ಜಾತಿ ಧರ್ಮ ಯಾವುದೇ ಬೇಧವಿಲ್ಲದೆ ಎಲ್ಲಾ ಜನಾಂಗಳ ಶ್ರೇಯೋಭಿವೃದ್ದಿಗಾಗಿ ಹೋರಾಡಿದ ಮಹನೀಯರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದಾರೆ.ಚೌಡಯ್ಯನವರು ನೇರವಾಗಿ ನುಡಿದಂತೆ ಶರಣರಾಗಿದ್ದವರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಉಪನ್ಯಾಸ ನೀಡಿ, ಅಂಬಿಗೇರ ಚೌಡಯ್ಯನವರು ಸಮಾಜದಲ್ಲಿ ಜಾತಿಬೇದ,ವಂಚನೆ,ಮೋಸ,ಶೋಷಣೆ,ಅಜ್ಞಾನ,ಡಾಂಭಿಕತೆ,ವಿರುದ್ದ ತಮ್ಮ ವಚನಗಳ ಮೂಲಕ ಇಡೀ ಸಮಾಜವನ್ನು ಸುಧಾರಿಸುವಲ್ಲಿ ಹೋರಾಡಿದ ನಿಜಶರಣರಾಗಿದ್ದರು.ಇಂಥ ಶರಣರ ಜಯಂತಿ ಕಾರ್ಯಕ್ರಮಕ್ಕೆ ಇದೇ ಸಮಾಜದವರು ಭಾಗವಹಿಸಬೇಕೆಂದು ಇಲ್ಲಾ.ಎಲ್ಲಾ ವರ್ಗದವರು ಶರಣರ ಜಯಂತಿಯಲ್ಲಿ ಭಾಗವಹಿಸಬೇಕು.ಅವರ ತತ್ವವನ್ನು ತಿಳಿಯಬೇಕು. ಇತಿಹಾಸವು ಮರೆಯಬಾರದು ಎಂಬಾ ದೃಷ್ಠಿಯಿಂದ ರಾಜ್ಯ ಸರಕಾರವು ಶರಣರ ಜಯಂತಿಯನ್ನು ಆಚರಿಸುತ್ತಾ ಬಂದಿದೆ.ಅವರ ತತ್ವಗಳನ್ನು ನಾವೇಲ್ಲರೂ ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಜೈವಿಕ ಇಂಧನ ಮಂಡಳಿಯ ನಿರ್ದೇಶಕ ಬಸವರಾಜ ಉಳ್ಳಾಗಡ್ಡಿ ಮಾತನಾಡಿ,ಶರಣ ಅಂಬಿಗರ ಚೌಡಯ್ಯನವರು ನಾಡಿಗೆ ನೀಡಿದ ವಚÀನ ಸಾಹಿತ್ಯ ಅಮೋಘವಾಗಿದ್ದು,ಅಂಬಿಗರ ಚೌಡಯ್ಯನವರ ಚಿಂತನೆಗಳನ್ನು, ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದಕ್ಕೂ ಮೊದಲು ಅಂಬಿಗರ ಚೌಡಯ್ಯನವರ ಭಾವಚಿತ್ರ ಮೆರವಣಿಗೆಯನ್ನು ವಿವಿಧ ವಾಧ್ಯ ಮೇಳದೊಂದಿಗೆ ಕುಂಭ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚಾರಿಸಿತು.
ತಹಶೀಲ್ದಾರ ರಮೇಶ ಅಳವಂಡಿಕರ, ಜಿಪಂ ಸದಸ್ಯ ಹನಮಂತಗೌಡ ಚಂಡೂರು,ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡರ,ಪಪಂ ಅಧ್ಯಕ್ಷೆ ಜಯಶ್ರೀ ಅರಕೇರಿ,ಸ್ಥಾಯಿ ಸಮಿತಿ ಅಧ್ಯಕ್ಷೆ ಶರಣಮ್ಮ ಪೂಜಾರ,ವರ್ತಕ ಸಂಗಣ್ಣ ಟೆಂಗಿನಕಾಯಿ,ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

loading...