ಸ್ವಚ್ಛ ಪರಿಸರದಿಂದ ಆರೋಗ್ಯ ಸುಧಾರಣೆ: ಶಾಸಕ ಡಾ.ವಿಶ್ವನಾಥ

0
25
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಪ್ರಧಾನಿ ನರೇಂದ್ರ ಮೋದಿಜಿಯವರ ಕನಸಿನ ಯೋಜನೆಗಳಲ್ಲಿ ಒಂದಾದ ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಿದರೆ ಪ್ರತಿಯೊಬ್ಬರ ಆರೋಗ್ಯ ಸುಧಾರಿಸುವದರೊಂದಿಗೆ ಸ್ವಚ್ಛ ಪರಿಸರ ನಿರ್ಮಾಣವಾಗುವದು ಎಂದು ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.
ಅವರು ರವಿವಾರ ಸಮೀಪದ ಹೊಸೂರ ಗ್ರಾಮದಲ್ಲಿ ಸ್ವಚ್ಛಭಾರತ ಅಭಿಯಾನ ಅಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಹಾಗೂ ಸರ್ಕಾರಿ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸುವದರ ಮೂಲಕ ಅಭಿಯಾನಕ್ಕೆ ಚಾಲನೆಕೊಟ್ಟು ಮಾತನಾಡಿ ಸ್ವಚ್ಚ ಇದ್ದರೆ ಹರ, ಇಲ್ಲದಿದ್ದರೆ ಬರ ಎಂಬ ಧ್ಯೇಯ ವಾಕ್ಯದಂತಿರಬೇಕೆಂದರು. ಗ್ರಾಮದಲ್ಲಿ ಪ್ರಾರಂಭಿಸಿದ ಸ್ವಚ್ಛತಾ ಅಭಿಯಾನಕ್ಕೆ ಸಾರ್ವಜನಿಕರ ಸಹಭಾಗಿತ್ವ ಮತ್ತು ಸಹಕಾರ ತೊರಬೇಕೆಂದರು. ಈ ಸಂದರ್ಭದಲಿ ಬೈಲಹೊಂಗಲದ ಸ್ವಾಮಿ ವಿವೇಕಾನಂದ ಯುವ ಜಾಗೃತಿ ಸಮಿತಿ ಪದಾಧಿಕಾರಿಗಳು, ಗ್ರಾಮದ ಹಿರಿಯರಾದ ದೇಮಪ್ಪಾ ಯಡಾಲ, ಅಡಿವೆಪ್ಪ ನೇಸರಗಿ, ಅಜ್ಜಯ್ಯ ಗಣಾಚಾರಿ, ನಿವೃತ್ತ ಸಹಕಾರಿ ಸಂಘಗಳ ಸಹಾಯಕ ನಿಬಂದಕ ಎಸ್‌. ಬಿ ಇಂಗಳಗಿ, ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ಮಡಿವಾಳಪ್ಪಾ ಹೋಟಿ, ತಾಪಂ ಸದಸ್ಯ ಜಗದೀಶ ಬೂದಿಹಾಳ ಗ್ರಾಪಂ ಸದಸ್ಯ ಸೋಮಪ್ಪಾ ಮೇಳ್ಳಿಕೇರಿ, ಬಸವರಾಜ ದುಗ್ಗಾಣಿ, ಬಸಪ್ಪ ಹುಂಬಿ, ಉಳವಪ್ಪ ಶಿರಣ್ಣವರ, ದುಂಡಪ್ಪ ಪಣದಿ, ಮಲ್ಲಿಕಾರ್ಜುನ ಕರಡಿಗುದ್ದಿ, ಮಡಿವಾಳಪ್ಪಾ ಚಿಕ್ಕೋಪ್ಪ, ಮಡಿವಾಳಪ್ಪಾ ದುಗ್ಗಾಣಿ, ಬಸವರಾಜ ಮತ್ತಿಕೊಪ್ಪ. ಮಡಿವಾಳಪ್ಪಾ ಚಳಕೊಪ್ಪ, ಬಸವಣ್ಣೆಪ್ಪ ಚಳಕೊಪ್ಪ, ಬೈಲಪ್ಪ ಹುಂಬಿ, ಬಸವರಾಜ ಮೂಗಬಸವ, ಈಶ್ವರ ಬೋರಕನವರ, ಬಸವರಾಜ ವಿವೇಕಿ, ಮಡಿವಾಳಪ್ಪಾ ಜಾಧವ, ರಾಮು ಬಾಳೆಕುಂದರಗಿ, ಆನಂದ ಬೂದಿಹಾಳ, ಈರಣ್ಣ ಕಳ್ಳಿ, ಬಸವರಾಜ ನೇಸರಗಿ, ಸಂಜು ಹೊಸಮನಿ ಹಾಗೂ ಗ್ರಾಮಸ್ಥರು ಈ ಪಾಲ್ಗೊಂಡು ಬಿದಿಗಳನ್ನು ಸ್ವಚ್ಛಗೊಳಿಸಿದರು.

loading...