ಸಮಾವೇಶಗಳು ಸಮಾಜದ ಪರಿವರ್ತನೆಗೆ ಸಾಕ್ಷಿಯಾಗಬೇಕಾಗಿದೆ: ಸತೀಶ ಜಾರಕಿಹೊಳಿ

0
13
loading...

ಕನ್ನಡಮ್ಮ ಸುದ್ದಿ-ಹುನಗುಂದ: ಸಮಾಜದ ಪ್ರತಿಯೊಬ್ಬರು ಸ್ವಾವಲಂಬನೆ ಮತ್ತು ಸ್ವಾಭಿಮಾನದಿಂದ ಬದುಕವುದು ಮುಖ್ಯ. ಸಮಾವೇಶಗಳು ಸಮಾಜದ ಪರಿವರ್ತನೆಗೆ ಸಾಕ್ಷಿಯಾಗಬೇಕಾಗಿದೆ. ಶೈಕ್ಷಣೀಕ, ಆರ್ಥಿಕ, ಸಮಾಜಿಕ, ರಾಜಕೀಯ ಅಭಿವೃದ್ದಿ ಹೊಂದಿದಾಗ ಮಾತ್ರ ಸಮುದಾಯ ಮೇಲಸ್ಥರಕ್ಕೆ ಬರಲು ಸಾಧ್ಯ ಎಂದು ಶಾಸಕ ಹಾಗೂ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಹೇಳಿದರು.
ಅವರು ತಾಲೂಕಿನ ಗುಡೂರ ಗ್ರಾಮದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ-ನಾಯಕ ಮಹಾಸಭಾದಿಂದ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋೕತ್ಸವ ಹಾಗೂ ಸಾಂಸ್ಕೃತಿಕ ಭವನ ಉದ್ಘಾಟನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಯಂತಿ, ಸಮಾವೇಶ ಮಾಡಿದರೇ ಸಾಲದು ಸಮಾವೇಶದಿಂದ ಏನು ಸಂದೇಶ ಜನರಿಗೆ ಕೊಡಬೇಕು ಎನ್ನುವುದು ಅಷ್ಟೇ ಮುಖ್ಯ ಹಾಗೂ ಪರಿಶಿಷ್ಟ ಪಂಗಡಕ್ಕೆ ಈಗಾಗಲೇ 7 ರಷ್ಟು ಮೀಸಲಾತಿ ನೀಡಿದ್ದು.ಅದರೇ 7.5 ರಷ್ಟು ಮೀಸಲಾತಿಗೆ ನಮ್ಮ ಬೇಡಿಕೆ ಇದ್ದು ಅದು ಇಷ್ಟರಲ್ಲಿಯೇ ಸರ್ಕಾರ ನೀಡುವ ಹಂತದಲ್ಲಿದೆಸಮಾಜದ ಅಭಿವೃದ್ದಿಗೆ ಶಿಕ್ಷಣ ಅತೀ ಅವಶ್ಯ ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಟ್ಟು ಒಳ್ಳಯ ಪ್ರಜೆಗಳನ್ನಾಗಿ ಮಾಡಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಂಡಕ್ಕೆ 24 ಸಾವಿರ ಕೋಟಿಗಿಂತಲೂ ಹೆಚ್ಚು ಅನುದಾನವನ್ನು ನೀಡಿದೆ.ಅಷ್ಟೆಯಲ್ಲ ಎಸ್‌.ಸಿ / ಎಸ್‌.ಟಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ರಾಣಿ ಚನ್ನಮ್ಮ ವಸತಿ ಶಾಲೆಗಳಿಗೆ ಸಾಕಷ್ಟು ಅನುದಾನವನ್ನು ಕೂಡಾ ಸರ್ಕಾರ ನೀಡುತ್ತಿದ್ದು ಅದರ ಪ್ರಯೋಜನವು ನಿಮ್ಮೆಲ್ಲರ ಮಕ್ಕಳಿಗೆ ಸಿಗುವಂತಾಗಬೇಕು.ಕೇವಲ ರಾಜಕೀಯ ಕ್ಷೇತ್ರದಿಂದ ಮಾತ್ರ ನಮ್ಮ ಪ್ರಗತಿಯಾಗದು. ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಹತ್ತು ಹಲವಾರು ಯೋಜನೆಗಳನ್ನು ಸರ್ಕಾರ ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು.