ಸಾಧಿಸುವ ಛಲವಿದ್ದರೆ ಜಗತ್ತನ್ನೆ ಗೆಲ್ಲಬಲ್ಲಿರಿ: ಶಾಸಕ ರಾಜೀವ್‌

0
21
loading...

ಕನ್ನಡಮ್ಮ ಸುದ್ದಿ-ಹಾರೂಗೇರಿ 27: ವಿದ್ಯಾರ್ಥಿ ಜೀವನ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೇ ಸಾಧನೆಗೆ ಹೆಸರಾಗಬೇಕು, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆತ್ಮಜಾಗೃತಿಯಾಗುತ್ತದೆ, ಸಾಧನೆ ದೊಡ್ಡದಲ್ಲ ಆ ಸಾಧನೆ ಇಡೀ ಜಗತ್ತಿಗೆ ಪರಿಚಯವಾಗಬೇಕು, ಸಾಧಿಸುವ ಛಲವೊಂದಿದ್ಧರೆ ಜಗತ್ತನ್ನೆ ಗೆಲ್ಲಬಲ್ಲಿರಿ ಎಂದು ವಿದ್ಯಾರ್ಥಿನಿಯರಿಗೆ ಶಾಸಕ ಪಿ.ರಾಜೀವ್‌ ಕಿವಿಮಾತು ಹೇಳಿದರು.
ಹಾರೂಗೇರಿ ಪಟ್ಟಣದ ಚಂದ್ರಮಶ್ರೀ ಟ್ರಸ್ಟ್‌(ರಿ) ವಿಸ್ವಸ್ಥ ಸಂಸ್ಥೆಯ ಜ್ಞಾನ ಗಂಗೋತ್ರಿ ಬಾಲಕಿಯರ ಪ್ರಾಥಮಿಕ, ಶ್ರೀಪದ್ಮಾವತಿ ಹೆಣ್ಣುಮಕ್ಕಳ ಫ್ರೌಡಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ಧ 23ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರ ಬಿಳ್ಕೊಡುವ ಸಮಾರಂಭ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಶಿಸ್ತು ಬದ್ಧತೆ ಇರಬೇಕು, ಶಿಕ್ಷಣಕ್ಕೆ ಅಗಾಧವಾದ ಶಕ್ತಿ ಇದೆ, ಶಿಕ್ಷಣವೆಂಬುದು ಪ್ರತಿಯೊಬ್ಬರಿಗೂ ಇಡೀ ಸಮಾಜದಲ್ಲಿ ಗೌರವವನ್ನು ತಂದುಕೊಡುತ್ತದೆ, ವಿದ್ಯಾರ್ಥಿಗಳು ಉನ್ನತ ಗುಣಮಟ್ಟದ ಶಿಕ್ಷಣ ಪಡೆದು ದೇಶದ ಮಹೋನ್ನತ ಹುದ್ಧೆಗಳನ್ನು ಅಲಂಕರಿಸುವ ಮೂಲಕ ಭವ್ಯ ಭಾರತ ಕಟ್ಟುವ ಒಳ್ಳೆಯ ಸತ್ಫ್ರಜೆಗಳಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಬಿಜೆಪಿ ಘಟಕದ ಉಪಾಧ್ಯಕ್ಷ್ಯ ಬಸಗೌಡ ಆಸಂಗಿ, ಪ್ರಗತಿಪರ ರೈತರಾದ ಬಾಬುರಾವ ಹಳ್ಳೂರ, ಎ.ಪಿ ಬೊಮ್ಮನ್ನವರ, ಎಸ್‌.ವ್ಹಿ ಜಂಬಗಿ, ಆರ್‌.ಎ ಬಾವಿ, ಐ.ಎ ಜಮಾದರ, ಪುರಸಭೆ ಸದಸ್ಯ ಸಂತೋಷ ಸಿಂಗಾಡಿ, ಸಹದೇವ ಲಾಳಿ, ಭುಜಬಲಿ ಚಿಮ್ಮಡ, ಗುಂಡುರಾವ ದಟವಾಡ, ವಿಠ್ಠಲ ದೌಡತೆ, ಎಮ್‌.ಎಸ್‌ ಬಳವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ಧರು. ಕಾರ್ಯಕ್ರಮವನ್ನು ಆರ್‌.ಎಸ್‌ ಜಾಧವ ಸ್ವಾಗತಿಸಿದರು, ಶ್ರೀಮತಿ ಎಸ್‌.ಎಸ್‌ ಅಂಗಡಿ ನಿರೂಪಿಸಿದರು, ಎಸ್‌.ಜಿ ನಾಶಿ ವಂದಿಸಿದರು.

loading...