ಸಮಾಜಕ್ಕೆ ಮಾದರಿಯಾದ 96ರ ವಯಸ್ಸಿನ ಲಕ್ಷ್ಮಣ

0
20
loading...

ಕನ್ನಡಮ್ಮ ಸುದ್ದಿ-ಕುಮಟಾ: ದೇಹಕ್ಕೆ ವಯಸ್ಸಾದಂತೆ ಮುಪ್ಪು ಆವರಿಸಿ ದೈಹಿಕ ಶಕ್ತಿ ಕುಂಟಿತಗೊಂಡು ಬದುಕು ಬೇಡವೆನಿಸುವುದು ಪ್ರತಿಯೊಬ್ಬರ ಬದುಕಿನಲ್ಲಿ ಕಾಣಿಸುವುದ ಸಹಜ ಕ್ರೀಯೆ. ಎಳೆಯ ವಯಸ್ಸಿನಲ್ಲಿ ನಗು ನಗುತ್ತ ಜೀವನಾನಂದವನ್ನು ಆಶ್ವಾದಿಸುವ ಅದೇಷ್ಟೋ ಯುವ ಜನತೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಅಂತ್ಯ ಕಾಣುತ್ತಾರೆ. ಪರಿಸ್ಥಿತಿ ಹಿಗಿರುವಾಗಲೂ 96 ರ ವಯಸ್ಸಿನ ಲಕ್ಷ್ಮಣ ಅಜ್ಜ ಬದುಕನ್ನು ಪ್ರೀತಿಸುತ್ತಾ ಲವಲವಿಕೆಯಿಂದ ಚೈತನ್ಯ ಪೂರ್ಣನಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ತಾಲೂಕಿನ ಮಿರ್ಜಾನ ಗ್ರಾಮ ಪಚಾಯತ ವ್ಯಾಪ್ತಿಯ ಕಡಕೊಡದ ದಟ್ಟಾರಣ್ಯದಲ್ಲಿ ಪತ್ನಿಯೊಂದಿಗೆ ವಾಸ್ತವ್ಯವಾಗಿರುವವರೇ ಲಕ್ಷ್ಮಣ ನಾಗಪ್ಪ ಜಾಲಿಸೆತ್ಗಿ. ಈ ಅಡವಿಯಲ್ಲಿ 9 ಎಕ್ಕರೆ ಜಮೀನಿನಲ್ಲಿ ಮನೆ ಕಟ್ಟಿ ಹೊಲ ತೋಟ ನಿರ್ಮಿಸಿದ ಶ್ರಮ ಜೀವಿ. ಕೇವಲ 4ನೇ ಇಯತ್ತೆ ಕಲಿತ ಇವರು ತಮ್ಮ 14 ನೇ ವಯಸ್ಸಿನಲ್ಲಿಯೇ ಚಕ್ಕಡಿ ಗಾಡಿ ಓಡಿಸುವ ಕಾಯಕಕ್ಕೆ ಶರಣಾದರು.
ವಯಸ್ಸಾದಂತೆ ಮನೆಕಡೆ ಹೆಚ್ಚು ಗಮನ ಹರಿಸಿದ ಜಾಲಿಸೆತ್ಗಿ ಹೊಲ ಅಡಿಕೆ, ತೆಂಗು ಬೆಳೆದು ಉತ್ತಮ ಕೃಷಿಕ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಈಗ 96 ರ ಹೊಸ್ತಿಲಲ್ಲಿರುವ ಜಾಲಿಸೆತ್ಗಿಯವರಿಗೆ ದೇಹಕ್ಕೆ ವಯಸ್ಸಾದರೂ ಆತ್ಮ ಬಲ ಕಿಂಚಿತ್ತು