ಸಂಗೀತ ಒತ್ತಡ ನಿವಾರಿಸುವ ಔಷಧಿ: ಡಾ.ಅರಳಲೆಮಠ

0
9
loading...

ಕನ್ನಡಮ್ಮ ಸುದ್ದಿ-ಬಂಕಾಪುರ : ದಿನನಿತ್ಯ ಸಂಗೀತ ಪಠಣ ಮಾಡುವದರಿಂದ ಅಥವಾ ಆಲಿಸುವದರಿಂದ ಮನುಷ್ಯ ಒತ್ತಡದ ಬದುಕಿನಿಂದ ಹೊರಬಂದು ಚೈತನ್ಯಶೀಲನಾಗಿ ಉತ್ತಮ ಆರೋಗ್ಯವನ್ನು ಪಡೆಯಬಲ್ಲ ಎಂದು ಡಾ.ಆರ್‌.ಎಸ್‌.ಅರಳಲೆಮಠ ಹೇಳಿದರು.
ಅವರು ಪಟ್ಟಣದ ಅರಳಲೆಮಠದ ಸಭಾಂಗಣದಲ್ಲಿ ಗುರುವಾರ ರಾತ್ರಿ ಲಿಂ.ರುದ್ರಮುನಿಶ್ವರ ಪುಣ್ಯಾರಾಧನೆ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮವನ್ನು ಉದ್ದೇಸಿಸಿ ಮಾತನಾಡಿದ ಅವರು ಸಂಗೀತದ ಸಾಧಕರಾಗಬೇಕಾದರೆ ಕಠಿಣ ಪರಿಶ್ರಮದ ಅಗತ್ಯತೆಯಿದೆ. ಆ ನಿಟ್ಟಿನಲ್ಲಿ ಪಟ್ಟಣದ ಹಾಗು ಗ್ರಾಮಿಣ ಬಾಗದ ಮಕ್ಕಳ ಅನಕೂಲಕ್ಕಾಗಿ ಶ್ರೀ ರುದ್ರಮುನಿಶ್ವರ ಸಂಗೀತ ಪಾಠ ಶಾಲೆಯನ್ನು ತೆರೆಯಲಾಗಿದ್ದು ಇದರಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳುವಮೂಲಕ ಸಂಗೀತ ಸಾದಕರಾಗಿ ಎಂದು ಹೇಳಿದರು.
ಕಾರ್ಯಕ್ರಮದ ನಂತರ ಶ್ರೀ ರುದ್ರಮುನಿಶ್ವರ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಿತು. ಪಾಠಶಾಲೆಯ ವಿದ್ಯಾರ್ಥಿಗಳು ತಮ್ಮ ಸಿರಿಕಂಠದ ಪ್ರತಿಬೆಯನ್ನು ಭಕ್ತಿಗೀತೆ ಭಾವಗೀತೆಗಳನ್ನು ಹಾಡುವಮೂಲಕ ನೇರೆದ ಪ್ರೇಕ್ಷಕರ ಮನಸೂರಗೊಂಡರು.
ಸಂಗೀತ ಪಾಠಶಾಲೆಯ ಶಿಕ್ಷಕ ಶಿವಯ್ಯ ಇಟಗಿಮಠ, ಬಂಕಣ್ಣ ಕುರಗೋಡಿ, ರಾಮಣ್ಣ ವಳಗೇರಿ, ಬಸವರಾಜ ನಾರಾಯಣಪುರ, ಸಿದ್ದಲಿಂಗಪ್ಪ ಸಕ್ರಿ, ರಾಮಣ್ಣ ಕುರಗೋಡಿ, ಸೋಮಶೇಖರ ಗೌರಿಮಠ, ಶೆಕಣ್ಣ ಅಂಕಲಕೋಟಿ, ನಿಂಗನಗೌಡ್ರ ಪಾಟೀಲ, ಶಂಬಣ್ಣ ವಳಗೇರಿ, ಓಂಪ್ರಕಾಶ ಅಂಗಡಿ, ವೀರಪ್ಪ ಮತ್ತಿಗಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಎಂ.ಬಿ.ಉಂಕಿ ನಿರೂಪಿಸಿದರು.

loading...