ಸೇವಾಕಾರ್ಯ ಅತ್ಯಂತ ಮಹತ್ವದ್ದಾಗಿದ್ದು

0
36
loading...

ಶಿರಸಿ: ಸೇವಾಕಾರ್ಯ ಅತ್ಯಂತ ಮಹತ್ವದ್ದಾಗಿದ್ದು, ಅತ್ಯಂತ ಸೂಕ್ಷ್ಮ ಕೂಡ. ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಸೇವಾಕಾರ್ಯ ಪರಮ ಶ್ರೇಷ್ಠವಾದುದಾಗಿದ್ದು ಕರ್ಮಯೋಗದ ಮರ್ಮವೂ ಇದೇ ಆಗಿದೆ ಎಂದು ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಸೋಂದಾ ಸ್ವರ್ಣವಲ್ಲೀ ಮಠದ ಸಮೀಪದ ಯಾತ್ರಿನಿವಾಸದಲ್ಲಿ ಬೆಂಗಳೂರಿನ ಸಂಸ್ಕøತ ವಿಶ್ವವಿದ್ಯಾಲಯ ಹಾಗೂ ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ರಾಷ್ಟ್ರಿಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಏಳು ದಿನದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ವರು ಆಶೀರ್ವದಿಸಿದರು. ಕೆಲಸದಲ್ಲಿ ಆನಂದಪಡಬೇಕು, ಆಸಕ್ತಿ ತೋರಬೇಕೇ ವಿನಃ ನಿಷ್ಕ್ರಿಯತೆಯಲ್ಲಿ ಸಂತೋಷ ಸರಿಯಲ್ಲ. ಕೆಲಸದಲ್ಲಿ ಸಂತೋಷ ಪಡಬೇಕು. ಕೆಲಸ-ಕಾರ್ಯಗಳಿಂದ ಶಾರೀರಿಕವಾದ ಆರೋಗ್ಯ, ಮಾನಸಿಕವಾದ ಸ್ವಾಸ್ಥ್ಯ-ಉತ್ಸಾಹ ಹಾಗೂ ಬೌದ್ಧಿಕವಾದ ವಿಕಾಸ ಸಿದ್ಧಿಸುತ್ತದೆ. ಸ್ವಾರ್ಥವನ್ನು ಮಾತ್ರ ಬಯಸದೆ, ಫಲಾಪೇಕ್ಷೆಯನ್ನು ಬಿಟ್ಟು ಸೇವಾರೂಪದಲ್ಲಿ ಎಲ್ಲರಿಗಾಗಿ, ಸಮಗ್ರ ದೇಶದ ಅಭಿವೃದ್ಧಿಗಾಗಿ ಸೇವಾಕಾರ್ಯದಲ್ಲಿ ತೊಡಗಿಕೊಂಡರೆ ನಮ್ಮೊಳಗೆ ಸಮರ್ಪಣಾ ಭಾವನೆಯೇ ಮುಂತಾದ ಸದ್ಭಾವನೆಗಳು ಬೆಳೆಯುತ್ತವೆ. ದೇಶದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಆದ್ದರಿಂದ ದೇಶದ ಅಭಿವೃದ್ಧಿಗಾಗಿ ಎಲ್ಲರೂ ಈ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಎಚ್ಚರಿಸಿರು.
ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ಸಂಸ್ಕøತ ಕಾಲೇಜಿನ ಬೋಧಕ-ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಎನ್.ಜಿ.ಹೆಗಡೆ ಭಟ್ರಕೇರಿ, ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಶಿವರಾಮ ಭಟ್ಟ ಡೊಂಬೆಸರ ವಂದಿಸಿದರು. ವಿನಾಯಕ ಭಟ್ಟ ಗುಂಜಗೋಡು ನಿರ್ವಹಿಸಿದರು.

loading...