ಸಹಬಾಳ್ವೆ ಮಾನವ ಜೀವನದ ಧ್ಯೇಯ: ಪಾಟೀಲ

0
33
loading...

ಕನ್ನಡಮ್ಮ ಸುದ್ದಿ- ಕೋಹಳ್ಳಿ : ಯಾವುದೇ ಧರ್ಮಿಯರು ಇದ್ದರು. ಎಲ್ಲರೊಂದಿನ ಒಡನಾಟ, ಶಾಂತಿ ಸಹಬಾಳ್ವೆಯೇ ಮಾನವ ಜೀವನದ ಮುಖ್ಯ ಧ್ಯೇಯವಾಗಲಿ, ದಾನ ಧರ್ಮದಿಂದ ನಡೆದು ತಿರ್ಥಯಾತ್ರೆ ಕೈಗೊಂಡಲ್ಲಿ ಮನ ಶಾಂತಿ ಸಿಗಲಿದೆ. ಸೃಷ್ಠಿಕರ್ತನ ಕೃಪೆಗೆ ಪಾತ್ರರಾಗುತ್ತೇವೆ ಎಂದು ಅಥಣಿ ಕೃಷ್ಣಾ ಶುಗರ್‌ ನಿರ್ದೇಶಕ ಸಿ.ಎಚ್‌ ಪಾಟೀಲ ಹೇಳಿದರು.
ಇತ್ತೀಚೆಗೆ ಸ್ಥಳೀಯ ಭಾರತ್‌ ಕೋ-ಆಪ್‌ ಕ್ರೇಡಿಟ್‌ ಸೊಸಾಯಿಟಿಯಲ್ಲಿ ಆಯೋಜಿಸಿದ್ದ ಉಮ್ರಾ(ಹಜ್‌) ಯಾತ್ರೆಗೆ ಬಿಳ್ಕೊಡುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಯ-ವಿನಯದಿಂದ ಎಲ್ಲರೊಂದಿಗೆ ಬೆರೆತು ಮಾನವೀಯತೆಗೆ ಮೆರಗು ನೀಡಿ. ಭಾರತ್‌ ಕೊ ಆಪ್‌ ಕ್ರೇಡಿಟ್‌ ಸೊಸಾಯಿಟಿ ಅಧ್ಯಕ್ಷರಾಗಿ ಜನ ಸೇವೆಯಲ್ಲಿ ನಿರತರಾಗಿರುವ ಗ್ರಾಮದ ಮುಖಂಡ ನೂರಅಹ್ಮದ ಡೊಂಗರಗಾಂವ ಇವರು ಪತ್ನಿಯೊಂದಿಗೆ ಉಮ್ರಾ (ಹಜ್‌) ಯಾತ್ರೆ ಕೈಗೊಂಡಿದ್ದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಥಣಿ ಎಪಿಎಮ್‌ಸಿ ನಿರ್ಧೇಶಕ ಅಡಿವೆಪ್ಪ ಕೆಂಚಣ್ಣನವರ ಹಾಗೂ ಸಿ ಕೆ ಬೆಳಗಲಿಯವರು ಉಮ್ರಾ ಯಾತ್ರೆಗೆ ಹೊರಟ ನೂರಹ್ಮದ ಡೊಂಗರಗಾಂವರವರ ಸ್ನೇಹ ಜೀವನದ ಕುರಿತು ಮಾತನಾಡಿದರು. ಭಾರತ್‌ ಕೊ ಆಪ್‌ ಕ್ರೇಡಿಟ್‌ ಸೊಸಾಯಿಟಿ ಮತ್ತು ಗ್ರಾಮಸ್ಥರಿಂದ ನೂರಅಹ್ಮದ ಮತ್ತು ಖಾತುನಬಿ ದಂಪತಿಯವರನ್ನು ಸತ್ಕರಿಸಿ ಹಜ್‌(ಉಮ್ರಾ) ಯಾತ್ರೆಗೆ ಬಿಳ್ಕೊಡಲಾಯಿತು.
ಸೊಸಾಯಟಿಯ ಉಪಾಧ್ಯಕ್ಷ ಶಂಕರ ಪೂಜಾರಿ, ನಿದೇೕರ್ಶಕರಾದ ಮಹಾದೇವ ಸತ್ತಿ, ಆರ್‌ ಎಸ್‌ ಡೊಂಗರಗಾಂವ, ಹಿರಿಯರಾದ ಶ್ರೀಮಂತ ಮುದೋಳ, ಮನೋಹರ ಬಿರಾದಾರ, ಶಿವಗೌಡಾ ಮುದೋಳ, ನಿರ್ಮಲಾ ಪೂಜಾರಿ, ಸಂಗಪ್ಪ ಭೋಸಲೆ, ಮಲಗೊಂಡಾ ತೆಲಸಂಗ ಸೇರಿದಂತೆ ಸೊಸಾಯಿಟಿ ನಿರ್ದೇಶಕರು ಹಾಗೂ ಗ್ರಾಮಸ್ಥರು ಇದ್ದರು.
ಚನ್ನಬಸಪ್ಪಾ ತೆಲಸಂಗ ಸ್ವಾಗತಿಸಿದರು, ರಹೀಮ ಪಡಸಲಗಿ ನಿರೂಪಿಸಿದರು, ಸಂಗಪ್ಪಾ ಭೋಸಲೆ ವಂದಿಸಿದರು.

loading...