ಸ್ವಾಮಿವಿವೇಕಾನಂದರ ಜಯಂತಿ ನಿಮಿತ್ಯ ಉಚಿತ ಕಣ್ಣಿನ ತಪಾಸಣೆ

0
29
loading...

ಕನ್ನಡಮ್ಮ ಸುದ್ದಿ-ಆಲಮೇಲ: ಪಟ್ಟಣದಲ್ಲಿ ಜ.21 ರಂದು ಹಮ್ಮಿಕೊಂಡಿರುವ ಸ್ವಾಮಿ ವಿವೇಕಾನಂದರ 155 ನೇ ಜಯಂತ್ಯೋತ್ಸವದ ಅಂಗವಾಗಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಅನುಗ್ರಹ ವ್ಹಿಜನ್‌ ಪೌಂಡೇಶನ್‌ ಟ್ರಸ್ಟ ಮತ್ತು ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ ವಿಜಯಪುರ ಹಾಗೂ ಸ್ವಾಮಿವಿವೇಕಾನಂದ ಸೇನೆ ಆಲಮೇಲ ಇವರ ಸಹಯೋಗದೊಂದಿಗೆ ಶನಿವಾರ ಪಟ್ಟಣ ಪಂಚಾಯತ ಆವರಣದಲ್ಲಿ ಉಚಿತ ಕಣ್ಣಿನ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಜರಗಿತ್ತು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ ಡಾ.ಸಂದೀಪ ಪಾಟಿಲ ಮಾತನಾಡಿ ಮನುಷ್ಯನಿಗೆ ದೇಹದ ಎಲ್ಲ ಅಂಗಳಲ್ಲಿ ಕಣ್ಣು ಪ್ರಮುಖವಾಗಿದೆ ಪ್ರಪಂಚದಲ್ಲಿ ಏನೆ ನೋಡಬೇಕು ಮತ್ತು ಆನಂದಿಸಬೇಕಾದರೆ ಕಣ್ಣು ಅತಿ ಪ್ರಮುಖವಾಗಿದೆ. ಯುವಕರು ಜೀವನದಲ್ಲಿ ಯಾವದೇ ದುಷ್ಟಚಟಗಳಿಗೆ ಮೋರೆ ಹೋಗದೆ ಆರೋಗ್ಯ ಕಡೆ ಗಮನ ಹರಿಸಬೇಕು ದೈಹಿಕವಾಗಿ ಯಾರು ಆರೋಗ್ಯವಾಗಿರುತ್ತಾರೊ ಅವರು ಮಾನಸಿಕವಾಗಿ ನೆಮ್ಮದಿಯಿಂದ ಇರುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಪ್ರದೀಪ್‌ ಗೌರ ಉದ್ಘಾಟಿಸಿದರು,ಅಶೋಕ ಕೋಳಾರಿ,ಮುನ್ನಾ ತಾಂಬೂಳಿ,ಡಾ,ಶ್ರೀಶೈಲ ಪಾಟೀಲ,ಡಾ, ರಾಜೇಶ ಪಾಟಿಲ, ಡಾ,ಪ್ರಶಾಂ ದೂಮಗೊಂಡ, ಅಜಯಕುಮಾರ ಭಂಟನೂರ, ವಿಶ್ವನಾಥ ಹೀರೆಮಠ, ವಿಶ್ವನಾಥ ಅಮರಗೊಂಡ,ಅಮೃತ್‌ ಕೊಟ್ಟಲಗಿ, ಸುನಿಲ ತೆಲ್ಲೂರ, ವಿನಾಯಕ ಮಠಪತಿ, ಆದರ್ಶ ಅಕ್ಕಲಕೋಟ್‌, ರತನ್ನ ಭಳಗಾರ ಇತರರು ಉಪಸ್ಥಿತರಿದ್ದರು.

loading...