ಕುಗ್ಗಲಿಲ್ಲ. ಲಕ್ಷ್ಮಣ ಜಾಲಿಸೆತ್ಗಿ ಇವರು ರಾತ್ರಿ 9 ಗಂಟೆಗೆ ಮಲಗುತ್ತಿದ್ದು, ಮುಂಜಾನೆ 4 ಗಂಟೆಗೆ ಎಳುತ್ತಾರೆ. ಅಲ್ಲಿಂದ ಅವರ ದಿನಚರಿ ಆರಂಭವಾಗುತ್ತದೆ. ಇಂತಹ ಇಳಿಯ ವಯಸ್ಸಿನಲ್ಲಿಯು ಆಕಳ ಪಾಲನೆ ಮಾಡುವ ಇವರು ಕೊಟ್ಟಿಗೆ ಸೆಗಣಿ ತಾವೇ ತೆಗೆದು ಆಕಳ ಹಾಲನ್ನು ಹಿಂಡುತ್ತಾರೆ. ನಂತರ ತೋಟದಲ್ಲಿ ಬಿದ್ದ ಅಡಿಕೆ, ತೆಂಗು ಹೆಕ್ಕಿ ತೆಗೆಯುತ್ತಾರೆ.
ಪ್ರತಿದಿನ ಕಡಕೋಡದಿಂದ ಮಿರ್ಜಾನಗೆ 10 ಕಿ ಮಿ ಸೈಕಲ್‌ ತಿಳಿದು ಕ್ರಮಿಸುವ ಇವರು ಸೈಕಲಿನ ಎರಡು ಬಗಲಿಗೆ ಹಳ್ಳಿಯ ಸಾಮಾನು ಹಾಕಿ ಬಿಂದಾಸ್‌ ಆಗಿ ತುಳಿಯುತ್ತಾರೆ. ಅದಾಗಿಯೂ ಅವರ ಮುಗದಲ್ಲಿ ಸ್ವಲ್ಪವೂ ಆಯಾಸ ಕಾಣುವುದಿಲ್ಲ. ಕಳೆದ ಒಂದು ತಿಂಗಳಿನಿಂದ ಜನರೇ ಇವರಿಗೆ ಸೈಕಲ್‌ ತುಳಿಯದಂತೆ ನಿಭ್ರಂದಿಸಿದ್ದಾರೆ. ಅಲ್ಲದೆ ಇವರಿಗೆ ನಿತ್ಯ ದಿನಪತ್ರಿಕೆ ಓದುವ ಗೀಳು. ಎಲ್ಲಾ ಪತ್ರಿಕೆಯ ಮೇಲೆ ಒಮ್ಮೆ ಕನ್ನಾಡಿಸುವ ಇವರು ಕನ್ನಡಕವಿಲ್ಲದೆ ಪತ್ರಿಕೆಯನ್ನು ಲೀಲಾ ಜಾಲವಾಗಿ ಓದ ಬಲ್ಲರು. ಅಲ್ಲದೇ ತೆಂಗಿನಕಾಯಿ ಸಲೀಸಾಗಿ ಸರಸರನೆ ಈಗಲೂ ಸುಲಿಯುತ್ತಾರೆ. ಹಾವು ಕಚ್ಚಿದವರಿಗೆ ಥಂಡಿ, ಜ್ವರ, ವಾಂತಿಯಾದವರಿಗೆ ಕಾಡಿನ ಬೇರುಗಳಿಂದಲೇ ಗುಣ ಪಡಿಸುವ ಕೌಶಲ್ಯ ಹೊಂದಿದ್ದಾರೆ. ನಿಶ್ಕಲ್ಮಷ ಮನಸ್ಸಿನ ಸಹೃದಯದ ಲಕ್ಷ್ಮಣ ಎಲ್ಲರಿಗೂ ಕಲ್ಲು ಸಕ್ಕರೆ ನೀಡಿ ಜೀವನದಲ್ಲಿ ಸಕ್ಕರೆಯ ಸಿಹಿ ಪಡೆಯುವ ಸಂದೇಶ ನೀಡುವ ಇವರು ಹದಿ ಹರೆಯದ ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.

loading...