ಸಮಾಜದ ಅಭಿವೃದ್ಧಿಗೆ ಶರಣರ ಕೋಡುಗೆ ಅಪಾರ: ಪಾಟೀಲ

0
18
loading...

ಕನ್ನಡಮ್ಮ ಸುದ್ಧಿ-ರೋಣ: ಸಮಾಜದ ಅಭಿವೃದ್ಧಿಯಲ್ಲಿ ಶಿವಶರಣರ ಪಾತ್ರ ಅಮೋಘವಾಗಿದ್ದು, ಪುರಾತನ ಕಾಲದಲ್ಲಿದ್ದ ಅನೇಕ ಸಮಾಜ ಕಂಟಕಗಳಿಗೆ ತಮ್ಮದೇ ಆದ ವಚನ ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ತಿಳಿಯ ಪಡಿಸುವ ಮೂಲಕ ತಮ್ಮದೇ ಆದ ರೀತಿಯಲ್ಲಿ ಸಾಹಿತ್ಯವನ್ನು ನೀಡಿದ ಶಿವಶರಣರಲ್ಲಿ ಒಬ್ಬರಾದ ಅಂಬಿಗರ ಚೌಡಯ್ಯರು ಒಬ್ಬರಾಗಿದ್ದು, ತಮ್ಮ ವಚನ ಸಾಹಿತ್ಯವು ಜನಸಾಮಾನ್ಯರ ಮನದಲ್ಲಿ ನೆಲೆಸುವಂತೆ ಮಾಡಿ, ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನ ಸಾಹಿತ್ಯದ ಹಿರಿಮೆಯನ್ನು ಪ್ರಸ್ತುತ ಪಡಿಸಿದ ಶರಣರಲ್ಲಿ ಒಬ್ಬರಾದ ಅಂಬಿಗರ ಚೌಡಯ್ಯರು ಒಬ್ಬರು. ಶಿವಶರಣರಲ್ಲಿ ಅಕ್ಕಮಹಾದೇವಿ, ಮಾದರ ಹರಳಯ್ಯ, ಹಡಪದ ಹಂಪಯ್ಯ, ಮುಂತಾದ ಶಿವಶರಣರು ತಮ್ಮ ಶಿವಭಕ್ತಿಯಿಂದ ಹಾಗೂ ಅವರ ವಚನ ಸಾಹಿತ್ಯದ ಮೂಲಕ ಸಮಾಜದ ಅನೇಕ ಅನಿಷ್ಠ ಪದ್ಧತಿಗಳ ವಿರುದ್ಧ ತಿಳಿಯಪಡಿಸುವಲ್ಲಿ ಶ್ರಮಿಸಿದ್ದಾರೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್‌.ಪಾಟೀಲ ಹೇಳಿದರು.
ಅವರು ರೋಣ ಪಟ್ಟಣದ ಗುರುಭವನದಲ್ಲಿ ಏರ್ಪಡಿಸಲಾಗಿದ್ದ ಅಂಬಿಗರ ಚೌಡಯ್ಯನವರ ಜಯಂತೋತ್ಸವದಲ್ಲಿ ಮಾತನಾಡಿದ ಅವರು ಇಂದಿನ ಆಧುನಿಕ ಸಮಾಜಕ್ಕೆ ಅವರ ನೀಡಿರುವ ಸಾಹಿತ್ಯ ಅತ್ಯಮುಲ್ಯವಾದುದು. ಅವರಂತಹ ಆದರ್ಶ ಗುಣಗಳು ನಮ್ಮ ಜನತೆ ಹಾಗೂ ನಮಗೆ ಅವಶ್ಯವಾದುದು. ಅವರ ಆದರ್ಶಗಳನ್ನು ನೀಡಿರುವ ವಚನಗಳ ಮೂಲಕ ನಮ್ಮ ವರ್ತನೆಗಳಲ್ಲಿ ಪರಿವರ್ತಣೆಗಳನ್ನು ಕಂಡುಕೊಳ್ಳುವುದೇ ನಮ್ಮ ಭಾಗ್ಯವಾದುದು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಬಾಳನ್ನು ಪುನೀತರನ್ನಾಗಿಸಿ ಸನ್ಮಾರ್ಗವನ್ನು ಪಡೆಯುವಂತಾಗಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗುರುಪಾದ ಮಹಾಸ್ವಾಮೀ ಗುಲಗಂಜಿಮಠ ವಹಿಸಿ ಸಭೆಯನ್ನೆದ್ಧೆಸಿ ಆಶೀರ್ವಚನ ನೀಡಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ರೂಪಾ ಅಂಗಡಿ, ಪ್ರೇಮವ್ವ ನಾಯಕ, ವಿದ್ಯಾ ಬಡಿಗೇರ,ಶಿವಲಿಂಗ ಪ್ರಭು ವಾಲಿ, ಎಮ್‌.ವ್ಹಿ.ಚಳಗೇರಿ, ದಶರಥ ಗಾಣೀಗೇರ,ಶಿವಕುಮಾರ ಕುರಿ,ಬಸವರಾಜ ನವಲಗುಂದ,ವ್ಹಿ.ಬಿ.ಸೋಮನಕಟ್ಟಿಮಠ,ಸಮಾಜದ ಅಧ್ಯಕ್ಷ ಬಳಗಾನೂರ, ವಿಶೇಷ ಉಪಾನ್ಯಾಶ ನೀಡಿದ ಪಾಟೀಲ ಅನೇಕ ಗಣ್ಯರು ಸೇರಿದಂತೆ ಇತರರು ಇದ್ದರು.

ಇಂದು ನಮ್ಮ ಸಮಾಜದ ಬಾಂಧವರು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.ನಮ್ಮ ಸಮಾಜವು 12 ನೇ ಶತಮಾನದಲ್ಲಿ ಅನೆಕ ರೀತಿಯಲ್ಲಿ ಹಿಂದುಳಿದಿದ್ದು,ಸರ್ಕಾರದ ವಿವಿಧ ಸಮಾಜಕ್ಕಾಗಿ ನೀಡಿದ ಕೊಡುಗೆಗಳಿಂದ ಸಮಾಜದ ಪಾಲಕರು ತಮ್ಮ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ವಿದ್ಯಾಬ್ಯಾಸವನ್ನು ನೀಡುವ ನಿಟ್ಟಿನಲ್ಲಿ ಮುಂದಾಗಿದ್ದು,ಸಮಾಜದ ಬಲ ಹೆಚ್ಚಾಗುವ ನಿಟ್ಟಿನಲ್ಲಿ ಶ್ರಮಿಸುತ್ತಲಿದ್ದಾರೆ.ಸುಮಾರು 5 ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರ ಅಂಬಿಗ ಸಮುದಾಯಕ್ಕೆ ನೀಡಿದ ಅನುದಾನವೇ ಕಾರಣ ಎಂದರು.
ಪರಶು ಓಲೇಕಾರ, ಅಂಬಿಗರ ಸಮುದಾಯದ ಮುಖಂಡ

loading...