0
22
loading...

ಕನ್ನಡಮ್ಮ ಸುದ್ದಿ-ಕುಮಟಾ: ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಆ ಪ್ರತಿಭೆ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಅಲ್ಲದೇ ಪ್ರತಿಯೊಬ್ಬರ ಆಸಕ್ತಿಗಳು ವಿಭಿನ್ನವಾಗಿರುತ್ತವೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕಠಿಣ ಪರಿಶ್ರಮದಿಂದ ಮುನ್ನಡೆದರೆ ಯಶಸ್ಸು ಪಡೆಯಲು ಸಾಧ್ಯ ಎಂದು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ನಾಗರಾಜ ನಾಯಕ ಹೇಳಿದರು.
ಅವರು ಶನಿವಾರ ತಾಲೂಕಿನ ಗೋಕರ್ಣದ ಮೊಡರ್ನ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ನ್ಯಾಷನಲ್‌ ಡಿಜಿಟಲ್‌ ಲಿಟ್ರಸಿ ಮಿಷನ್‌ ಅಡಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಲಾಯನ್ಸ್‌ ಕ್ಲಬ್‌ ಸದಸ್ಯ ಮಂಜುನಾಥ ಜನ್ನು ಅವರು ಮಾತನಾಡಿ, ಮಕ್ಕಳನ್ನು ಒಂದು ಸದೃಢ ಶಕ್ತಿಯನ್ನಾಗಿ ರೂಪಿಸುವಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ನಾಗರಾಜ ನಾಯಕ ತೊರ್ಕೆಯವರು ನಿವೃತ್ತಿಯ ಬಳಿಕ ಸಂಪೂರ್ಣವಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಸರಕಾರ ಹುಟ್ಟಿದ ಮಗುವಿನಿಂದ ವೃದ್ಧರವರೆಗೂ ಹಲವು ಯೊಜನೆಗಳನ್ನು ರೂಪಿಸಿದೆ. ಆದರೆ ಅವುಗಳನ್ನು ಅರ್ಹರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಯಾರೂ ಕೂಡಾ ಮಾಡುತ್ತಿಲ್ಲ. ಆದರೆ ಓರ್ವ ಖಾಸಗಿ ವ್ಯಕ್ತಿಯಾಗಿ ನಾಗರಾಜ ನಾಯಕ ತೊರ್ಕೆಯವರು ತಮ್ಮ ಟ್ರಸ್ಟ್‌ ಮೂಲಕ ಈ ಎಲ್ಲಾ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಅವಿಶ್ರಾಂತರಾಗಿ ಶ್ರಮಿಸುತ್ತಿದ್ದಾರೆ ಎಂದರು.
ಸಂತೋಷ ನಾಯಕ ತೊರ್ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿ ಕೆ ಹೆಗಡೆ, ನಾಗರಾಜ ಹಿತ್ಲಮಕ್ಕಿ, ಮಹೇಶ ಶೆಟ್ಟಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯಾಧ್ಯಾಪಕ ರಾಜೇಶ ಗೋನ್ಸಾಲ್ವಿಸ್‌ ಸ್ವಾಗತಿಸಿದರು. ಅರುಣ ಕವರಿ ಹಾಗೂ ಶೀಲಾ ಮೇಸ್ತ ನಿರೂಪಿಸಿದರು. ಜಮಿಯಾನಾ ಸೈಯ್ಯದ್‌ ವಂದಿಸಿದರು.

loading...