ಸಾಮಾಜಿಕ ಕಾರ್ಯದಿಂದ ಆತ್ಮಸಂತೃಪ್ತಿ : ಸಿದ್ದು ಮಾಳದಕರ

0
23
loading...

ಗದಗ : ಮಾನವೀಯ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುವುದರಿಂದ ಮಾನಸಿಕ ನೆಮ್ಮದಿ, ಆತ್ಮಸಂತೃಪ್ತಿಯನ್ನು ಹೊಂದಬಹುದಾಗಿದೆ ಎಂದು ಭಾವಸಾರ ವ್ಹಿಜನ್‌ ಇಂಡಿಯಾದ 101 ಏರಿಯಾದ ಗೌರ್ನರ್‌ ಸಿದ್ದು ಮಾಳದಕರ ಅಭಿಪ್ರಾಯಪಟ್ಟರು.
ಅವರು ಗುರುವಾರ ಬೆಟಗೇರಿಯ ಶಿವರತ್ನ ಪ್ಯಾಲೇಸ್‌ ಸಭಾಂಗಣದಲ್ಲಿ ಭಾವಸಾರ ವ್ಹಿಜನ್‌ ಇಂಡಿಯಾ ಗದಗ ಘಟಕದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಅಧಿಕಾರದ ಗೌಪತ್ಯತೆಯನ್ನು ಬೋಧಿಸಿ ಮಾತನಾಡಿದರು.
ಹಣವಂತರು ಸಾಮಾಜಿಕ ಕಾರ್ಯಗಳಿಗೆ ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು, ಹಣವಿಲ್ಲದವರು ತಮ್ಮ ಹೃದಯ ವೈಶಾಲ್ಯತೆಯೊಂದಿಗೆ ಅಸಹಾಯಕರಿಗೆ ಸಹಾಯಕರಾಗುವ ಮೂಲಕ ಇನ್ನೋಬ್ಬರಿಗೆ ತಮ್ಮ ಕೈಲಾದಮಟ್ಟಿಗೆ ಸಹಾಯ ಸಹಕಾರ ಮಾಡಿದೆ ಎಂಬ ಆತ್ಮಸಂತೃಪ್ತಿ ಹೊಂದಬೇಕೆಂದರು. 2001 ರಲ್ಲಿ ಭಾವಸಾರ ವಿಜನ್‌ ಇಂಡಿಯಾ ಸಂಘಟನೆಯನ್ನು ಹುಟ್ಟು ಹಾಕುವ ಮೂಲಕ ಸಮಾಜಬಾಂಧವರನ್ನು ಸಂಘಟನಾತ್ಮಕವಾಗಿ ಸೇರಿಸುವ ಅವರ ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯಯೋಜನೆಗಳನ್ನು ರೂಪಿಸುವ ಪರಿಕಲ್ಪನೆ ಇಟ್ಟುಕೊಂಡು ವಧುವರರ ಸಮಾವೇಶ, ಉಚಿತ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ಉಚಿತ ಔಷಧ ವಿತರಣೆ, ನೇತ್ರ ಚಿಕಿತ್ಸೆ ಬಡ ಕುಟುಂಬಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ನೆರವು, ಉದ್ಯೋಗ ಮಾರ್ಗದರ್ಶನದಂತಹ ಕಾರ್ಯವನ್ನು ಮಾಡುತ್ತಿರುವ ಭಾವಸಾರ ವ್ಹಿಜನ್‌ ಇಂದು ಭಾರತದ ಹಲವಾರು ರಾಜ್ಯಗಳಲ್ಲಿ ತನ್ನ ಸೇವಾ ಶಾಖೆಯನ್ನು ತೆರೆದುಕೊಂಡಿದೆ ಎಂದರು.
ಸಮಾಜ ಸಂಘಟನೆ, ಯುವಕ ಮತ್ತು ಯುವತಿಯಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ, ಸ್ನೇಹವನ್ನು ವೃದ್ಧಿಸಿ ಸಮಾಜ ಕಾರ್ಯಕ್ಕೆ ಪ್ರೇರಣೆ ನೀಡುವುದೇ ವ್ಹಿಜನ್‌ದ ಮುಖ್ಯ ಗುರಿ ಎಂದರು. ಮುಖ್ಯ ಅತಿಥಿ ಗದಗ ವಿದ್ಯಾದಾನ ಶಿಕ್ಷಣ ಸಮಿತಿಯ ಗೌರವ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಅವರು ಮಾತನಾಡಿ ಭಾವಸಾರ ವಿಜನ್‌ ಇಂಡಿಯಾ ಭಾವಸಾರ ಸಮಾಜ ಬಾಂಧವರ ಸರ್ವಾಂಗೀಣ ಅಭಿವೃದ್ಧಿಗಾಗಿ ಹುಟ್ಟಿಕೊಂಡಿದ್ದರೂ ಸಹ ಸಮಾಜದಲ್ಲಿ ಎಲ್ಲ ಸಮುದಾಯದವರಿಗೆ ಉಪಯುಕ್ತವಾಗುವ ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿಸುತ್ತಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಗದಗ-ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷೆ ಶ್ರೀಮತಿ ನಾಗರತ್ನ ಮುಳಗುಂದ ಅವರು ಮಾತನಾಡಿ ಭಾವಸಾರ ವಿಜನ್‌ ಇಂಡಿಯಾ ವ್ಹಿಜನ್‌ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ವ್ಹಿಜನ್‌ದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುನ್ನಡೆ ಸಾಧಿಸಲು ವ್ಹಿಜನ್‌ನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಬೇಕಿದೆ ಎಂದರು. ವೇದಿಕೆಯ ಮೇಲೆ ಭಾವಸಾರ ವ್ಹಿಜನ್‌ದ ಗೌರ್ನರ್‌ ಕಾರ್ಯದರ್ಶಿ ಪ್ರದೀಪ ಗುಜ್ಜರ, ವಿಶ್ವಾಸ್‌ ವರ್ನಾಕರ್‌ ಹಾಗೂ ಡೆಪ್ಯೂಟಿ ಗೌರ್ನರ್‌ ಸುರೇಂದ್ರ ಜಾಧವ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಾಂಭವಿ ಕಪಟಕರ ಪ್ರಾರ್ಥಿಸಿದರು, ಶ್ರೀಮತಿ ನಿರ್ಮಲಾ ಸುಲಾಖೆ ಸ್ವಾಗತಿಸಿದರು, ಷಣ್ಮುಖ ಸುಲಾಖೆ ವರದಿ ವಾಚನ ಮಾಡಿದರು. ಡಾ.ಪ್ರವೀಣ ಸರ್ವದೆ ಪರಿಚಯಿಸಿದರು. ಮಂಜುನಾಥ ಉತ್ತರಕರ ನಿರೂಪಿಸಿದರು, ಕೊನೆಗೆ ಕಾರ್ಯದರ್ಶಿ ಷಣ್ಮುಖ ಸುಲಾಖೆ ವಂದಿಸಿದರು. ಸಮಾರಂಭದಲ್ಲಿ ವ್ಹಿಜನ್‌ದ ಮಾಜಿ ಅಧ್ಯಕ್ಷರು, ಸದಸ್ಯರು, ಗಣ್ಯರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು. ಪದಾಧಿಕಾರಿಗಳು
ಡಿಪ್ಯೂಟಿ ಗೌರ್ನರ್‌ ಸುರೇಂದ್ರ ಜಾಧವ, ಗೌರ್ನರ್‌ ಅಂಬಾಸೆಡರ್‌ ನಿರ್ಮಲಾ ಸುಲಾಖೆ, ಅಧ್ಯಕ್ಷೆ ಜಯಲಕ್ಷ್ಮೀ ಮಹೇಂದ್ರಕರ, ಉಪಾಧ್ಯಕ್ಷ ನಾಗರಾಜ ವಾದೋನೆ, ನಿಯೋಜಿತ ಅಧ್ಯಕ್ಷ ಮಂಜುನಾಥ ಉತ್ತರಕರ, ಕಾರ್ಯದರ್ಶಿ ಷಣ್ಮುಖ ಸುಲಾಖೆ, ಸಹ ಕಾರ್ಯದರ್ಶಿ ನಾಗೇಶ ಖಮಿತ್ಕರ್‌, ಖಜಾಂಚಿ ರಾಜು ಕಪಟಕರ, ಸಹ ಖಜಾಂಚಿ ರಾಜೀವ ಬೇದ್ರೆ, ಬುಲಿಟೀಯನ್‌ ಸಂಪಾದಕ ವೀರಣ್ಣ ಬೆಳಮಕರ, ಕ್ಯಾಪ್ಟನ್‌ ಪರಶುರಾಮ ನವಲೆ, ಮಹಿಳೆ ಕಲ್ಯಾಣ ಅನುರಾಧಾ ವೈಕುಂಠೆ, ವ್ಹಿಜನ್‌ ಸರ್ವಿಸ್‌ ಜ್ಞಾನೇಶ್ವರ ಉತ್ತರಕರ, ಪ್ರೋಜೆಕ್ಟ ಸರ್ವಿಸ್‌ ವಿಜಯಕುಮಾರ ಸುಲಾಖೆ, ಮಕ್ಕಳ ಕಲ್ಯಾಣ ವಿಜಯಾ ನವಲೆ, ಯುವ ಕಲ್ಯಾಣ ರಾಜೇಂದ್ರ ತ್ರಿಮಲ್ಲೆ, ಮಹಿಳಾ ವಿಭಾಗ ವೀಣಾ ಕಪಟಕರ ಹಾಗೂ ಬಿಸಿನೆಟ್‌ ಆರ್ಗನೈಜೇಶನ್‌ ಸುನೀಲ ದಾಮೋದರ ಅವರು ಅಧಿಕಾರ ವಹಿಸಿಕೊಂಡರು.

loading...