ಸಂಶೋಧನಾ ಕ್ಷೇತ್ರದ ಬೆಳವಣಿಗೆಯಾಗಲಿ: ಡಾ.ಎನ್‌.ಎ. ಮಗದುಮ್ಮ

0
23
loading...

ಚಿಕ್ಕೋಡಿ 07: ವಿಶ್ವದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಅನುಕೂಲತೆಗಳ ಬಗೆಗೆ ಜನ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ಹೀಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಜ್ಞಾನ-ವಿಜ್ಞಾನಗಳ ಬೆಳವಣಿಗೆಯಾದರೆ ಭವಿಷ್ಯದ ಪೀಳಿಗೆಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಲಿದೆಂದು ಗೊಮಟೇಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಎನ್‌.ಎ. ಮಗದುಮ್ಮ ಹೇಳಿದರು.ತಾಲೂಕಿನ ಅಂಕಲಿಯಲ್ಲಿ ಗೊಮಟೇಶ ಶಿಕ್ಷಣ ಸಂಸ್ಥೆಯ ಗೊಮ್ಮಟ ಹಬ್ಬದ ನಿಮಿತ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಎನ್‌.ಎ. ಮಗದುಮ್ಮ ಪಾಲಿಟೆಕ್ನಿಕ ಆವರಣದಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತ, ಇಂದಿನ ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರದಲ್ಲಿ ಹೊಸತನ ಹುಡುಕುವ ನಿಟ್ಟಿನಲ್ಲಿ ಸಂಶೋಧನಾ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ತೋರುವ ಮೂಲಕ ಆಧುನಿಕ ಜನಜೀವನ ಸುಧಾರಿಸಬೇಕೆಂದರು. ಗೊಮಟೇಶ ಶಿಕ್ಷಣ ಸಂಸ್ಥೆ ಪ್ರೌಢ ಶಾಲಾ ವಿದ್ಯಾರ್ಥಿಗಳ ವೈಜ್ಞಾನಿಕ ಸಂಶೋಧನೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವಿಜ್ಞಾನ ವಸ್ತು ಪ್ರದರ್ಶನ ಒಂದು ಉತ್ತಮ ವೇದಿಕೆಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತನ್ನದೇ ಹೊಸ ಹೊಸ ಆಲೋಚನೆಗಳಿತ್ತವೆ. ಆ ಆಲೋಚನೆಗಳ ರೂಪುರೇಷೆ ಹಾಕಿಕೊಡುವ ಕೆಲಸ ಶಿಕ್ಷಕರು ಮಾಡಬೇಕೆಂದರು. ಸಂಸ್ಥೆಯ ಕಾರ್ಯದರ್ಶಿ ಲಲಿತಾ ಮಗದುಮ್ಮ, ಪಾಲಿಟೆಕ್ನಿಕ ಪ್ರಾಚಾರ್ಯೆ ವಿ.ಎ. ಜಾಧವ ಮಾತನಾಡಿದರು. ಕಾರ್ಯಾಗಾರದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ 66 ಶಾಲೆಯ 350ಕ್ಕೂ ವಿದ್ಯಾರ್ಥಿಗಳು 120ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದರು.ನಿರ್ಣಾಯಕರಾಗಿ ಎನ್‌.ಎಸ್‌. ನಿಡಗುಂದಿ,ಬಿ.ಆರ್‌. ಸಂಗಪ್ಪಗೋಳ, ಡಾ.ಆರ್‌.ಬಿ. ಫಕ್ಕನ್ನವರ, ಎಸ್‌.ಕೆ. ಥೋರುಸೆ, ಎಸ್‌.ಎಸ್‌. ಮಾನೆ, ಕಲ್ಮೇಶ ಕಮತೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...