ಭೂಮಿಗೆ ಬೋರವೆಲ್‌,ಸಣ್ಣ ಕೈಗಾರಿಕೆ,ಕೆ.ಎಫ್‌ಎಫ್‌.ಸಿಯಿಂದ ಬರುವ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕ ಸಭಲತೆಯನ್ನು ಹೊಂದಬೇಕು. ದೇಶದಲ್ಲಿಯೇ ಆಂದ್ರಪ್ರದೇಶದ ಸರ್ಕಾರವನ್ನು ಹೊರತುಪಡಿಸಿದರೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಅತೀ ಹೆಚ್ಚು ಅನುದಾನ ನೀಡಿದ್ದು ಕರ್ನಾಟಕ ಸರ್ಕಾರವಾಗಿದೆ.ಇನ್ನು ನಮ್ಮ ಕೆಳ ಸಮಾಜಗಳಲ್ಲಿ ಮೌಢ್ಯಗಳು ಮನೆ ಮಾಡಿವೆ ಅವುಗಳಿಂದ ಹೊರಬಂದು ಸುಂದರ ಸಮಾಜ ನಿರ್ಮಾನದ ಕನಸ್ಸು ಕಾಣುವಂತಾಗಬೇಕು.ಇಂದು ನೂತನವಾಗಿ ಉದ್ಘಾಟನೆಗೊಂಡ ಭವನದಲ್ಲಿ ಸಮಾಜ ಹಿತಚಿಂತನೆಗಳ ಕುರಿತು ವಿಚಾರ ಸಂಕೀರ್ಣಗಳು ನಡೆಸಿ ಸಮಾಜದ ಮಕ್ಕಳಿಗೆ ಇತಿಹಾಸದ ಪರಿಚಯ ಮಾಡಿಸಬೇಕು ಎಂದರು.  ಆರ್‌.ಜಿ ಸನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಸ್ಕಿಹಾಳದ ಪೂಜ್ಯ ಆತ್ಮಾನಂದ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದರು.ಉಪನ್ಯಾಸಕ ಡಿ.ಕೆ ಮಾಳೆ ಉಪನ್ಯಾಸವನ್ನು ನೀಡಿದರು.
ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮತ್ತು ಕುಂಭವನ್ನು ನೂತನ ಸಮುದಾಯ ಭವನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವಗಳ ಮೂಲಕ ಮೆರವಣಿಗೆ ಮಾಡಲಾಯಿತು.
ವೇದಿಕೆಯಲ್ಲಿ ಸಹಕಾರಿ ಮಂಡಳಿಯ ಅಧ್ಯಕ್ಷ ಶೇಖರಗೌಡ ಪಾಟೀಲ, ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ರಾಜು ನಾಯ್ಕರ, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಶ್ರೀಶೈಲ ಅಂಟಿನ,ತಾ.ಪಂ ಅಧ್ಯಕ್ಷ ಅರವಿಂದ ಈಟಿ, ಕಮತಗಿಪ.ಪಂ ಉಪಾಧ್ಯಕ್ಷ ಪ್ರಕಾಶ ಗುಳೇದಗುಡ್ಡ,P Àರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ,ಸರಸ್ವತಿ ಈಟಿ, ಮುಖಂಡರಾದ ದ್ಯಾಮಣ್ಣ ಗಾಳಿ,ಮರಿಯಪ್ಪ ಗ್ವಾತಗಿ,ಮಂಜುನಾಥ ಕಟಗಿ,ಚನ್ನಪ್ಪಗೌಡ ನಾಡಗೌಡ್ರ,ವಿ.ಎಚ್‌.ಬೇಟಗಾರ, ಮನೋಹರ ವಾಲ್ಮೀಕಿ, ತಿಪ್ಪಣ್ಣ ತಿಪ್ಪಣ್ಣವರ, ಚಂದಪ್ಪ ತಳವಾರ, ತಾ.ಪಂ ಸದಸ್ಯ ಮಂಜುನಾಥ ಗೌಡರ, ಶಿವಪ್ಪ ತಳಗಡೆ, ಮುತ್ತನಗೌಡ ನಾಡಗೌಡ್ರ,ಸ್ವಾಗತ ಸಮಿತಿಯ ಅಧ್ಯಕ್ಷ ಪರಸನಗೌಡ ಪಾಟೀಲ, ಸೋಮಶೇಖರ ಬಲಕುಂದಿ ಇನ್ನು ಅನೇಕರು ಉಪಸ್ಥಿತರಿದ್ದರು.

loading...