ಹಾನಗಲ್‌ ತಾಲೂಕಾಡಳಿತದ ವರ್ತನೆ ಖಂಡಿಸಿ ಪತ್ರಕರ್ತರ ಪ್ರತಿಭಟನೆ

0
40
loading...

ಚಿಕ್ಕೋಡಿ 16: ಇತ್ತೀಚಿಗೆ ಪತ್ರಕರ್ತ ಮೌನೇಶ ಪೋತದಾರ ಅವರ ಶವವನ್ನು ಕಸದ ವಾಹನದಲ್ಲಿ ಹೊತ್ತೊಯ್ದ ಹಾನಗಲ್‌ ತಾಲೂಕಾಡಳಿತದ ಘಟನೆ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಕಪ್ಪು ಪಟ್ಟಿ ಧರಿಸಿ ರಾಜ್ಯ ಸರಕಾರಕ್ಕೆ ಚಿಕ್ಕೋಡಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚಿಗೆ ಅಪಘಾತದಲ್ಲಿ ನಿಧನ ಹೊಂದಿದ ಸುರೇಶ ಜಾಡರ, ಮೌನೇಶ ಪೋತದಾರ, ವೀರೇಶ ಹಿರೇಮಠ ಅವರ ಶೃದ್ಧಾಂಜಲಿ ಸಭೆ ನಡೆಸಿದ ನಂತರ ಅಲ್ಲಿಂದ ಉಪವಿಭಾಗಾಧಿಕಾರಿಗಳ ಕಛೇರಿಯವರೆಗೆ ಮೌನವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಕಾರಿ ಕಛೇರಿಯ ಗ್ರೇಡ್‌-2 ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.ಶೃದ್ಧಾಂಜಲಿ ಸಭೆಯಲ್ಲಿ ಪತ್ರಕರ್ತ ಚಂದ್ರಶೇಖರ ಚಿನಗೇಕರ ಮಾತನಾಡಿ, ಸಮಾಜದ ಓರೆ-ಕೋರೆಗಳನ್ನು ತಿದ್ದುವ ಪತ್ರಕರ್ತರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಇಂದಿನ ವ್ಯವಸ್ಥೆಗೆ ಸರಕಾರ ತಡೆನೀಡಬೇಕು. ಹಾನಗಲ್‌ ತಾಲೂಕಾಡಳಿತದ ವಿರುದ್ಧ ಸೂಕ್ತ ಕ್ರಮ ಕೈಕೊಳ್ಳಬೇಕು.

ರೈತರು, ಇನ್ನೀತರ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪರಿಹಾರ ನೀಡುವ ಸರಕಾರ ಪತ್ರಕರ್ತರಿಗೂ ಪರಿಹಾರ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.ಪತ್ರಕರ್ತ ಸಂಜಯ ಕಾಂಬಳೆ ಅಗಲಿದ ಪತ್ರಕರ್ತರ ಕಾರ್ಯಗಳನ್ನು ಪರಿಚಯಿಸಿ ವಿವರಿಸಿದರು. ಸಂಘದ ಅಧ್ಯಕ್ಷ ರಾಜೇಂದ್ರ ಕೋಳಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಪತ್ರಕರ್ತರಿಂದ ಬಡತನದಲ್ಲಿರುವ ಮೌನೇಶ ಪೋತದಾರ ಕುಟುಂಬದ ಸಹಾಯಾರ್ಥವಾಗಿ ಸಂಗ್ರಹಿಸಿದ 15 ಸಾವಿರ ಹಣವನ್ನು ಅವರ ಸಹೋದರರ ಖಾತೆಗೆ ನೀಡಲಾಯಿತು.ವಿ.ಕೆ. ರೇವಣಕರ, ರಾಜು ಸಂಕೇಶ್ವರಿ, ಚೇತನ ಹೊಳೆಪ್ಪಗೋಳ, ಸುಧಾಕರ ಕೋಳಿ, ಅಜೀತ ಸಣ್ಣಕ್ಕಿ, ಪರಮೇಶ್ವರ ಅಂಗಡಿ, ರಮೇಶ ಕವಟಗಿ, ಸಿದ್ದೇಶ ಪುಠಾಣೆ, ಮಹಾದೇವ ಪೂಜಾರಿ, ಶಿವಾನಂದ ಪದ್ಮಣ್ಣವರ, ಲೋಹಿತ ಶಿರೋಳ, ಕಾಶಿನಾಥ ಸುಳಕೂಡೆ, ಸಂಜಯ ಅವಘಡೆ, ಶಂಜಯ ಐನಾಪೂರೆ ಉಪಸ್ಥಿತರಿದ್ದರು.

loading...