ಸಂಭ್ರಮದ ತೆರೆಕಂಡ ಪ್ರಭುಸಿರಿ ದಶಮಾನೋತ್ಸವ

0
15
loading...

ಕನ್ನಡಮ್ಮ ಸುದ್ದಿ-ತೇರದಾಳ: ಸಮೀಪದ ಹಳಿಂಗಳಿ ಗ್ರಾಮದ ಅಲ್ಲಮಪ್ರಭು ದೇವಸ್ಥಾನದ ದಶಮಾನೋತ್ಸವದ ನಿಮಿತ್ಯವಾಗಿ ಹಮ್ಮಿಕೊಂಡ ಪ್ರಭು ಸಿರಿ ಸಂಭ್ರಮ ಕಾರ್ಯಕ್ರಮವು ಮಂಗಳವಾರದಂದು ಸಂಭ್ರಮದ ತೆರೆ ಕಂಡಿತು.
ಹೋಮದೊಂದಿಗೆ ಆರಂಭ: ಮಂಗಳವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಹೋಮ ಮತ್ತು ಪೂಜಾದಿಗಳೊಂದಿಗೆ ಕಾರ್ಯಕ್ರಮಗಳು ಪ್ರಾರಂಭಗೊಂಡವು. ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮವು ಮಧ್ಯಾಹ್ನ ಜರುಗಿತು. ದಶಮಾನೋತ್ಸವದ ಮುಖ್ಯಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಮತ್ತು ಮಾಜಿ ಶಾಸಕ ಸಿದ್ದು ಸವದಿ ಭಾಗವಹಿಸಿ, ಮಾತನಾಡುತ್ತ ಧಾರ್ಮಿಕ ಕ್ಷೇತ್ರಗಳಲ್ಲಿ ರಾಜಕೀಯದ ಮಾತುಗಳಿಂದ ದೂರ ಇರುವುದು ಓಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ನಾವು ಇಲ್ಲಿ ಸೇರಿರುವುದು ಅಲ್ಲಮಪ್ರಭುಗಳ ಭಕ್ತರಾಗಿ ಮಾತ್ರ. ಪವಾಡ ಪುರುಷರಾದ ಅವರ ಮಾರ್ಗವನ್ನು ಅನುಸರಿಸುವುದು ಭಕ್ತರಾದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಆಧ್ಯಾತ್ಮಿಕ ಸಂಭ್ರಮದ ಕಾರ್ಯಕ್ರಮದಲ್ಲಿ ಗೋಕಾಕದ ಸುವರ್ಣಾತಾಯಿ, ಬನಹಟ್ಟಿಯ ಮಹಾಂತ ಶರಣರು, ಝುಂಜರವಾಡ ಬಸವರಾಜೇಂದ್ರ ಶರಣರು, ಇಂಡಿ ಸಾವಿತ್ರೆಮ್ಮ, ಕಪರಟ್ಟಿ ಬಸವರಾಜ ಸ್ವಾಮಿಜಿ, ಪ್ರಾಂಶುಪಾಲ ಸುನಂದಾ ಶಿರೂರ ಮಾತನಾಡಿದರು. ಮಹಾವೀರ ಪ್ರಭುಗಳು ತಮ್ಮ ಆಶೀರ್ವಚನದಲ್ಲಿ ಪ್ರಾಪಂಚಿಕ ಜೀವನದ ಎಲ್ಲವನ್ನು ಮರೆತು ಆದ್ಯಾತ್ಮಿಕತೆಯಲ್ಲಿ ಒಂದುಗೂಡಿದ ತಮ್ಮೆಲ್ಲರಿಗೂ ಹಾಗೂ ಪಾಲ್ಗೊಂಡ ಮುತ್ತೈದೆಯರು ಅಲ್ಲಮರ ಈ ನೆಲದಲ್ಲಿ ಭಕ್ತಿಯ ಸಿಂಚನ ಸಂಚರಿಸಿಕೊಂಡಿದ್ದಿರಿ. ಮಾನವೀಯತೆಯ ಗುಣಗಳನ್ನು ಅರಸಿ ಬರುವವರಿಗೆ ಗ್ರಾಮಸ್ಥರು ಆದರ್ಶವಾಗುವುದರ ಮೂಲಕ ಗುರುವಿನ ವಿಶೇಷ ಆಶಿರ್ವಾದವನ್ನು ಪಡೆದುಕೊಂಡಿದ್ದಿರಿ. ಭಕ್ತನು ಗುರುವಿಗೆ ಮಾನವಿಯತೆಯಿಂದ ಭಕ್ತಿಯ ಸೇವೆ ಸಲ್ಲಿಸಬೇಕು. ಅದಾವುದು ಆಗಲಿಲ್ಲವೆಂದರೇ ಸಮಾಧಾನವೇ ಮೂಲ ಸೇವೆಯಾಗಿದೆ. ಹತ್ತು ದಿನಗಳ ಕಾರ್ಯಕ್ರಮಕ್ಕೆ ಭಕ್ತಿಯಿಂದ ಸೇವೆಸಲ್ಲಿಸಿದ ಸರ್ವಭಕ್ತರಿಗೂ ಅಲ್ಲಮರು ಆಯುರಾರೋಗ್ಯ ಐಶ್ವರ್ಯಗಳನ್ನು ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ರಾಮಪ್ಪ ಹನಮನ್ನವರ, ಜಿಪಂ ಮಾಜಿ ಅಧ್ಯಕ್ಷ ಬಿ.ಎ. ದೇಸಾಯಿ, ಬಾಬಾಗೌಡ ಪಾಟೀಲ, ಸುರೇಶ ಅಕ್ಕಿವಾಟ, ಗ್ರಾಪಂ ಅಧ್ಯಕ್ಷ ಪರಪ್ಪ ಹಿಪ್ಪರಗಿ, ವರ್ಧಮಾನ ಖೇಬೋಜಿ, ಬಿ.ಬಿ. ವೆಂಕಟಾಪೂರ, ಮಾಧವರಾವ ಪಾಟೀಲ, ಭರತೇಶ ಬಿರಾದಾರಪಾಟೀಲ ಸೇರಿದಂತೆ ಹಿರಿಯರು, ಮುಖಂಡರು, ಯುವಕರು, ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಇದ್ದರು.

loading...