ಸ್ವಾಮಿ ವಿವೇಕಾನಂದರ ಚಿಂತನೆ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಿ: ಶಾಸಕ ಪಾಟೀಲ

0
31
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಭವ್ಯ ಭಾರತ ನಿರ್ಮಾಣವಾಗಬೇಕಾದರೆ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.
ಅವರು ಈಚೆಗೆ ಮತಕ್ಷೇತ್ರ ಆನಿಗೋಳ ಗ್ರಾಮದಲ್ಲಿ ಡಾ.ವಿಶ್ವನಾಥ ಪಾಟೀಲ ಅಭಿಮಾನಿ ಬಳಗ, ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 155ನೇ ಜಯಂತಿ, ಸುಭಾಸಚಂದ್ರ ಬೋಸ್‌ 121ನೇ ಜಯಂತಿ ಹಾಗೂ ಅಜಾತ ಶತ್ರು ಅಟಲಬಿಹಾರಿ ವಾಜಪೇಯಿಯವರ 93ನೇ ಜನ್ಮ ದಿನದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿವೇಕಾನಂದರು ಕಂಡ ಕನಸುಗಳನ್ನು ನನಸುಗೊಳಿಸಲು ಸನ್ಮಾರ್ಗದಲ್ಲಿ ಸಾಗಬೇಕು. ಇದೇ ಅವರಿಗೆ ಸಲ್ಲಿಸುವ ಬಹುದೊಡ್ಡ ಗೌರವವಾಗಿದೆ ಎಂದರಲ್ಲದೆ ಗೆಳೆಯರ ಬಳಗದಿಂದ ಅದ್ದೂರಿ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಸಂಸದ ಸುರೇಶ ಅಂಗಡಿ, ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬ್ರಷ್ಟಾಚಾರ ರಹಿತ ಆಡಳಿತ ನಡೆಸಿ ದೇಶದ ಆರ್ಥಿಕ ಪರಿಸ್ಥಿಯನ್ನು ಉಚ್ಚಸ್ಥಿಯಲ್ಲಿ ಕೊಂಡೊಯ್ಯುತ್ತಿರುವ ಕಾರ್ಯವನ್ನು ವಿಶ್ವವೇ ಬೆರಗಾಗಿ ಭಾರತದತ್ತ ಮುಖ ಮಾಡುತ್ತಿರುವದು ಸಂತಸವಾಗುತ್ತಿದೆ ಎಂದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿ ಬಿ.ಎಸ್‌.ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಠ ಗುರುಪಾದ ಕಳ್ಳಿ, ಗೂಳಪ್ಪ ಹೊಸಮನಿ, ಧನಂಜಯ ಜಾದವ, ಮಡಿವಾಳಪ್ಪಾ ಹೋಟಿ, ಬಸನಗೌಡ ಪಾಟೀಲ, ಆಯ್‌. ಎಲ್‌ ಪಾಟೀಲ, ಬೊಮ್ಮನಾಯ್ಕ ಪಾಟೀಲ, ಸಿ. ಕೆ ಮೆಕ್ಕೇದ ಮುಂತಾದವರು ಇದ್ದರು. ಬಸವರಾಜ ಭಜಂತ್ರಿ, ನೀಲವ್ವಾ ರಾಮಲಿಂಗಪ್ಪಾ ಫಕ್ಕೀರಣ್ಣವರ, ಮಲ್ಲೇಶ ಆದೆನ್ನವರ, ನಾರಯಣ ನಲವಡೆ, ಸಿದ್ದನಗೌಡ ಸನ್ನನಾಯ್ಕರ, ರಮೇಶ ಪಾಟೀಲ, ಗುರುನಾಥ ಹೊಂಗಲ, ಸಂಗಪ್ಪ ಫಕ್ಕೀರನ್ನವರ, ಚನ್ನಯ್ಯ ಹುಗ್ಗಿ, ಮಲ್ಲೇಶಪ್ಪ ಕುರಿ, ಸುರೇಶ ತಳವಾರ, ಅಜ್ಜಯ್ಯ ಪೂಜಾರ, ಗುರಯ್ಯ ಪೂಜಾರ, ಆನಂದ ಮಾಳಗಿ, ಈರಯ್ಯ ಪೂಜಾರ, ಈರಣ್ಣ ಹೊಸಮನಿ, ರುದ್ರಪ್ಪ ಹೊಮಗಲ, ನಾಗೇಶ ಫಕ್ಕೀರನ್ನವರ, ಮಂಜುನಾಥ ಮಾಳಗಿ, ಮಾರುತಿ ದಳವಾಯಿ, ಸೋಮಪ್ಪ ಗೋಕನ್ನವರ, ಬಸವರಾಜ ಸುಣಗಾರ, ಸೋಮಪ್ಪ ಮಡ್ಡಿಕಾರ, ಮುದಕಪ್ಪ ಕಲ್ಲಪ್ಪನವರ, ಶಾಂತಯ್ಯ ಸಂಬಾಳದ, ಪ್ರಶಾಂತ ಗುಲಗುಲಿ, ರಮೇಶ ಹೂಗಾರ, ಬಸವರಾಜ ಅಮಟೂರ, ರಮೇಶ ಮಡ್ಡಿಕಾರ, ಬಸವರಾಜ ಯರಗುದ್ದಿ, ರಿಯಾಜ ಮುಲ್ಲಾ ಹಾಗೂ ಸಾವಿರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

loading...