‘ಸಾವಿತ್ರಿಭಾಯಿ ಫುಲೆ ಮಹಿಳೆಯರಿಗೆ ಮಾದರಿ’

0
23
loading...

ಕನ್ನಡಮ್ಮ ಸುದ್ದಿ-ಲೋಕಾಪುರ : ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಭಾಯಿ ಪುಲೆಯು ಮಹಿಳಾ ಸಮಾಜಕ್ಕೆ ಸ್ಪೂರ್ತಿಯಾಗಿದ್ದಾರೆ. ವಿವೇಚನ ಕೀರ್ತಿಯಾಗಿ ಸಮಾಜ ಸುಧಾರಣೆಗಾಗಿ ಶ್ರಮಿಸಿ ಇತಿಹಾಸದಲ್ಲಿ ಅಮರರಾಗಿದ್ದಾರೆ ಎಂದು ಎಪಿಎಂಸಿ ಸದಸ್ಯ ಬಸವರಾಜ ಮಾಳಿ ಹೇಳಿದರು.
ಸ್ಥಳೀಯ ಎಪಿಎಂಸಿ ಆವರಣದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಂಡ ಸಾವಿತ್ರಿಬಾಯಿ ಪುಲೆ 187 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಹೆಣ್ಣು ಮಕ್ಕಳ ಸುರಕ್ಷಿತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಲು ಅವರು ಸ್ಪೂರ್ತಿದಯಕರಾಗಿರುವವರು. ಪ್ರತಿಯೊಬ್ಬರು ಬದುಕಿನಲ್ಲಿ ಶಿಕ್ಷಣಕ್ಕೆ ಬಹು ಮುಖ್ಯ ಪಾತ್ರವಿದೆ ಉತ್ತಮ ವಿಚಾರಧಾರನೆಗೆಬದ್ಧರಾಗಿ ಎಲ್ಲರೂ ಸುರಕ್ಷಿತರಾಗಬೇಕೆಂದರು. ಜನವಲಯ ಪತ್ರಿಕೆ ಸಂಪದಾಕ ಮಹೇಶ ಹುಗ್ಗಿ ಮಾತನಾಡಿ ಸಾವಿತ್ರಬಾಯಿ ಶಿಕ್ಷಕ ಸಮುದಾಯದ ಸ್ಪೂರ್ತಿ ನೆಲೆಯಾಗಿರವವರು ಸಮಾಜ ಸುಧಾರಣೆಗೆ ಮಹಿಳೆಯರ ಶೊಷಿತ ಬದುಕು ಬದಲಾವಣೆಗೆ ಬುದ್ಧ, ಬಸವ, ಮತ್ತು ಅಂಬೇಡ್ಕರ ಹೋರಾಟ ಜೊತೆಗೆ ಸಾವಿತ್ರಿಬಾಯಿಯವರು ಮಹಾನ ಕಾರ್ಯ ಸದಾಸ್ಮರಣೀಯ ಎಂದು ಹೇಳಿದರು.
ತಾಪಂ ಸದಸ್ಯ ಯಶವಂತ ಹರಿಜನ, ಗ್ರಾಪಂ ಸದಸ್ಯ ಮಾರುತಿ ರಂಗಣ್ಣವರ, ರವಿ
ರೊಡ್ಡಪ್ಪನವರ, ಗೋವಿಂದ ಕೌಲಗಿ, ಮಂಜು ಬದ್ನೂರ, ಶಿಕ್ಷಕ ಸಿದ್ದು ಹೂಗಾರ, ಮಹೇಶ ಮಳಲಿ, ರಂಗನಾಥ ಚಿಪ್ಪಲಕಟ್ಟಿ, ಬಾಳು ಗಡ್ಡದವರ, ಹಣಮಂತಗೌಡ ಹನಮನೇರಿ, ಭೀಮಶಿ ನಾವಲಗಿ, ಸುರೇಶ ಹುಗ್ಗಿ, ದಾವಲ ನಧಾಪ, ರಾಜು ಮಾದರ, ಸಾಗರ ರೊಡ್ಡಪನವರ, ನಾಗರಾಜ ಜೀರಗಾಳ, ಸುರೇಶ ಪೂಜಾರಿ, ಯಶವಂತ ಕಾಳಮ್ಮನವರ, ದುರ್ಗಪ್ಪ ಕಾಳಮ್ಮನವರ, ಡಿ.ಆರ್‌.ದೊಡಮನಿ, ಹಾಗೂ ಮಾನವ ಬಂಧುತ್ವ ವೇದಿಕೆ ಸರ್ವ ಸದಸ್ಯರು.

loading...