ಹಳ್ಳಿಗಳ ಗುಣಾತ್ಮ ಬದಲಾವಣೆಗೆ ಪ್ರಯತ್ನ : ಪಾಟೀಲ

0
22
loading...

ಗದಗ: ರಾಜ್ಯ ಸರಕಾರವು ಸಂವಿಧಾನದ ಸದಾಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಗ್ರಾಮ ಸ್ವಾರಜ್‌ ಹಾಗೂ ಪಂಚಾಯತರಾಜ್‌ ಕಾನೂನಿನ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಸಮಾನತೆಯ ಜನಶಕ್ತಿಯನ್ನು ಜಾಗೃತೊಳಿಸಿ ಹಳ್ಳಿಗಳ ಬದುಕಿನಲ್ಲಿ ಗುಣಾತ್ಮ ಬದಲಾವಣೆಯ ಪ್ರಯತ್ನ ಮಾಡುವ ಮೂಲಕ ಹಂಗಿನ ಬದುಕಿನಿಂದ ಹಕ್ಕಿನ ಬದುಕಿನತ್ತ ಕೊಂಡೊಯ್ಯುತ್ತಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ, ಪಂಚಾಯತರಾಜ್‌ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ನುಡಿದರು.
ಗದುಗಿನ ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜರುಗಿದ 69ನೇ ಗಣರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ರಾಜ್ಯ ಸರಕಾರವು ಜನರ ಬದುಕು ಹಸನಾಗಬೇಕೆಂಬ ಸದಿಚ್ಛೆಯಿಂದ ಹಲವಾರು ಜನಪರ, ಜನಹಿತ ಯೋಜನೆಗಳನ್ನು ಜಾರಿಗೊಳಿಸಿದೆ. ಅನ್ನಭಾಗ್ಯದಿಂದ ಜನಸಾಮಾನ್ಯರ, ಕೂಲಿ ಕಾರ್ಮಿಕರ ಹಸಿವು ಇಂಗಿದೆ. ಗದುಗಿಗೆ ಸಂಬಂಧಿಸಿದಂತೆ 1488 ಕೋಟಿ ರೂ. ವೆಚ್ಚದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಮುಂಡರಗಿ ತಾಲೂಕಿನ 92,381 ಹಾಗೂ ಗದಗ ತಾಲೂಕಿನ 66,827 ಎಕರೆ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ನದಿ ನೀರು ಪೂರೈಸುವಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮವಾಗಿದ್ದು 1049 ಕೋಟಿ ವೆಚ್ಚದ ಈ ಕಾಮಗಾರಿಗೆ 2015ರಲ್ಲಿ ಮಾನ್ಯ ಮುಖ್ಯಮಂತ್ರಿಯವರು ಶಂಕು ಸ್ಥಾಪನೆ ನೆರವೇರಿಸಿದ್ದು ಮಲಪ್ರಭಾ ನದಿ ಮೂಲದಿಂದ ನರಗುಂದ, ಗಜೇಂದ್ರಗಡ, ರೋಣ ತಾಲೂಕು, ತುಂಗಭದ್ರಾ ನದಿ ಮೂಲದಿಂದ ಗದಗ, ಮುಂಡರಗಿ, ಶಿರಹಟ್ಟಿ ಲಕ್ಷ್ಮೇಶ್ವರ ತಾಲೂಕುಗಳಿಗೆ ನದಿ ನೀರು ಪೂರೈಸುವ ಮೂಲಕ ಮೇಲ್ಮೈ ಕುಡಿಯುವ ನೀರಿನ ಪೂರ್ಣಪ್ರಮಾಣದ ವ್ಯವಸ್ಥೆ ಹೊಂದಿರುವ ಮೊದಲ ಜಿಲ್ಲೆಯಾಗಿ ಗದಗ ಹೊರಹೊಮ್ಮಿದೆ ಅದರ ಲೋಕಾರ್ಪಣೆ ಶೀಘ್ರ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಶಿದ್ದಲಿಂಗ ನಗರ ಪ್ರೌಢ ಶಾಲೆ,ಪಾಶ್ರ್ವನಾಥ ಪ್ರೌಢ ಶಾಲೆ ಹಾಗೂ ಸಿ.ಡಿ.ಓ ಜೈನ್‌ ಪ್ರೌಢ ಶಾಲೆಯ ವಿಧ್ಯಾರ್ಥಿಗಳಿಂದ ದೇಶ ಭಕ್ತಿ ನೃತ್ಯ ತೋಂಟದಾರ್ಯ ಪ್ರೌಢ ಶಾಲೆ ವಿದ್ಯಾರ್ಥಿಗಳ ರೂಪಕ ಸಚಿವರ, ಗಣ್ಯರ, ವಿಧ್ಯಾರ್ಥಿಗಳ ಹಾಗೂ ಸಾರ್ವಜನಿಕರ ಪ್ರಶಂಸೆಗೆ ಒಳಗಾದವು.
ಗದಗ ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ವಿ. ಸಂಕನೂರ, ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ ಬಿ.ಬಿ.ಅಸೂಟಿ, ಉಪಾದ್ಯಕ್ಷ ಪ್ರಕಾಶ ಬಾಕಳೆ, ಜಿ.ಪಂ. ಉಪಾಧ್ಯಕ್ಷೆ ರೂಪಾ ಅಂಗಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭು ಬುರಬುರೆ, ಗದಗ ತಾ.ಪಂ. ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಉಪಾಧ್ಯಕ್ಷ ಎ.ಆರ್‌. ನಧಾಫ್‌. ಜಿಲ್ಲಾಧಿಕಾರಿ ಮನೋಜ ಜೈನÀ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಸೇರಿದಂತೆ ಮಾಜಿ ಶಾಸಕ ಡಿ.ಆರ.ಪಾಟೀಲ, ಸ್ವಾತಂತ್ರ್ಯ ಹೋರಾಟಗಾರರು ಇದ್ದರು.

loading...