ಸಮುದಾಯ ಭವನ ಕಾಮಗಾರಿಗೆ ಶಾಸಕ ಪಿ.ರಾಜೀವ್‌ ಪೂಜೆ

0
18
loading...

ಕುಡಚಿ 17: ಸಮಾಜಕಲ್ಯಾಣ ಇಲಾಖೆಯಿಂದ ಮಂಜೂರಾದ 50 ಲಕ್ಷ ವೆಚ್ಚದ ಡಾ.ಬಾಬು ಜಗಜೀವನರಾಂ ಸಮುದಾಯ ಭವನದ ಕಟ್ಟಡ ಕಾಮಗಾರಿಗೆ ಶಾಸಕರಾದ ಪಿ.ರಾಜೀವ್‌ ಪೂಜೆ ನೆರವೇರಿಸಿದರು.ಮಾತನಾಡಿದ ಅವರು ಹರಳಯ್ಯ ಸಮುದಾಯದ ಜನರ ಮದುವೆಕಾರ್ಯ ಇತರೆ ಸಮಾರಂಭ ಮಾಡಲು ಅನುಕೂಲವಾಗುವಂತೆ ಈ ಸಮುದಾಯ ಭವನ ನಿರ್ಮಾಣಗೊಳ್ಳಲಿದ್ದು ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಒಬ್ಬ ಶಾಸಕನಾಗಿ ನಾನು ನಾಲ್ಕುವರೆ ವರ್ಷಗಳಲ್ಲಿ ಪ್ರಯತ್ನ ಮಿರಿ ತಮ್ಮ ಸೇವೆಗಾಗಿ ಶ್ರಮಿಸಿದ್ದೇನೆ. ಇನ್ನು ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ನಾವೆಲ್ಲರು ಒಂದಾಗಿ ಉತ್ತಮ ಸಮಾಜವನ್ನು ಕಟ್ಟುವ ಕಾರ್ಯ ಮಾಡೋಣ. ಕೆಲಸದ ವಿಷಯ ಬಂದಾಗ ರಾಜಕೀಯ ಮಾಡುವುದು ಉತ್ತಮ ಬೆಳವಣಿಗೆಯಲ್ಲ, ಪಕ್ಷಬೇಧ ಮರೆತು ಅಭಿವೃದ್ಧಿ ಮಾಡಬೇಕು ಆಗ ಮಾತ್ರ ಸಮಾಜದ ಸರ್ವಾಂಗೀಣ ಅಬಿವೃದ್ಧಿ ಸಾಧ್ಯ ದೇಶ ಎಂದೂ ಕಂಡರಿಯದ ದಿಮಂತ ನಾಯಕ ಪ್ರಧಾನಿ ನರೇಂದ್ರ ಮೋದಿಯವರನ್ನು ನಾವೆಲ್ಲರೂ ಬೆಂಬಲಿಸೋಣ ಎಂದರು.ವಕೀಲರಾದ ಮದುಕರ ಸಣ್ಣಕ್ಕಿ ಮಾತನಾಡಿದರು. ಈ ಸಂದರ್ಭದಲ್ಲಿ ಕುಡಚಿ ದರ್ಗಾ ಕಮೀಟಿ ಅಧ್ಯಕ್ಷರಾದ ಕಯುಮ ಪಾಟಾಯಿತ. ಶಾಂತಾರಾಮ ಸಣ್ಣಕ್ಕಿ, ರಾಜು ಸಣ್ಣಕ್ಕಿ, ಆನಂದ ಸಣ್ಣಕ್ಕಿ, ಮೈದಿನಸಾಯಿ ವಾಟೆ, ದತ್ತಾ ಸಣ್ಣಕ್ಕಿ, ಆತೀಫ ಪಟಾಯಿತ, ಮದುಕರ ಸಣ್ಣಕ್ಕಿ , ಸಫೀರ ಪಟಾಯಿತ, ಮಹಾದೇವ ಚವ್ಹಾನ. ಮಾರುತಿ ಚವ್ಹಾಣ, ರಾವಸಾಬ ಪಾಟೀಲ್‌, ಶಾಕೀರ ಸಂದರವಾಲೆ, ಹುಸನಬಾ ಚೆಮನಶೇಖ, ತುರಾಬದಿನÀ ಜಿನ್ನಾಬಡೆ, ಸುಲ್ತಾನ ವಾಟೆ, ಫರಾಜ್‌ ಬಾಗೆ, ರಶೀದ ಜಿನ್ನಾಬಡೆ, ಆಸೀಫ ಸಜ್ಜನ, ತೋಫೀಕ ಓಮಣೆ, ಜಹುರ ಜಿನ್ನಬಡೆ, ಜಾಕೀರ ರುಕ್ಕುಂದಿ,ಅಸಮತ ಕರಿಮಖಾನ, ಮತುಲಾಲ ಜಿನ್ನಾಬಡೆ, ಸೋಹಿಲ್‌ ಜಿನ್ನಾಬಡೆ, ಸರ್ಫರಾಜ ಕರಿಮಖಾನ, ಸಾಧಿಕ ವಾಟೆ, ಶಿರಾಜ ಮುಲ್ಲಾ, ಜಾಕೀರ ಜಿನಾಬಡೆ, ,ನಾಮದೇವ ಮದಲೆ, ಖಂಡು ಸಣ್ಣಕ್ಕಿ ಇತರರು ಉಪಸ್ಥಿತರಿದ್ದರು.

loading...