ಹಿಂದೂಗಳು ಶಸ್ತ್ರಸಜ್ಜಿತರಾಗಬೇಕು: ಸಾದ್ವಿ ಸರಸ್ವತಿ

0
25
loading...

ನಿಪ್ಪಾಣಿ 13: ದೇಶದ ಧರ್ಮ,ಸಂಸ್ಕೃತಿ ಉಳಿಸಲು ಹಿಂದುಗಳು ಶಸ್ತ್ರಸಜ್ಜಿತರಾಗಬೇಕು.ಯಾರೇ ಬಂದರೂ ರಾಮ ಮಂದಿರ ನಿರ್ಮಾಣ ಖಚಿತ ಎಂದು ಮಧ್ಯಪ್ರದೇಶದ ಸಾಧ್ವಿ ಸರಸ್ವತಿ ಹೇಳಿದರು.ಪಟ್ಟಣದಲ್ಲಿ ಶನಿವಾರ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಶ್ರೀರಾಮ ಸೇನೆ ವತಿಯಿಂದ ಆಯೋಜಿಸಲಾಗಿದ್ದ ಭವ್ಯ ವಿರಾಟ ಹಿಂದೂ ಮಹಾಸಮ್ಮೇಳನದಲ್ಲಿ ಮಾತನಾಡಿದರು.ಲವ್‌ಜಿಹಾರದ ಹೋಗಲಾಡಿಸಲು ಪ್ರತಿಯೋರ್ವ ತಾಯಿ ತನ್ನ ಮಗಳಿಗೆ ಸನಾತನ ಧರ್ಮದ ಬಗ್ಗೆ ತಿಳಿಸಿಕೊಡಬೇಕು.ಸಹೋದರ ರಕ್ಷಾಬಂಧನದ ದಿನ ತನ್ನ ಸಹೋದರಿಗೆ ಓಮದು ತಲವಾರ (ಖಡ್ಗ) ಕೊಡುಗೆ ನೀಡಬೇಕು.ನ್ಮಮ ಓರ್ವ ಸೈನಿಕ ಮೃತಪಟ್ಟರೆ ಪಾಕಿಸ್ತಾನದ ಸಾವಿರ ಸೈನಿಕರನ್ನು ಹೊಡೆದುರುಳಿಸಬೇಕು.ತಾಯಿ ತನ್ನ ಓರ್ವ ಪುತ್ರನನ್ನು ದೇಶರಕ್ಷಣೆಗೆ ಮೀಸಲಿಡಬೇಕು. ರಾಮ,ಹನುಮ,ಶಿವಾಜಿ,ವಿವೇಕಾನಂದರಂತಹ ನಮ್ಮ ಮಹಪುರುಷರ ಉತ್ಸವ ನಡೆಸಲು ಪ್ರತಿಬಂಧ ಸರಕಾರ ಹೇರುತ್ತದೆ.ಹಗಾದರೆ ನವೇನು ಟಿಪ್ಪುಸುಲ್ತಾನ ಜಯಂತಿ ಮಾಡಬೇಕೆ?ಭಾರತದಲ್ಲಿ ಎಲ್ಲಿಯೂ ನಡೆಯದಂತಹದ್ದು ಕರ್ನಾಟಕದಲ್ಲಿ ಮತ್ರ ನಡೆಯುತ್ತದೆ.ಹಿಂದುಗಳ ಸ್ಥಿತಿ ದಯನೀಯವಾಗಿದೆ.ಹಿಂದುಗಳು ಭಾರತದಲ್ಲಿ ಬದುಕುವುದು ಕಠೀಣವಾಗಿದೆ.ರಾಮಮಂದಿರ ನಿರ್ಮಾಣ,ಗೋ ಹತ್ಯೆ ನಿಷೇಧ,ಮತಾಂತರ ಕುಕೃತ್ಯ ತಡೆಯುವ ಪಕ್ಷಕ್ಕೆ ಮಾತ್ರ ನಿಮ್ಮ ಮತಿ ನೀಡಿ.70 ವರ್ಷವಾದರೂ ರಾಜಕಾರಣಿಗಳು ಇನ್ನೂ ರಸ್ತೆ,ನೀರು,ಗಟಾರವನ್ನೇ ಕೊಡುತ್ತೇನೆ ಎಂದು ಹೇಳುತ್ತಾರೆ.ಉಗ್ರವಾದ,ಇಸ್ಲಾಂವಾದವನ್ನು ಕಾಂಗ್ರೆಸ್‌ ಪ್ರೋತ್ಸಾಹ ನೀಡಿದೆ.ದೇಶದಲ್ಲಿ 19 ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದ್ದರೂ ಪಿಎಫ್‌ಐ ಏಕೆ ನಿಷೇಧಿಸಿಲ್ಲ?.ಗೋವಾದಲ್ಲಿ ಬಿಜೆಪಿ ಸರಕಾರವಿದ್ದರೂ ಫಾರೆನ್‌ ಡ್ರಗ್‌ ಮಾಫಿಯಾ ನಡೆಯುತ್ತಿದ್ದರೂ 4 ವರ್ಷ ಪ್ರಮೋದ ಮುತಾಲಿಕನನ್ನು ಬ್ಯಾನ್‌ ಮಾಡಿದ್ದೇಕೆ?ಎಂದು ಕಾಂಗ್ರೆಸ್‌,ಬಿಜೆಪಿ ಮತ್ತು ಮುಸ್ಲಿಂರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.5 ಸಾವಿರಕ್ಕೂ ಹೆಚ್ಚಿನ ಜನ ಪಾಲ್ಗೊಂಡಿದ್ದರು.

loading...