ಸಂಬಂಧಗಳ ಜೋಡಣೆ ತಾಯಿಯ ಜವಾಬ್ದಾರಿ: ಕಿರಣ ಕೋರೆ

0
31
loading...

ನಿಪ್ಪಾಣಿ 03: ಪರಸ್ಪರ ಸಂಬಂಧಗಳ ಕೊಂಡಿ ಕಳಚಿಕೊಳ್ಳುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ತಾಯಿ ಮಹತ್ತರವಾದ ಜವಾಬ್ದಾರಿ ನಿಭಾಯಿಸಬೇಕಾಗಿದೆ ಎಂದು ಮಹಾರಾಷ್ಟ್ರದ ಲಾತೂರ್‌ನ ಖ್ಯಾತ ವಾಗ್ಮಿ ಕಿರಣ ಕೋರೆ ಅಭಿಪ್ರಾಯಪಟ್ಟರು.ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರಖಾನೆ ಸಂಸ್ಥಾಪಕ ಚೇರಮನ್‌ ದಿ.ಬಾಬುರಾವ ಪಾಟೀಲ ಬೂಧಿಹಾಳಕರ ಅವರ 28ನೇ ಪುಣ್ಯಸ್ಮರಣೆ ನಿಮಿತ್ತ ಕಾರಖಾನೆ ಬಳಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ‘ತಾಯಿ : ನಿನ್ನೆ ಮತ್ತು ಇಂದು‘ ವಿಷಯದ ಕುರಿತು ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.ವಾಚನ ಸಂಸ್ಕೃತಿ ಬೆಳೆಸಿಕೊಂಡು ತಾಯಿ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ತುಂಬಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಕಾರಖಾನೆ ಮಾಜಿ ಚೇರಮನ್‌ ಸುಕುಮರ ಪಾಟೀಲ,ಪ್ರಾ.ದತ್ತಾ ಪಾಟೀಲ ಮಾತನಾಡಿದರು. ಕೊಲ್ಲಾಪುರ ವೀರಶೈವ ಬ್ಯಾಂಕ್‌ನ ಉಪಾಧ್ಯಕ್ಷ ಅನೀಲ ಸೋಲಾಪುರೆ,ಸಾಮಾಜಿಕ ಕಾರ್ಯಕರ್ತೆ ಸರಲಾತಾಯಿ ಪಾಟೀಲ,ಸೂರ್ಯಕಾಂತ ಪಾಟೀಲ,ಕಾಕಾಸೋ ಕೋಯಿಟೆ,ಅರುಣ ನಿಕಾಡೆ,ಅಣ್ಣಾಸಾಹೇಬ ಇಂಗಳೆ,ಶಂಕರ ಘಾಟವಡೆ ವೇದಿಕೆಯಲ್ಲಿದ್ದರು.ಚಿತ್ರಕಲೆ ಸ್ಪರ್ಧೆ : ಪುಣ್ಯತಿಥಿ ನಿಮಿತ್ತ ಬಾಬುರಾಬ ಬೂಧಿಹಾಳಕರ ಎಜ್ಯೂಕೇಶನ್‌ ಸೊಸೈಟಿ ವತಿಯಿಂದ ಆಯೋಜಿಸಲಾದ ಚಿತ್ರಕಲೆ ಸ್ಪರ್ಧೆಯಲ್ಲಿ 170 ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಮಾಜಿ ಸಚಿವ ವೀರಕುಮಾರ ಪಾಟೀಲ, ಚಿಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ರಾಜೇಶ ಕದಂ,ಸುಜಯ ಪಾಟೀಲ, ಜ್ಯೋತಿಪ್ರಸಾದ ಜೊಲ್ಲೆ, ವಿಜಯ ಮೇತ್ರಾಣಿ, ಬಾಬಾಸಾಹೇಬ ದೇಸಾಯಿ, ದತ್ತಾ ಲಾಟಕರ, ಮೋಹನ ಬುಡಕೆ, ಶ್ರೀನೀವಾಸ ಸಂಕಪಳ ಮತ್ತಿತರರು ಉಪಸ್ಥಿತರಿದ್ದರು.

loading...