ಹಾಲಿನ ದರ ಇಳಿಕೆ ಅಸಮಾಧಾನ: ದೇವಸ್‌

0
23
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಧಾರವಾಡ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ ಇಳಿಕೆ ಮಾಡಿರುವ ಬಗ್ಗೆ ಜೆಡಿಎಸ್‌ ತಾಲೂಕಾ ಕಾರ್ಯಾಧ್ಯಕ್ಷ ಎನ್‌ವಿ ಭಟ್ಟ ದೇವಸ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ಪಕ್ಷದ ಕಛೇರಿಯಲ್ಲಿ ಕರೆದ ಪತ್ರಿಕಾಗೋ಼ಷ್ಠಿಯಲ್ಲಿ ಮಾತನಾಡಿ ಧಾರವಾಡ ಹಾಲು ಒಕ್ಕೂಟವು ರೈತರಿಂದ ಖರೀದಿಸುವ ಹಾಲಿನ ದರವನ್ನು 1.60 ರೂ ಗೆ ಖಡಿತÀಗೊಳಿಸಿರುವದರಿಂದ ನಷ್ಟವುಂಟಾಗುತ್ತಿದೆ. ರೈತರಿಂದ ಪಡೆಯುವ ಹಾಲಿನ ದರದಲ್ಲಿ ಮಾತ್ರ ಕಡಿಮೆ ಮಾಡಿದೆ.ಅದೇರೀತಿ ಗ್ರಾಹಕರಿಗೂ ದರ ಕಡಿಮೆಗೊಳಿಬೇಕು. ಪಶು ಆಹಾರ ಮಾರಾಟಕ್ಕಾಗಿ ಮಾತ್ರ ರೈತರನ್ನು ಬಳಸಿಕೊಳ್ಳುತ್ತಿದೆ. ಅದರಲ್ಲಿ ಹೆಚ್ಚಿನ ಆದಾಯ ಒಕ್ಕೂಟಕ್ಕಿದೆ. ಹಾಲಿನ ದರ ಹೆಚ್ಚಿಸಿದರೆ ನಷ್ಟವಾಗುತ್ತಿದೆ. ಎಂದು ರೈತನ ಜೇಬಿಗೆ ಕತ್ತರಿಹಾಕುವದು ಸರಿಯಾದ ಕ್ರಮವಲ್ಲ. ಧಾರವಾಡ ಹಾಲು ಒಕ್ಕೂಟವು ದರ ಏರಿಸಬೇಕಾದರೆ ಸರಕಾರಕ್ಕೆ ಪತ್ರ ಬರೆದು ಅನುಮೋದನೆ ಪಡೆದುಕೊಳ್ಳುತ್ತದೆ ಆದರೆ ದರ ಇಳಿಸುವಾಗ ಮಾಹಿತಿಯೇ ನೀಡುವದಿಲ್ಲ ಎಂದ ಅವರು ರೈತರಿಗಾಗುವ ನಷ್ಟದ ಕುರಿತು ರೈತರಿಂದಲೇ ಆಯ್ಕೆಯಾದ ಒಕ್ಕೂಟದ ನಿರ್ದೇಶಕರು ಮೌನವಹಿಸಿದ್ದಾರೆ ಎಂದು ದೂರಿದರು.
ಪ.ಪಂ ಸದಸ್ಯ ರವಿಚಂದ್ರ ನಾಯ್ಕ ಮಾತನಾಡಿ ಪ.ಪಂನಿಂದ ಬಿಡುಗಡೆಯಾದ ಹಣವನ್ನು ವಾರ್ಡ ಸದಸ್ಯರ ಗಮನಕ್ಕೆ ತರದೇ ಏಕರೂಪವಾಗಿ ಸ್ಥಳಿಯ ಶಾಸಕರು ನೀರ್ಣಯ ಕೈಗೊಂಡು ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸುತ್ತಿದ್ದಾರೆ ಎಂದರು.ಪತ್ರಿಕಾಗೋ಼ಷ್ಠಿಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಪೀರಸಾಬ್‌ ,ಪ.ಪಂ ಸದಸ್ಯ ರಾಘು ದೇವಾಡಿಗ,ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸರಸ್ವತಿ ಗುನಗಾ, ಇಡಗುಂದಿ ಮಂಡಳ ಅಧ್ಯಕ್ಷ ನಾರಾಯಣ ಭಟ್ಟ ಮತ್ತಿತರರು ಇದ್ದರು.

loading...