ಹೆಲ್ಮೇಟ್‌ ರಹಿತ ಪ್ರಯಾಣ ಅಸುರಕ್ಷಿತ: ಡಿವಾಯ್‌ಎಸ್‌ಪಿ ಪ್ರಭು ಡಿ.ಟಿ

0
35
loading...

ಸಂಕೇಶ್ವರ 20:ಅಸುರಕ್ಷಿತ ಪ್ರಯಾಣದಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಸಂಕೇಶ್ವರ ಪೊಲೀಸರಿಂದ ಸುರಕ್ಷಿತ ಪ್ರಯಾಣದ ಜಾಗೃತಿ ಮೂಡಿಸುವ ಗುಣಮಟ್ಟದ ಹೆಲ್ಮೇಟ್‌ ಧರಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.ಶನಿವಾರ ಪೊಲೀಸ ಠಾಣೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸ ಸಿಬ್ಬಂದಿಯವರು ಗುಣಮಟ್ಟದ ಹೆಲ್ಮೇಟ್‌ ಧರಿಸಿಕೊಳ್ಳಲು ಸಾರ್ವಜನಿಕರಲ್ಲಿ ಜಾಗೃತಿ ಜಾಥಾ ನಡೆಸಿ ಹೆಲ್ಮೆಟ್‌ ಬಗ್ಗೆ ಅರಿವು ಮೂಡಿಸಿದರು.ಪಟ್ಟಣದ ಚನ್ನಮ್ಮಾ ವೃತ್ತದಲ್ಲಿ ಜಾಥಾ ಮುಕ್ತಾಯಗೊಳಿಸಿ ಮಾತನಾಡಿದ ಡಿ.ವಾಎಸ್‌ಪಿ ಪ್ರಭು ಡಿ.ಟಿ ಪ್ರತಿಯೊಬ್ಬರ ಜೀವವು ಅಮೂಲ್ಯವಾದದ್ದು ಯಾರು ಸಂಚಾರಿ ನಿಯಮಗಳನ್ನ ಉಲಂಘಿಸಬಾರದು. ನಿಮ್ಮ ಜೀವಕ್ಕೆ ಹೆಲ್ಮೇಟ್‌ ರಕ್ಷಣೆ ನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬ ಬೈಕ್‌ ಸವಾರರು ಗುಣಮಟ್ಟದ ಹೆಲ್ಮೆಟ್‌ ಧರಿಸಬೇಕು ಎಂದು ಸಾರ್ವಜನಿಕರಲ್ಲಿ ಅಪಘಾತ ಮತ್ತು ಸಂಚಾರಿ ನಿಯಮದ ಕುರಿತು ತಿಳಿಸಿದರು.ಈ ಸಂಧರ್ಭದಲ್ಲಿ ಹುಕ್ಕೇರಿ ಸಿ.ಪಿ.ಐ ಸಂದೀಪ್‌ಸಿಂಗ್‌ ಮುರಗೋಡ, ಪಿಎಸ್‌ಐ ಎಚ್‌.ಡಿ. ಮುಲ್ಲಾ, ಎಎಸ್‌ಐ ಮ್ಯಾಗಡೆ, ಸಿಬ್ಬಂದಿಗಳಾದ ಮಂಜುನಾಥ ಕಬ್ಬೂರಿ, ಮಲ್ಲಿಕಾರ್ಜುನ ಕಾಮತಮನಿ, ಮಾಳಗಿ, ಶ್ರೀಶೈಲ ಪೂಜೇರಿ ಇದ್ದರು.

loading...