ಸಾಮಾಜಿಕ ಜಾಲತಾಣ ಬಳಸಿ: ಬಸವರಾಜ

0
18
loading...

ಕನ್ನಡಮ್ಮ ಸುದ್ದಿ-ಮುಂಡರಗಿ: ಸಾಮಾಜಿಕ ಜಾಲತಾಣಗಳ ನೆರವಿನಿಂದ ಸುಲಭವಾಗಿ ಜನಸಾಮಾನ್ಯರನ್ನು ತಲುಪಬಹುದಾಗಿದ್ದು, ಎಲ್ಲ ಕಾರ್ಯಕರ್ತರು ಈ ಮಾಧ್ಯಮವನ್ನು ಬಳಸಿ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಬಿಳಿಮಗ್ಗದ ಹೇಳಿದರು.
ಇಲ್ಲಿಯ ಭಾತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರಿಗಾಗಿ ಏರ್ಪಡಿಸಿದ್ದ ಸಾಮಾಜಿಕ ಜಾಲತಾಣ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಸಾಧನೆ ಹಾಗೂ ಸಮಗ್ರ ಕಾರ್ಯಕ್ರಮಗಳ ಮಾಹಿತಿಯನ್ನು ಆಧುನಿಕ ಮಾಧ್ಯಮ ಸಾಧನಗಳ ಮೂಲಕ ಕಾರ್ಯಕರ್ತರು ಜನಸಾಮಾನ್ಯರಿಗೆ ತಲುಪಿಸಬೇಕು. ಆ ಮೂಲಕ ಜನರೊಂದಿಗೆ ನಿರಂತರ ಸಂಪರ್ಕದಲ್ಲಿ ಇರುಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಜಾಲತಾಣದ ತಾಲ್ಲೂಕು ಘಟಕದ ಮುಖಂಡ ಮಹಾಂತೇಶ ಕೊರಡಕೇರಿ ಮಾತನಾಡಿ, ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕಾಗಿ ಎಲ್ಲ ಹಂತಗಳ ಬಿಜೆಪಿ ಕಾರ್ಯಕರ್ತರು ಪ್ರಾಮಾಣಕವಾಗಿ ಶ್ರಮಿಸಬೇಕು. ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ತಿಳಿಸಿದರು.
ಬಿಜೆಪಿ ಕಾರ್ಯದರ್ಶಿ ಅಂದಪ್ಪ ಉಳ್ಳಾಗಡ್ಡಿ, ಕೃಷ್ಣ ಗಾರವಾಡ, ಗೋವಿಂದ, ಪ್ರಕಾಶ, ಮಲ್ಲು ಉಳ್ಳಾಗಡ್ಡಿ ಮೊದಲಾವರು ಹಾಜರಿದ್ದರು. ಕೃಷ್ಣ ಗಾರವಾಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

loading...