ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ

0
20
loading...

ಕನ್ನಡಮ್ಮ ಸುದ್ದಿ-ಕುಮಟಾ: ಹೊನ್ನಾವರ ಚಂದಾವರದ ಹೂವಿನಹಿತ್ಲದ ಕ್ರಿಶ್ಚಿಯನ್‌ಕೇರಿ ರಸ್ತೆಗೆ ನಿರ್ಮಿಸಲಾದ ಬಾಗಶಃ ಕಿರು ಸೇತುವೆಯ ಮುಂದುವರೆದ ಕಾಮಗಾರಿಗೆ ಶಾಸಕಿ ಶಾರದಾ ಶೆಟ್ಟಿ ಚಾಲನೆ ನೀಡಿದ್ದರು.
ಹೂವಿನಹಿತ್ಲದ ಕ್ರಿಶ್ಚಿಯನ್‌ಕೇರಿಗೆ ಹೋಗುವ ರಸ್ತೆಯ ನಡುವಲ್ಲಿ ಹಳ್ಳ ಹರಿದಿದ್ದರಿಂದ ಮಳೆಗಾಲದಲ್ಲಿ ನೀರಿನ ರಭಸಕ್ಕೆ ರಸ್ತೆಯೆ ಮುಚ್ಚಿಹೋಗುತ್ತದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುವುದರಿಂದ ಕಿರು ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯರು ಒತ್ತಾಯಿಸಿದರು.
ಹಾಗಾಗಿ ಶಾಸಕರು ಪ್ರದೇಶಾಭಿವೃದ್ದಿ ನಿಧಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಕಿರು ಸೇತುವೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದರು. ಕಾಮಗಾರಿ ಪೂರ್ಣಗೊಳಿಸಲು ಅನುದಾನದ ಕೊರತೆ ಉಂಟಾಗಿದ್ದರಿಂದ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 8 ಲಕ್ಷ ರೂ. ಅನುದಾನ ಮಂಜೂರಿ ಮಾಡಿ, ಮುಂದುವರೆದ ಕಾಮಗಾರಿಗೆ ಚಾಲನೆ ನೀಡಿದರು. ಈ ಭಾಗದ ಇನ್ನೇನೆ ಸಮಸ್ಯೆಯಿದ್ದರೂ ನನ್ನ ಗಮನಕ್ಕೆ ತಂದರೆ, ಪರಿಹರಿಸಿಕೊಡುವ ಪ್ರಯತ್ನ ಮಾಡುವುದಾಗಿ ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ತಿಮ್ಮಪ್ಪ ನಾಯ್ಕ, ವೈ.ಆರ್‌.ನಾಯ್ಕ, ಭವಾನಿ ಚಂದಾವರ, ಸೀಮಾವ್‌ ರೋಡ್ರಗೀಸ್‌, ದೇಗಾ ಗೋನ್ಸಾಲ್ವಿಸ್‌ ಇತರರಿದ್ದರು.

loading...