ಹುನಗುಂದವನ್ನು ಮಾದರಿ ತಾಲೂಕಾಗಿ ಮಾಡಲಾಗುವುದು: ಕಾಶಪ್ಪನವರ

0
20
loading...

ಕನ್ನಡಮ್ಮ ಸುದ್ದಿ-ಹುನಗುಂದ: ಕಳೆದ 30ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿ ಕಳೆಗುಂದಿದ್ದ ಈ ಕ್ಷೇತ್ರಕ್ಕೆ ಹಲವಾರು ಯೋಜನೆಗಳ ಮೂಲಕ ಸಾಕಷ್ಟು ಅನುದಾನ ತಂದು ಪ್ರತಿ ಗ್ರಾಮ ಮತ್ತು ನಗರಗಳ ಮೂಲ ಸೌಕರ್ಯಗಳಿಂದ ಅಭಿವೃದ್ಧಿ ಪಡೆಸಿದ್ದು. ಇನ್ನು ಹೆಚ್ಚಿನ ಅನುದಾನವನ್ನು ತಂದು ಹುನಗುಂದನ್ನು ಮಾದರಿ ತಾಲೂಕನ್ನಾಗಿ ಮಾಡಲಾಗುವುದು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಅವರು ಇಲ್ಲಿನ ಮಹಾಂತ ವೃತ್ತ ಬಳಿ ಪುರಸಭೆ ಮತ್ತು ಕರ್ನಾಟಕ ಗೃಹ ಮಂಡಳಿ ಬೆಂಗಳೂರ ಹಮ್ಮಿಕೊಂಡ ನಗರೋತ್ಥಾನ-3 ರ ಯೋಜನೆಯಡಿ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತ 1 ಮತ್ತು 2ನೇ ಹಂತದ ನಗರೋತ್ಥಾನ ಅಭಿವೃದ್ದಿಯಲ್ಲಿ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವದರೊಂದಿಗೆ 150 ಕಿ.ಮೀಗಳಷ್ಟು ರಸ್ತೆ ಡಾಂಬರೀಕರಣ ಮತ್ತು ಗ್ರಾಮಗಳ ಎಲ್ಲ ಕಾಲೋನಿಗಳಿಗೂ ಸಿಸಿ ಚರಂಡಿ ನಿರ್ಮಿಸಿ ಅಭಿವೃದ್ಧಿಪಡಿಸಿದೆ.
ಮಹಾಂತೇಶ ಅವಾರಿ ಮಾತನಾಡಿ ಸಾಮಾಜಿಕ ನ್ಯಾಯದ ಉದ್ದೇಶದಿಂದ ಪ್ರತಿಯೊಂದು ಸಮುದಾಯಗಳಿಗೆ ಸಮುದಾಯ ಭವನಗಳನ್ನು ನೀಡಿದ್ದಲ್ಲದೇ ಸತತ ಎರಡು ವರ್ಷಗಳಿಂದ ಬೀಕರ ಬರಗಾಲಕ್ಕೆ ತುತ್ತಾಗಿ ಜನರು ಗೂಳೆ ಹೋಗುವ ಸಂದರ್ಭದಲ್ಲಿ ಸಿ.ಎಂ ಸಿದ್ದರಾಮಯ್ಯನವರು ಉಚಿತ ಅಕ್ಕಿಯನ್ನು ನೀಡಿ ದೀನ, ದಲಿತ,ಬಡವರ ಹಸಿವುವನ್ನು ಹಿಂಗಿಸಿದ್ದಲ್ಲದೇ ರೈತ ನಕ್ಕರೇ ದೇಶ ಸಕ್ಕರೆ ಎಂಬಂತೆ ರಾಜ್ಯದಲ್ಲಿಯೇ ಅತೀ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಿ ರೈತರ ಹೊಲಗಳಿಗೆ ಸಮತೋಲನ ಕಾಯುವಂತೆ ಮಾಡಿದರು,ರಾಜ್ಯದಲ್ಲಿ ಬರಗಾಲದ ಬವಣೆಗೆ ನಲುಗುತ್ತಿದ್ದ ಪ್ರತಿಯೊಬ್ಬ ರೈತರ 50 ಸಾವಿರ ಸಾಲ ಮನ್ನಾ,ಅದರಲ್ಲಿ ವಿಶೇಷವಾಗಿ ನೇಕಾರ ಸಾಲವನ್ನು ಮೂರು ಬಾರಿ ಮನ್ನಾ ಮಾಡಿದ ಸರ್ಕಾರ ಸಿದ್ದರಾಮಯ್ಯನವರ ಸರ್ಕಾರವಾಗಿದೆ ಎಂದರು.
ತಾ.ಪಂ ಅಧ್ಯಕ್ಷ ಅರವಿಂದ ಈಟಿ, ಉಪಾಧ್ಯಕ್ಷ ಮಹಿಬೂಬಅಲಿ ಮುಲ್ಲಾ,ತಾ.ಪಂ ಸದಸ್ಯ ಅನೀಲ ನಾಡಗೌಡ, ಗ್ರಾಪಂ ಅಧ್ಯಕ್ಷೆ ಶೋಭಾ ವಡ್ಡರ, ಉಪಾಧ್ಯಕ್ಷೆ ಗಂಗಮ್ಮ ಕುಂಬಾರ, ಪುರಸಭೆ ಸದಸ್ಯ ಸಂಗಪ್ಪ ಹೂಲಗೇರಿ, ಗಂಗಮ್ಮ ವೀರಾಪೂರ, ಭಾಗ್ಯಶ್ರೀ ಕುಷ್ಟಗಿ, ಭಾಗ್ಯಶ್ರೀ ಬಲಗೌಡರ, ನಾಗಮ್ಮ ದಿವಟಗಿ, ಅಲ್ಲಸಾಬ ತಾಳಿಕೋಟಿ, ಇಮಾಮಹುಸೇನ ಗಡೇದ, ಮೌನೇಶ ಕಮ್ಮಾರ, ಸಹಾಯಕ ಅಭಿಯಂತರ ಗೋವಿಂದ ಬಂಡಿವಡ್ಡರ, ಶೇಖರಪ್ಪ ಬಾದವಾಡಗಿ, ನೀಲಪ್ಪ ತಪೇಲಿ, ಯಮನಪ್ಪ ಬೆಣ್ಣಿ, ಬಿ.ವ್ಹಿ.ಪಾಟೀಲ, ದಾನಮ್ಮ ಹಾದಿಮನಿ ಇತರರು ಉಪಸ್ಥಿತರಿದ್ದರು. ರಾಜಕುಮಾರ ಬಾದವಾಡಗಿ ಸ್ವಾಗತಿಸಿದರು. ಶಿಕ್ಷಕ ಎಸ್ಕೆ ಕೊನೆಸಾಗರ ನಿರೂಪಿಸಿದರು. ಮುಖ್ಯಾಧಿಕಾರಿ ಐ.ಜಿ.ಕೊಣ್ಣೂರ ವಂದಿಸಿದರು.

loading...